Advertisement
ಹಕ್ಕುಚ್ಯುತಿ ಮಂಡಿಸುವೆಬೆಂಗಳೂರು: ಪೊಲೀಸರ ಗೋಲಿಬಾರ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ಸಾಂತ್ವನ ಹೇಳಲು ಮಂಗಳೂರಿಗೆ ತೆರಳಲು ಅವಕಾಶ ನೀಡದಿರುವುದರ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಅಲ್ಲದೆ, ಕೊಪ್ಪಳ, ಬೀದರ್, ತುಮಕೂರಿನಲ್ಲಿ ಯಾವುದೇ ಗಲಾಟೆಯಾಗುತ್ತಿಲ್ಲ. ಆದರೂ, ಅಲ್ಲಿ ನಿಷೇಧಾಜ್ಞೆ ಜಾರಿ ಏಕೆ?ಎಂದು ಕಿಡಿಕಾರಿದರು. ಕಾವೇರಿ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಪರಿ ಹೀಗಿತ್ತು;
Related Articles
Advertisement
* ಸರ್ಕಾರಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡಲು ಹಲವು ದಾರಿಗಳಿದ್ದವು. ಸರ್ಕಾರ ಹಾಗೂ ಪೊಲೀಸರು ತಪ್ಪು ಮುಚ್ಚಿಕೊಳ್ಳುವುದಕ್ಕಾಗಿ ನಮಗೆ ಮಂಗಳೂರು ಭೇಟಿಗೆ ಅವಕಾಶ ಕೊಡುತ್ತಿಲ್ಲ. ಆದರೆ, ಯಡಿಯೂರಪ್ಪ, ಗೃಹ ಸಚಿವರ ಮಂಗಳೂರು ಭೇಟಿಗೆ ಅವಕಾಶ ಕೊಡುತ್ತಾರೆ. ಅಲ್ಲಿನ ಪರಿಸ್ಥಿತಿ ಸರಿಯಿಲ್ಲ ಎಂದು ಹೇಳುವ ಪೊಲೀಸರು ಇವರಿಗೇಕೆ ಅವಕಾಶ ಕೊಟ್ಟಿದ್ದಾರೆ.
* ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ನಾವು ನಿರ್ಬಂಧ ಹೇರಿರಲಿಲ್ಲ. ಎಲ್ಲರಿಗೂ ಭೇಟಿಗೆ ಅವಕಾಶ ಕೊಟ್ಟಿ¨ªೆವು. ಕಾವೇರಿ ಗಲಾಟೆಯಲ್ಲಿ ಮಾತ್ರ 144 ನಿಷೇಧಾಜ್ಞೆ ಹಾಕಲಾಗಿತ್ತು . ಅದೂ ಸಹ 24 ಗಂಟೆ ಮಾತ್ರ.
* ರಾಜ್ಯದಲ್ಲಿ ಗೃಹ ಸಚಿವರು ಇದ್ದಾರೋ, ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ. ಪೊಲೀಸರೇ ಗೋಲಿಬಾರ್ ಮಾಡುತ್ತಾರೆ ಎಂದ ಮೇಲೆ ಗೃಹ ಸಚಿವರು ಇರುವುದಾದರೂ ಏಕೆ? ಇದೆಲ್ಲದಕ್ಕೆ ಸದನದಲ್ಲಿ ಉತ್ತರ ಕೊಡೋದು ಪೊಲೀಸರೇ ಅಥವಾ ಗೃಹ ಸಚಿವರೇ?.
* ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರು ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆಯೇ ನಡೆಯಬೇಕು.
* ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರೇ ಕಾರಣ. ಅವರಿಬ್ಬರೇ ನೇರ ಹೊಣೆ ಹೊರಬೇಕು. ಉತ್ತರ ಪ್ರದೇಶದಲ್ಲಿ ಹನ್ನೊಂದು ಮಂದಿ ಪ್ರಾಣತೆತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲೂ ಅಮಾಯಕರ ಬಲಿಯಾಗಿದೆ. ದೇಶದ ಸ್ವಾತಂತ್ರಕ್ಕಾಗಿ ಬಿಜೆಪಿಯ ಯಾವ ನಾಯಕರೂ ಹೋರಾಡಿದವರಲ್ಲ.
