Advertisement
ನಂಜನಗೂಡು ಉಪಚುನಾವಣೆಯ ಉಸ್ತುವಾರಿ ಹೊತ್ತಿರುವ ಅವರು, ನಗರದಲ್ಲಿ ಕಾಂಗ್ರೆಸ್ ಪ್ರಚಾರ ಕಾರ್ಯಾಲಯಕ್ಕೆ ಶನಿವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಇದನ್ನೇ ಮತದಾರರಿಗೆ ತಿಳಿಸಿ ಮತ ಯಾಚಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಇದು ವ್ಯಕ್ತ ಆಧಾರಿತ ಚುನಾವಣೆ ಅಲ್ಲ. ಚುನಾವಣೆಗಳಲ್ಲಿ ವ್ಯಕ್ತಿ ಶೇ. 20 ಭಾಗವಾದರೆ, ಶೇ. 80 ಭಾಗ ಪಕ್ಷದ ಮೇಲೆ ನಡೆಯುತ್ತದೆ. ಕಳಲೆ ಕೇಶವಮೂರ್ತಿ ಬಗ್ಗೆ ಕ್ಷೇತ್ರದಲ್ಲಿ ಒಳ್ಳೆಯ ಹೆಸರಿದೆ. ಅದನ್ನು ಬಳಸಿಕೊಂಡು ಮತದಾರರ ಮನವೊಲಿಸಬೇಕು ಎಂದರು.
Related Articles
Advertisement
ಉಪಚುನಾವಣೆಯಲ್ಲಿ ಶ್ರೀನಿವಾಸ್ ಪ್ರಸಾದ್ ಗೆದ್ದರೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಯಡಿಯೂರಪ್ಪ ಮುಖ್ಯ ಮಂತ್ರಿಯೂ ಆಗುವುದಿಲ್ಲ. ಕಳಲೆ ಕೇಶವಮೂರ್ತಿ ಸೋತರೆ ಕಾಂಗ್ರೆಸ್ ಅಧಿಕಾರಕ್ಕೆ ಯಾವುದೇ ಚ್ಯುತಿ ಬರುವುದಿಲ್ಲ. ಕಾಂಗ್ರೆಸ್ ಗೆಲುವು ಸಾಧಿಸಿದರೆ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬಹುದು ಎಂದು ತಿಳಿಸಿದರು.
ಪಕ್ಷದ ಕಾರ್ಯಾಲಯಕ್ಕೆ ಆಗಮಿಸಿದ ಅಲ್ಲಂ ವೀರಭದ್ರಪ್ಪಅವರನ್ನು ಅಭ್ಯರ್ಥಿ ಕೇಶವಮೂರ್ತಿ ಬರಮಾಡಿಕೊಂಡರು. ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಬಿ. ಸ್ವಾಮಿ, ನಂದಿನಿ ಚಂದ್ರಶೇಖರ್, ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಶಿವಕುಮಾರ್, ರೇಹನಾ , ದಿನೇಶ, ಗಂಗಾಧರ ಇತರರು ಹಾಜರಿದ್ದರು.