Advertisement

After mass layoffs;ಕಚೇರಿ ಖಾಲಿ ಮಾಡಿದ ಬೈಜೂಸ್‌

10:24 PM Jul 24, 2023 | Team Udayavani |

ನವದೆಹಲಿ: ವೆಚ್ಚ ಕಡಿತದ ಭಾಗವಾಗಿ ಬೈಜೂಸ್‌ ಬೆಂಗಳೂರಿನಲ್ಲಿರುವ ತನ್ನ ಒಂದು ದೊಡ್ಡ ಕಚೇರಿಯನ್ನು ಖಾಲಿ ಮಾಡಿದೆ. ಅಲ್ಲದೇ ಬೆಂಗಳೂರಿನಲ್ಲಿರುವ ಮತ್ತೂಂದು ಕಚೇರಿಯ ಒಂದು ಭಾಗವನ್ನು ಖಾಲಿ ಮಾಡಿದ್ದು, ಕಚೇರಿಯ ಗಾತ್ರದಲ್ಲಿ ಕಡಿತ ಮಾಡಿದೆ.

Advertisement

ಬೆಂಗಳೂರಿನ ಬ್ರೂಕ್‌ಫೀಲ್ಡ್‌ನಲ್ಲಿರುವ ಕಲ್ಯಾಣಿ ಟೆಕ್‌ ಪಾರ್ಕ್‌ನಲ್ಲಿ ಮ್ಯಾಗ್ನೊಲಿಯಾ ಮತ್ತು ಎಬೊನಿ ಕಟ್ಟಡಗಳನ್ನು ಬೈಜೂಸ್‌ ಬಾಡಿಗೆಗೆ ಹೊಂದಿದೆ.

ಈ ಪೈಕಿ ಮ್ಯಾಗ್ನೊಲಿಯಾ ಕಟ್ಟಡವನ್ನು ಖಾಲಿ ಮಾಡಿದೆ. ಅಲ್ಲಿರುವ ಉದ್ಯೋಗಿಗಳಲ್ಲಿ ಕೆಲವರನ್ನು ಎಬೊನಿ ಕಟ್ಟಡಕ್ಕೆ, ಇನ್ನೂ ಕೆಲವರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ.

ಇದೇ ವೇಳೆ ಎಬೊನಿ ಕಟ್ಟಡದಲ್ಲಿ ಒಟ್ಟು ಆರು ಅಂತಸ್ತುಗಳನ್ನು ಬೈಜೂಸ್‌ ಬಾಡಿಗೆಗೆ ಹೊಂದಿದೆ. ಈ ಪೈಕಿ ಆಗಸ್ಟ್‌ನಲ್ಲಿ ಎರಡು ಅಂತಸ್ತುಗಳನ್ನು ಖಾಲಿ ಮಾಡಲಿದೆ. ಉಳಿದಂತೆ ನಾಲ್ಕು ಅಂತಸ್ತುಗಳಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next