Advertisement

ಡಿ.27ಕ್ಕೆ ಕೃಣಾಲ್‌ ಪಾಂಡ್ಯ ಮದುವೆ

11:41 AM Dec 20, 2017 | Team Udayavani |

ನವದೆಹಲಿ: ಭಾರತದ ತರುಣ ಕ್ರಿಕೆಟಿಗರಿಗೆಲ್ಲ ಒಟ್ಟಿಗೆ ಕಂಕಣ ಯೋಗ ಕೂಡಿಬಂದಂತಿದೆ. ಮೊದಲು ಭುವನೇಶ್ವರ್‌, ಬಳಿಕ ಜಹೀರ್‌ ಖಾನ್‌, ಇತ್ತೀಚೆಗೆ ವಿರಾಟ್‌ ಕೊಹ್ಲಿ ಸಪ್ತಪದಿ ತುಳಿದಿದ್ದಾಯಿತು. ಇದೀಗ ಭಾರತದ ಮತ್ತೂಬ್ಬ ಕ್ರಿಕೆಟಿಗ ಡಿ.27ರಂದು ಗೃಹಸ್ಥಾಶ್ರಮಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅವರು ಬೇರ್ಯಾರೂ ಅಲ್ಲ, ಹಾರ್ದಿಕ್‌ ಪಾಂಡ್ಯ ಸಹೋದರ ಕೃಣಾಲ್‌ ಪಾಂಡ್ಯ. ಇವರು ಪಂಖುರಿ ಶರ್ಮ ಅವರನ್ನು ವಿವಾಹವಾಗುತ್ತಿದ್ದಾರೆ. 

Advertisement

ಇವರ ವಿವಾಹ ಸಮಾರಂಭ ಸಾಂತ ಕ್ರುಝ್ ಪಂಚತಾರಾ ಹೋಟೆಲ್‌ ನಲ್ಲಿ ನೆರವೇರಲಿದೆ. ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ಐಪಿಎಲ್‌ ಪ್ರಶಸ್ತಿ ಗೆದ್ದಿದ್ದಾಗ ಪಂಖುರಿ ಬಳಿ ಕೃಣಾಲ್‌ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಪಂಖುರಿ ಇದಕ್ಕೆ ಒಪ್ಪಿಗೆ ನೀಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next