Advertisement
ಫಾಲೋಆನ್ ಪಡೆದ ಬಳಿಕ ದಿಟ್ಟ ಹೋರಾಟ ವೊಂದನ್ನು ಸಂಘಟಿಸಿದ ಶ್ರೀಲಂಕಾ, ಶನಿವಾರದ ಆಟದ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 209 ರನ್ ಮಾಡಿದೆ. ವನ್‌ಡೌನ್ ಬ್ಯಾಟ್ಸ್‌ಮನ್ ಕುಸಲ್ ಮೆಂಡಿಸ್ ಬಾರಿಸಿದ ಶತಕ, ಆರಂಭಕಾರ ದಿಮುತ್ ಕರುಣರತ್ನೆ ಅವರ ಅಜೇಯ 92 ರನ್, ಇವರಿಬ್ಬರು ದ್ವಿತೀಯ ವಿಕೆಟಿಗೆ ನಡೆಸಿದ 192 ರನ್ ಜತೆಯಾಟ ಲಂಕಾ ಹೋರಾಟಕ್ಕೊಂದು ಸ್ಫೂರ್ತಿ ತುಂಬಿದೆ. ಆದರೆ ದಿನದಾಟದ ಮುಕ್ತಾಯಕ್ಕೆ 5 ಓವರ್ ಬಾಕಿ ಇರುವಾಗ ಶತಕವೀರ ಮೆಂಡಿಸ್ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದ ಭಾರತ, ಮತ್ತೆ ಆತಿಥೇಯರ ಮೇಲೆ ಒತ್ತಡ ಹೇರಿದೆ. ಇನ್ನಿಂಗ್ಸ್ ಸೋಲಿನಿಂದ ಪಾರಾಗಲು ಚಂಡಿಮಾಲ್ ಪಡೆ ಇನ್ನೂ 230 ರನ್ ಗಳಿಸಬೇಕಿದೆ. ಹೀಗಾಗಿ ರವಿವಾರದ ಬ್ಯಾಟಿಂಗ್ ಆತಿಥೇಯರ ಪಾಲಿಗೆ ನಿರ್ಣಾಯಕ.
ದ್ವಿತೀಯ ಸರದಿಯಲ್ಲಿ ಆರಂಭ ಕಾರ ಉಪುಲ್ ತರಂಗ ಎರಡೇ ರನ್ ಮಾಡಿ ಯಾದವ್‌ಗೆ ಬೌಲ್ಡ್ ಆಗುವುದ ರೊಂದಿಗೆ ಶ್ರೀಲಂಕಾ ಮತ್ತೂಂದು ಕಂತಿನ ಕುಸಿತದ ಮುನ್ಸೂಚನೆ ನೀಡಿತು. ಆದರೆ ದಿಮುತ್ ಕರುಣರತ್ನೆ-ಕುಸಲ್ ಮೆಂಡಿಸ್ ಸೇರಿಕೊಂಡು ಅಮೋಘ ಹೋರಾಟವೊಂದನ್ನು ಸಂಘಟಿಸಿದರು. ದ್ವಿತೀಯ ವಿಕೆಟಿಗೆ 51.5 ಓವರ್‌ಗಳ ಜತೆಯಾಟ ನಡೆಸಿ 192 ರನ್ ಪೇರಿಸಿದರು. ಭಾರತದ ದಾಳಿಯನ್ನು, ಅದರಲ್ಲೂ ಸ್ಪಿನ್ ಆಕ್ರಮಣವನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿ ಲಂಕಾ ಸರದಿಗೆ ಬಲ ತುಂಬಿದರು. ಇದರಲ್ಲಿ ಮೆಂಡಿಸ್ ಕೊಡುಗೆ 110 ರನ್. 135 ಎಸೆತಗಳ ಈ ಆಕ್ರಮಣಕಾರಿ ಆಟದ ವೇಳೆ 17 ಬೌಂಡರಿ ಸಿಡಿಯಲ್ಪಟ್ಟಿತು. ಇದು ಅವರ 3ನೇ ಶತಕವಾದರೆ, ಭಾರತದೆದುರು ಮೊದಲನೆಯದು. ಈ ಜೋಡಿ 3ನೇ ದಿನದ ಕೊನೆಯ ವರೆಗೂ ಕ್ರೀಸ್ ಆಕ್ರಮಿಸಿಕೊಳ್ಳುವ ಸೂಚನೆ ನೀಡಿತು. ಆದರೆ ಹಾರ್ದಿಕ್ ಪಾಂಡ್ಯ ಇದಕ್ಕೆ ಅವಕಾಶ ಕೊಡಲಿಲ್ಲ. ಸಾಹಾ ಕೈಗೆ ಕ್ಯಾಚ್ ಕೊಡಿಸಿ ಶತಕವೀರ ಮೆಂಡಿಸ್ ಅವರನ್ನು ಪೆವಿಲಿಯನ್ನಿಗೆ ಅಟ್ಟುವಲ್ಲಿ ಯಶಸ್ವಿಯಾದರು.
