ಚೆನ್ನೈ: ಟೊರೊಂಟೊ ದಲ್ಲಿ ನಡೆದ ಪ್ರತಿಷ್ಠಿತ ಕ್ಯಾಂಡಿಡೇಟ್ಸ್ ಚೆಸ್ ಕೂಟದ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ಹದಿ ಹರೆಯದ ಚೆಸ್ ತಾರೆ ಗ್ರ್ಯಾನ್ ಮಾಸ್ಟರ್ ಡಿ. ಗುಕೇಶ್ ಅವರು ಗುರುವಾರ ಬೆಳಗ್ಗೆ 3 ಗಂಟೆಗೆ ಚೆನ್ನೈ ಗೆ ಬಂದಾಗ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ನೀಡಲಾಯಿತು.
ಗುಕೇಶ್ ಶಾಲಾ ದಿನಗಳಲ್ಲಿ ಕಲಿತ ವೆಲಮ್ಮಾಲ್ ವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ವಿಮಾನನಿಲ್ದಾಣದಲ್ಲಿ ಸಾಲಾಗಿ ನಿಂತು 17ರ ಹರೆಯದ ಚೆಸ್ ತಾರೆಯನ್ನು ಪ್ರೀತಿಯಿಂದ ಬರಮಾಡಿಕೊಂಡರು. ಸಾರ್ವ ಜನಿಕರೂ ಭಾರೀ ಸಂಖ್ಯೆಯಲ್ಲಿ ಅವರಿಗೆ ಗುಲಾಬಿ ಹೂಗಳ ಬೃಹತ್ ಮಾಲೆ ಹಾಕಿ ಸ್ವಾಗತಿಸಿ ದರು.
ತವರಿಗೆ ಬರುತ್ತಿರುವುದಕ್ಕೆ ಅತ್ಯಂತ ಖುಷಿಯಾಗುತ್ತಿದೆ. ಇದೊಂದು ವಿಶೇಷ ಸಾಧನೆ ಯಾಗಿದೆ. ಕೂಟ ಆರಂಭವಾದ ಬಳಿಕ ನಾನು ಉತ್ತಮ ಸ್ಥಿತಿಯಲ್ಲಿದ್ದೆ. ಹೀಗಾಗಿ ಪ್ರಶಸ್ತಿ ಗೆಲ್ಲುವ ಆತ್ಮವಿಶ್ವಾಸವೂ ನನ್ನಲ್ಲಿತ್ತು. ಅದೃಷ್ಟವೂ ನನ್ನ ಪರವಾಗಿತ್ತು ಎಂದು ಗುಕೇಶ್ ತಿಳಿಸಿದರು. ಬಹಳಷ್ಟು ಮಂದಿ ಚೆಸ ಆಟ ವನ್ನು ಆನಂದಿಸು ತ್ತಿರುವುದು ಉತ್ತಮ ವಿಷಯವಾಗಿದೆ. ಪ್ರಶಸ್ತಿ ಗೆಲ್ಲಲು ನೆರವು ಮತ್ತು ಮಹತ್ತರ ಪಾತ್ರ ವಹಿಸಿದ ತಮಿಳುನಾಡು ಸರಕಾರ, ಅಪ್ಪ, ಅಮ್ಮ, ಕೋಚ್, ಸ್ನೇಹಿತರು. ಕುಟುಂಬ, ಪ್ರಾಯೋಜಕರು ಮತ್ತು ಶಾಲೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದವರು ಹೇಳಿದರು.
ಇಎನ್‌ಟಿ ಸರ್ಜನ್ ಆಗಿರುವ ತಂದೆ ರಜನಿಕಾಂತ್ ತನ್ನ ಕೆಲಸವನ್ನು ತೊರೆದು ಪುತ್ರನ ಜತೆ ಟೊರೊಂಟೊಗೆ ಪ್ರಯಾಣಿಸಿದ್ದರು. ತಾಯಿ ಪದ್ಮಾ ಮೈಕ್ರೊಬಯೋಲಾಜಿಸ್ಟ್ ಆಗಿದ್ದಾರೆ. ಇದೊಂದು ನಮ್ಮ ಪಾಲಿಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಈ ಸಾಧನೆಯ ಮಹತ್ವವನ್ನು ಅರಿತುಕೊಳ್ಳಲು ನಮಗೆ ಕೆಲವು ಸಮಯ ಬೇಕಾಗಿದೆ ಎಂದು ರಜನಿಕಾಂತ್ ಹೇಳಿದರು.