Advertisement
ಸುರಿವ ಮಳೆ ಬಿಡಬಾರದೇ ಬೇಗ
Related Articles
Advertisement
ಪಾಡಿಗೆ ತಾನು ಮಳೆ ಸುರಿಯುತ್ತಿತ್ತು.
ತಲೆಯೆತ್ತಿ ನೋಡಿದರೆ,
ಆಗಸದ ತುಂಬೆಲ್ಲಾ ಕಪ್ಪನೆ ಮೋಡ.
ನಮ್ಮ ತೋಟದ ಮನೆಯ ಮಣ್ಣಿನ
ದಾರಿಯಲ್ಲೆಲ್ಲಾ ಪುಟ್ಟ ಪುಟ್ಟ ಕೆರೆ-ದಡ.
ಮಣ್ಣಿನ ವಾಸನೆಯ ಜತೆ,
ಮೈದುಂಬಿ ನಿಂತ ವನಸಿರಿ ನೋಡ.
ಮರೆತು ನಲಿದಿದೆ ಮನ, ಎಲ್ಲ ದುಗುಡ.
ಮಲೆನಾಡ ವನಸಿರಿಯಂತೆ
ರೋಚಕ ಹೆಣ್ಣಿನ ಚೆಲುವು.
ಗಂಡಿನ ಪ್ರೀತಿಯ ವರ್ಷಧಾರೆ
ಸಿಕ್ಕಾಗಲೆ ತಾನೇ, ಆ ಚೆಂದಕೆ
ಇನ್ನಷ್ಟೂ ಮೋಹಕವು.
ಕೆಸರಲ್ಲಿ ಆಡಬೇಕೆಂಬ
ಆಸೆ ಕಾಡಿತ್ತು ಮಗುವಿನಂತೆ,
ಕಂಡವರು ನಕ್ಕಾರು,
ಎಂದು ಸುಮ್ಮನೆ ನಿಂತೆ.
ಅದೇಕೋ ಗೊತ್ತಿಲ್ಲ,
ಮಳೆ ನಿಂತ ಮೇಲೆ… ಮತ್ತೆ
ಮಳೆ ಬರಬಾರದೇ ಎಂದು
ನಾ ಕಾಯುತ್ತಾ…. ನಿಂತೆ..!!
ವಿದ್ಯಾಶ್ರೀ ಬಿ.
ಬಳ್ಳಾರಿ