Related Articles
Advertisement
ಲಂಚ್ ಒಳಗೆ ಲಂಕಾ ಲಾಗ!ಶನಿವಾರದ ಮೊದಲ ಅವಧಿಯಲ್ಲಿ ಶ್ರೀಲಂಕಾ ನಾಟಕೀಯ ಕುಸಿತಕ್ಕೊಳಗಾಯಿತು. 2ಕ್ಕೆ 50 ರನ್ ಮಾಡಿದ್ದ ಆತಿಥೇಯ ತಂಡ, ಭೋಜನ ವಿರಾಮಕ್ಕೆ ಸರಿಯಾಗಿ 183ಕ್ಕೆ ಸರ್ವಪತನ ಕಂಡಿತು. ಗಾಯಾಳು ನುವಾನ್ ಪ್ರದೀಪ್ ಕೂಡ ಬ್ಯಾಟ್ ಹಿಡಿದು ಬಂದದ್ದು ಲಂಕಾ ಸ್ಥಿತಿಗೆ ಹಿಡಿದ ಕನ್ನಡಿಯಾಗಿತ್ತು. 51 ರನ್ ಮಾಡಿದ ನಿರೋಷನ್ ಡಿಕ್ವೆಲ್ಲ ಅವರಿಂದ ತಂಡದ ಏಕೈಕ ಅರ್ಧ ಶತಕ ದಾಖಲಾಯಿತು. 69ಕ್ಕೆ 5 ವಿಕೆಟ್ ಹಾರಿಸಿದ ಆರ್. ಅಶ್ವಿನ್ ಶ್ರೀಲಂಕಾ ಕುಸಿತದಲ್ಲಿ ಮಹತ್ವದ ಪಾತ್ರ ವಹಿಸಿದರು. ಜಡೇಜ ಮತ್ತು ಶಮಿ ತಲಾ 2 ವಿಕೆಟ್ ಕಿತ್ತರೆ, ಉಳಿದೊಂದು ವಿಕೆಟ್ ಯಾದವ್ ಪಾಲಾಯಿತು. ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್9 ವಿಕೆಟಿಗೆ ಡಿಕ್ಲೇರ್ 622
ಶ್ರೀಲಂಕಾ ಪ್ರಥಮ ಇನ್ನಿಂಗ್ಸ್(ನಿನ್ನೆ 2 ವಿಕೆಟಿಗೆ 50)
ಕುಸಲ್ ಮೆಂಡಿಸ್ ಸಿ ಕೊಹ್ಲಿ ಬಿ ಯಾದವ್ 24
ದಿನೇಶ್ ಚಂಡಿಮಾಲ್ ಸಿ ಪಾಂಡ್ಯ ಬಿ ಜಡೇಜ 10
ಏಂಜೆಲೊ ಮ್ಯಾಥ್ಯೂಸ್ ಸಿ ಪೂಜಾರ ಬಿ ಅಶ್ವಿನ್ 26
ನಿರೋಷನ್ ಡಿಕ್ವೆಲ್ಲ ಬಿ ಶಮಿ 51
ಧನಂಜಯ ಡಿ’ಸಿಲ್ವ ಬಿ ಜಡೇಜ 0
ದಿಲುÅವಾನ್ ಪೆರೆರ ಬಿ ಅಶ್ವಿನ್ 25
ರಂಗನ ಹೆರಾತ್ ಬಿ ಶಮಿ 2
ಮಲಿಂದ ಪುಷ್ಪಕುಮಾರ ಔಟಾಗದೆ 15
ನುವಾನ್ ಪ್ರದೀಪ್ ಬಿ ಅಶ್ವಿನ್ 0
ಇತರ 5
ಒಟ್ಟು (ಆಲೌಟ್) 183
ವಿಕೆಟ್ ಪತನ: 3-60, 4-64, 5-117, 6-122, 7-150, 8-152, 9-171.
ಬೌಲಿಂಗ್:
ಮೊಹಮ್ಮದ್ ಶಮಿ 6-1-13-2
ಆರ್. ಅಶ್ವಿನ್ 16.4-3-69-5
ರವೀಂದ್ರ ಜಡೇಜ 22-6-84-2
ಉಮೇಶ್ ಯಾದವ್ 5-1-12-1 ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್
ದಿಮುತ್ ಕರುಣರತ್ನೆ ಬ್ಯಾಟಿಂಗ್ 92
ಉಪುಲ್ ತರಂಗ ಬಿ ಯಾದವ್ 2
ಕುಸಲ್ ಮೆಂಡಿಸ್ ಸಿ ಸಾಹಾ ಬಿ ಪಾಂಡ್ಯ 110
ಮಲಿಂದ ಪುಷ್ಪಕುಮಾರ ಬ್ಯಾಟಿಂಗ್ 2
ಇತರ 3
ಒಟ್ಟು (2 ವಿಕೆಟಿಗೆ) 209
ವಿಕೆಟ್ ಪತನ: 1-7, 2-198.
ಬೌಲಿಂಗ್:
ಉಮೇಶ್ ಯಾದವ್ 9-2-29-1
ಆರ್. ಅಶ್ವಿನ್ 24-6-79-0
ಮೊಹಮ್ಮದ್ ಶಮಿ 6-2-13-0
ರವೀಂದ್ರ ಜಡೇಜ 16-2-76-0
ಹಾರ್ದಿಕ್ ಪಾಂಡ್ಯ 5-0-12-1