Advertisement

ಗಾಯಕಿ ಮೀಷಾಗೆ 100 ಕೋಟಿ ಮಾನಹಾನಿ ನೊಟೀಸ್‌ ನೀಡಿದ ಅಲಿ ಝಫ‌ರ್‌

07:11 PM Apr 25, 2018 | Team Udayavani |

ಹೊಸದಿಲ್ಲಿ : ತನ್ನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ತನ್ನ ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡಿರುವ ಕಾರಣಕ್ಕೆ  ಪ್ರಖ್ಯಾತ ಪಾಕ್‌ ಗಾಯಕಿ ಮೀಷಾ ಶಫಿ ಅವರಿಗೆ  ಪಾಕ್‌ ಗಾಯಕ, ನಟ ಅಲಿ ಝಫ‌ರ್‌ ನೂರು ಕೋಟಿ ರೂ.ಗಳ ಮಾನಹಾನಿ ನೊಟೀಸ್‌ ಜಾರಿ ಮಾಡಿರುವುದಾಗಿ ಪಾಕ್‌ ಮಾಧ್ಯಮಗಳು ವರದಿ ಮಾಡಿವೆ.

Advertisement

ಇದೇ ವೇಳೆ ತನ್ನ ವಿರುದ್ಧದ ಎಲ್ಲ  ಆರೋಪಗಳನ್ನು ಅಲಿ ಝಫ‌ರ್‌ ಸಂಪೂರ್ಣ ಸುಳ್ಳೆಂದು ಹೇಳಿದ್ದಾರೆ. ಅಲಿ ಝಫ‌ರ್‌ ಅವರು 2010ರಲ್ಲಿ ತೇರೇ ಬಿನ್‌ ಲಾಡೆನ್‌ ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶಿಸಿದವರಾಗಿದ್ದಾರೆ. 

ಮೀಷಾ ಶಫೀ ಅವರು ತಾನು ಮಾಡಿರುವ ಸುಳ್ಳು ಆರೋಪಗಳಿಗಾಗಿ ಕ್ಷಮೆ ಯಾಚಿಸಬೇಕು ಎಂದು ಕೂಡ ಅಲಿ ಝಫ‌ರ್‌ ಆಗ್ರಹಿಸಿದ್ದಾರೆ. 

ಇದಕ್ಕೆ ಉತ್ತರವೆಂಬಂತೆ ಮೀಷ ಅವರು ಟ್ವಿಟರ್‌ನಲ್ಲಿ ತಾನು ಗೊತ್ತುಪಡಿಸಿಕೊಂಡಿರುವ ವಕೀಲರ ಮಾಹಿತಿ ನೀಡಿದ್ದು ತನ್ನ ವಿಷಯದಲ್ಲಿನ ಯಾವುದೇ ತಾಜಾ ಮಾಹಿತಿಳಿಗೆ ಮಾಧ್ಯಮದವರು ಅವರನ್ನು ಸಂಪರ್ಕಿಸುವಂತೆ ಕೋರಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next