Advertisement
ಕಮಲ ಹಾಸನ್ ಅವರ ಮಾತುಗಳಲ್ಲೇ ಇಂತಹ ಸ್ಪಷ್ಟ ಸುಳಿವು ಸಿಕ್ಕಿದೆ. ‘ಪರಿಣಾಕಾರಿ ರಾಜಕಾರಣಿ’ ಯಾಗುವ ಉದ್ದೇಶದಿಂದ ತಾನು ಚಿತ್ರರಂಗಕ್ಕೆ ವಿದಾಯ ಹೇಳಲಿದ್ದೇನೆ ಎಂದು ಕಮಲ್ ಹೇಳಿದ್ದಾರೆ.
Related Articles
Advertisement
”ಹಾಗಿದ್ದರೂ ನನ್ನ ಪ್ರೊಡಕ್ಷನ್ ಕಂಪೆನಿ ಮುಂದುವರಿಯುತ್ತದೆ. ನನ್ನ ಬದಲು ಬೇರೊಬ್ಬರು ಅದನ್ನು ನಡೆಸುತ್ತಾರೆ” ಎಂದು 64ರ ಹರೆಯದ ನಟ-ರಾಜಕಾರಣಿ ಕಮಲ ಹಾಸನ್ ಅವರು ಕೊಚ್ಚಿ ಸಮೀಪದ ಕಿಳಕ್ಕಂಬಳಮ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಇಂಡಿಯನ್-2 ಅಲ್ಲದೆ ಕಮಲ ಹಾಸನ್ ಅವರ ಕೈಯಲ್ಲಿ ಇನ್ನೆರಡು ಚಿತ್ರಗಳಿವೆ. ಅವೆಂದರೆ ಸ್ವಂತ ನಿರ್ದೇಶನದ ತ್ರಿಭಾಷಾ ಚಿತ್ರ ಶಾಬಾಷ್ ನಾಯ್ಡು ಮತ್ತು ಹೆಸರಿಡದ ಇನ್ನೊಂದು ಚಿತ್ರ. ಇವುಗಳ ಬಳಿಕ ಬೇರೆ ಯಾವುದೇ ಹೊಸ ಚಿತ್ರಕ್ಕೆ ಕಮಲ ಹಾಸನ್ ಸಹಿ ಮಾಡುವುದಿಲ್ಲ ಎಂದು ಅವರಿಗೆ ನಿಕಟವಿರುವ ಚೆನ್ನೈ ಮೂಲಗಳು ತಿಳಿಸಿವೆ.
1992ರ ಸೂಪರ್ ಹಿಟ್ “ತೇವರ್ ಮಗನ್’ ಚಿತ್ರಕ್ಕಾಗಿ ಕಮಲ ಹಾಸನ್ ಅವರಿಗೆ ನ್ಯಾಶನಲ್ ಅವಾರ್ಡ್ ಸಿಕ್ಕಿದೆ. ಅವರ ಈ ಮೊದಲಿನ ವಿಶ್ವರೂಪಂ-2 ಚಿತ್ರ ಬಾಕ್ಸ್ ಆಫೀಸಿನಲ್ಲಿ ಗೋತಾ ಹೊಡೆದಿದೆ. ಮೂನ್ರಾಂ ಪಿರೈ (1983), ನಾಯಗನ್ (1988), ತೇವರ್ ಮಗನ್ (1992)ಮತ್ತು ಇಂಡಿಯನ್ (1996) ಚಿತ್ರಗಳಿಗಾಗಿ ಕಮಲ್ ಅವರಿಗೆ ನಾಲ್ಕು ಬಾರಿ ಶ್ರೇಷ್ಠ ನಟನೆಂಬ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ.