Advertisement

ಕಾಶ್ಮೀರದ ನಂತರ ‘ದಿ ದಿಲ್ಲಿ ಫೈಲ್ಸ್’ಜತೆ ಬರಲಿದ್ದಾರೆ ವಿವೇಕ್ ಅಗ್ನಿಹೋತ್ರಿ

08:16 PM Apr 15, 2022 | Team Udayavani |

ಮುಂಬಯಿ: ‘ದಿ ಕಾಶ್ಮೀರ್ ಫೈಲ್ಸ್ ‘ ಚಲನಚಿತ್ರ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ಶೀಘ್ರದಲ್ಲೇ ತಮ್ಮ ಮುಂದಿನ ಚಲನಚಿತ್ರ ‘ದಿ ದಿಲ್ಲಿ ಫೈಲ್ಸ್‘ನಲ್ಲಿ ಕೆಲಸ ಮಾಡಲಿದ್ದಾರೆ ಎಂದು ಗುರುವಾರ ಬಹಿರಂಗಪಡಿಸಿದ್ದಾರೆ.

Advertisement

ಟ್ವಿಟರ್‌ನಲ್ಲಿ ಪೋಸ್ಟ್‌ನಲ್ಲಿ ಸುದ್ದಿಯನ್ನು ಹಂಚಿಕೊಂಡಿರುವ ಅಗ್ನಿಹೋತ್ರಿ, ‘ದಿ ಕಾಶ್ಮೀರ್ ಫೈಲ್ಸ್ ‘ ಬೆಂಬಲಿಸಿದ ಎಲ್ಲರಿಗೆ ನಾನು ಧನ್ಯವಾದ ಹೇಳುತ್ತೇನೆ. ಕಳೆದ ನಾಲ್ಕು ವರ್ಷಗಳಿಂದ, ನಾವು ಅತ್ಯಂತ ಪ್ರಾಮಾಣಿಕತೆಯಿಂದ ತುಂಬಾ ಶ್ರಮಿಸಿದ್ದೇವೆ. ನಾನು ನಿಮ್ಮ ಸಮಯವನ್ನು ಹಾಳು ಮಾಡಿರಬಹುದು ಆದರೆ ಕಾಶ್ಮೀರಿ ಹಿಂದೂಗಳ ನರಮೇಧ ಮತ್ತು ಆದ ಅನ್ಯಾಯದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮುಖ್ಯವಾಗಿತ್ತು. ನಾನು ಹೊಸ ಚಿತ್ರದಲ್ಲಿ ಕೆಲಸ ಮಾಡುವ ಸಮಯ ಬಂದಿದೆ ” ಎಂದು ಟ್ವೀಟ್ ಮಾಡಿದ್ದಾರೆ.

1984 ರ ಗಲಭೆಗಳನ್ನು ಆಧರಿಸಿ ‘ದಿಲ್ಲಿ ಫೈಲ್ಸ್’ ಮಾಡಲು ಹೊರಟಿರುವ  ಕಾಶ್ಮೀರ ಫೈಲ್ಸ್ ನಿರ್ದೇಶಕರ ಕ್ರಮವನ್ನು  ಹಲವರು ಸ್ವಾಗತಿಸಿದ್ದಾರೆ

ದಿ ಕಾಶ್ಮೀರ್ ಫೈಲ್ಸ್ ಗಲ್ಲಾಪೆಟ್ಟಿಗೆಯ ಮಾತ್ರವಲ್ಲದೆ ರಾಜಕೀಯವಾಗಿಯೂ ಹಿಂದೆಂದೂ ಕಂಡಿರದ ಭರ್ಜರಿ ಪ್ರಚಾರ ಮತ್ತು ಯಶಸ್ಸು ಗಳಿಸಿತ್ತು, ಮಾತ್ರವಲ್ಲದೆ ವಿವಾದವನ್ನು ಉಂಟುಮಾಡಿತ್ತು. ಕೆಲವು ವಿಮರ್ಶಕರು ಮತ್ತು ಲೇಖಕರು ರಾಜಕೀಯಕ್ಕಾಗಿ ಚಲನಚಿತ್ರವನ್ನು ಎಳೆದು ತಂದರೂ 330 ಕೋಟಿಗೂ ಹೆಚ್ಚು ಹಣವನ್ನು ಗಳಿಸುವ ಮೂಲಕ ಗಲ್ಲಾಪೆಟ್ಟಿಗೆ ಸೂರೆಗೈದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next