Advertisement

‘ಹೆಮ್ಮೆಯ ಹಿಂದೂ’ : ಕಾಂಗ್ರೆಸ್ ಟೀಕಿಸಿದ ನಂತರ ಬಿಜೆಪಿ ಹೊಗಳಿದ ಹಾರ್ದಿಕ್ ಪಟೇಲ್ !

07:57 PM Apr 23, 2022 | Team Udayavani |

ಅಹಮದಾಬಾದ್ : ತಮ್ಮದೇ ಪಕ್ಷವನ್ನು ಟೀಕಿಸಿದ ಕೆಲವೇ ದಿನಗಳಲ್ಲಿ, ಗುಜರಾತ್ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಆಡಳಿತಾರೂಢ ಬಿಜೆಪಿಯನ್ನು ಅದರ “ನಿರ್ಣಾಯಕ ಸಾಮರ್ಥ್ಯ” ಕ್ಕಾಗಿ ಹೊಗಳಿದ್ದಾರೆ, ವಿರೋಧ ಪಕ್ಷದ ರಾಜ್ಯ ಘಟಕದ ನಾಯಕತ್ವದಲ್ಲಿ ಅವರು ಕೊರತೆಯಿದೆ ಎಂದು ಹೇಳಿದ್ದಾರೆ.

Advertisement

‘ಹಿಂದೂ ಎಂಬುದಕ್ಕೆ ಹೆಮ್ಮೆಪಡುತ್ತೇನೆ’ ಎಂದು ಹೇಳಿರುವ ಕಾಂಗ್ರೆಸ್‌ನ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪಟೇಲ್ ಅವರು ಬಿಜೆಪಿ ಸೇರುವ ಊಹಾಪೋಹವನ್ನು ಅಲ್ಲಗಳೆದರು ಮತ್ತು ‘ಅಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ಜನರ ಮುಂದೆ ಮುಕ್ತ ಹೃದಯದಿಂದ ನಿರ್ಣಯ ತೆಗೆದುಕೊಳ್ಳುತ್ತೇನೆ’ಎಂದು ಹೇಳಿದರು.

ಈ ವರ್ಷ ಡಿಸೆಂಬರ್‌ನಲ್ಲಿ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ರಾಜ್ಯ ಚುನಾವಣೆಗೂ ಮುನ್ನ ಪಾಟಿದಾರ್ ನಾಯಕ ನರೇಶ್ ಪಟೇಲ್ ಅವರನ್ನು ಕಣಕ್ಕಿಳಿಸುವ ಕಾಂಗ್ರೆಸ್ ಯೋಜನೆಯು ಹಾರ್ದಿಕ್ ಅವರನ್ನು ಕೆರಳಿಸಿದೆ.

ರಾಜ್ಯ ಕಾಂಗ್ರೆಸ್‌ನ  ಕಾರ್ಯಶೈಲಿಯನ್ನು ಟೀಕಿಸಿದ ಸುಮಾರು ಒಂದು ವಾರದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಪಟೇಲ್, ‘ಪಕ್ಷದ ಹೈಕಮಾಂಡ್‌ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದೇನೆ ಮತ್ತು ಅದು ರಾಜ್ಯದ ಜನರು, ಪಕ್ಷದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next