* ನಾನು ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ಲಾಠಿಚಾರ್ಚ್ ಮಾಡಿಸಿರಲಿಲ್ಲ. ಕೇಂದ್ರದ ಮಂತ್ರಿಯೇ “ಗುಂಡು ಹಾರಿಸಿ’ ಎಂದು ಇಲ್ಲಿನ ಪೊಲೀಸರಿಗೆ, ಸರ್ಕಾರಕ್ಕೆ ಸೂಚಿಸುತ್ತಾರೆ. ಇದು ಪ್ರಜಾಪ್ರಭುತ್ವ, ಸಂವಿಧಾನ ಬಾಹಿರ ನಡೆ. ಹೀಗಾಗಿ, ಕೇಂದ್ರ ಸಚಿವ ಸುರೇಶ್ ಅಂಗಡಿ ವಿರುದ್ಧ ಕ್ರಮ ಜರುಗಿಸಬೇಕು.
* ಮಂಗಳೂರಿಗೆ ಬರದಂತೆ ನನಗೆ ನೋಟಿಸ್ ನೀಡಿದ್ದಾರೆ. ರೈಲು, ಬಸ್ಸು, ಕಾರಿನಲ್ಲಿ ಬರದಂತೆಯೂ ಸೂಚಿಸಿದ್ದಾರೆ. ಇದನ್ನೆಲ್ಲಾ ನೋಡಿದರೆ ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೇ?, ವಿರೋಧ ಪಕ್ಷ ಇರುವುದು ಏಕೆ? ಎಂಬ ಪ್ರಶ್ನೆ ಮೂಡುತ್ತದೆ.
* ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ದಕ್ಷ ಆಡಳಿತ ಇಲ್ಲದೇ ಇರುವುದು ಇದಕ್ಕೆಲ್ಲ ಕಾರಣ. ಮಂಗಳೂರು ಗಲಭೆ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.
ತುರ್ತು ಪರಿಸ್ಥಿತಿ ಹೇರಿದ್ದೇ ಕಾಂಗ್ರೆಸ್ಚಿಕ್ಕಮಗಳೂರು: ದೇಶದಲ್ಲಿ ಬಿಜೆಪಿ ತುರ್ತು ಪರಿಸ್ಥಿತಿ ನಿರ್ಮಿಸಿದೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ಗೆ ಕಿಡಿ ಕಾರಿರುವ ಸಚಿವ ಸಿ.ಟಿ.ರವಿ, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದೇ ಕಾಂಗ್ರೆಸ್ ಎಂದು ತಿರುಗೇಟು ನೀಡಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿ, ಸಿದ್ದರಾಮಯ್ಯ ಹಾಗೂ ಖಾದರ್ ವಿರುದ್ಧ ಹರಿಹಾಯ್ದರು. * ಬಿಜೆಪಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆಯಿದೆ. ಇದಕ್ಕೆ ಅಡ್ಡ ಬಂದವರಿಗೆ ಪ್ರಜಾಪ್ರಭುತ್ವದ ಮೂಲಕವೇ ಉತ್ತರ ನೀಡಲಾಗುವುದು. * ದೇಶದಲ್ಲಿ ಬಿಜೆಪಿ ತುರ್ತು ಪರಿಸ್ಥಿತಿ ನಿರ್ಮಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಆದರೆ, ಅಲಹಾಬಾದ್ ತೀರ್ಪು ಬಂದಾಗ ಕಾಂಗ್ರೆಸ್‌ನವರೇ ತುರ್ತು ಪರಿಸ್ಥಿತಿ ಹೇರಿದ್ದರು. ಬಿಜೆಪಿ ಎಂದೂ ಅಂತಹ ಕೆಲಸ ಮಾಡಿಲ್ಲ. * ತಾವು ಒಮ್ಮೆ ನೀಡಿದ್ದ ಹೇಳಿಕೆಯನ್ನು ಬಿಜೆಪಿಯವರು ಪದೇ ಪದೇ ಹೇಳು ವ ಮೂಲಕ ಜನರನ್ನು ಪ್ರಚೋದಿ ಸುತ್ತಿದ್ದಾರೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಆದರೆ, ಖಾದರ್ ಹೇಳಿಕೆ ನೀಡುವುದಕ್ಕೂ, ಮಂಗಳೂರಿ ನಲ್ಲಿ ನಡೆದ ಗಲಭೆಗೂ ಸಾಮ್ಯತೆಯಿದೆ. ಅವರ ಹೇಳಿಕೆ ಕಾಕತಾಳೀಯವಲ್ಲ. * ಕಲ್ಲಡ್ಕ ಪ್ರಭಾಕರ ಭಟ್ ಅವರೇ ಗಲಭೆಗೆ ಕಾರಣ ಎಂಬ ಸಿದ್ದರಾಮ ಯ್ಯ ಹೇಳಿಕೆ “ಕಳ್ಳನಿಗೊಂದು ಪಿಳ್ಳೆ ನೆವ’ ಎಂಬ ರೀತಿಯದು. * ಗಲಭೆಯಾಗಬೇಕು. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಬೇಕೆಂಬುದಷ್ಟೇ ಕಾಂಗ್ರೆಸ್‌ನವರ ಉದ್ದೇಶ. * ಪೌರತ್ವ ಕಾಯ್ದೆ ಯಾರ ಹಕ್ಕನ್ನೂ ಕಿತ್ತುಕೊಳ್ಳುವುದಿಲ್ಲ. * ಬಾಂಗ್ಲಾ ಯುದ್ಧದ ನಂತರ 70ರ ದಶಕದಲ್ಲಿ ರಾಜ್ಯಕ್ಕೆ ಬಂದು ಸಿಂಧ ನೂರು ಜವಳಿ ಕ್ಯಾಂಪ್‌ನಲ್ಲಿರುವ ಸುಮಾರು 30 ಸಾವಿರ ಜನ ಉಳಿದೆಡೆ ನೆಲೆ ನಿಂತಿರುವವರೂ ಸೇರಿ ಹೆಚ್ಚೆಂದರೆ 50 ಸಾವಿರ ಜನರಿಗೆ ಪೌರತ್ವ ಸಿಗಬಹುದು. * ಅಕ್ರಮವಾಗಿ ಇಲ್ಲಿಗೆ ಬಂದು ನೆಲೆ ನಿಂತಿರುವ ಲಕ್ಷಾಂತರ ಜನರನ್ನು ಇಟ್ಟು ಕೊಳ್ಳಲು ಕಾಂಗ್ರೆಸ್‌ನವರು ಸಿದ್ಧರಿ ದ್ದಾರೆ. ಆದರೆ, ನಿರಾಶ್ರಿತರಾಗಿ ಬಂದ ವರಿಗೆ ಆಶ್ರಯ ಕೊಡಲು ಸಿದ್ಧರಿಲ್ಲ. * ಖಾದರ್ ಅವರು, ಪೌರತ್ವ ಕಾಯ್ದೆಯನ್ನು ಜಾರಿಗೆ ತಂದರೆ ರಾಜ್ಯಕ್ಕೆ ಬೆಂಕಿ ಹಾಕುತ್ತೇವೆ ಎಂದು ಹೇಳಿದ್ದರು. ಹಾಗಾದರೆ, ಮಂಗಳೂರಿಗೆ ಬೆಂಕಿ ಹಾಕಿಸಿದ್ದು ಅವರ ಪಾರ್ಟಿ ಅಲ್ಲವೇ?. * ಬೆಂಕಿ ಹಾಕುವುದಕ್ಕೆ ಅವಕಾಶ ಕೊಟ್ಟು ಅನಾಹುತವಾಗಿದ್ದರೆ ನಿಯಂತ್ರಣ ಮಾಡಲಾಗದ ಪರಿಸ್ಥಿತಿ ತಲುಪುತ್ತಿತ್ತು ಎಂಬುದು ಮುಖ್ಯಮಂತ್ರಿ ಯಾಗಿದ್ದವರಿಗೆ ತಿಳಿದಿಲ್ಲವೇ. ಆಕಸ್ಮಾತ್ ಗಲಭೆ ಮುಂದು ವರಿದು ಮಂಗಳೂರಿನ ತುಂಬ ಬೆಂಕಿ ಹಾಕಲು ಬಿಟ್ಟಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು?.