ಹೊಸದಿಲ್ಲಿ: ಸ್ವಿಟ್ಸರ್‌ಲ್ಯಾಂಡಿನಲ್ಲಿ ಫೆ. 8 ಮತ್ತು 9ರಂದು ನಡೆಯಲಿರುವ ಉದ್ಘಾಟನಾ ಸೇಂಟ್ ಮಾರಿಟ್ಜ್ ಐಸ್ ಕ್ರಿಕೆಟ್ ಕೂಟದಲ್ಲಿ ಗ್ರೇಮ್ ಸ್ಮಿತ್, ವೀರೇಂದ್ರ ಸೆಹವಾಗ್, ಶಾಹಿದ್ ಅಫ್ರಿದಿ ಸಹಿತ ವಿಶ್ವದ ಹಲವು ಮಾಜಿ ಕ್ರಿಕೆಟಿಗರು ಭಾಗವಹಿಸಲಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಅಫ್ರಿದಿ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದರೆ ಸ್ಮಿತ್ 2016ರ ಫೆಬ್ರವರಿಯಲ್ಲಿ ನಡೆದ ಮಾಸ್ಟರ್ ಚಾಂಪಿಯನ್ಸ್ ಲೀಗ್ ಬಳಿಕ ಇದೇ ಮೊದಲ ಬಾರಿ ಆಡಲಿದ್ದಾರೆ. ಅವರಿಬ್ಬರ ಸಹಿತ ಸೆಹವಾಗ್, ಮೊಹಮ್ಮದ್ ಕೈಫ್, ಶೋಯಿಬ್ ಅಖ್ತರ್, ಮಾಹೇಲ ಜಯವರ್ಧನ, ಲಸಿತ ಮಾಲಿಂಗ, ಮೈಕಲ್ ಹಸ್ಸಿ, ಜ್ಯಾಕ್ ಕ್ಯಾಲಿಸ್, ಡೇನಿಯಲ್ ವೆಟರಿ, ನಥನ್ ಮೆಕಲಮ್, ಗ್ರಾÂಂಟ್ ಇಲಿಯಟ್, ಮಾಂಟಿ ಪನೆಸರ್‌ಮತ್ತು ಓವೈಸ್ ಶಾ ಈ ಕೂಟದಲ್ಲಿ ಭಾಗವಹಿಸುವುದನ್ನು ದೃಢಪಡಿಸಿದ್ದಾರೆ.
ಈ ಕೂಟದಿಂದ ಏನನ್ನು ನಿರೀಕ್ಷಿಸಬಹುದೆಂದು ಗೊತ್ತಿಲ್ಲ. ಆದರೆ ವಿಶ್ವದ ಅತ್ಯಂತ ಸುಂದರ ಪ್ರದೇಶದಲ್ಲಿ ಕ್ರಿಕೆಟ್ ಆಡಲು ಹಾತೊರೆಯತ್ತಿದ್ದೇನೆ. ಈ ಕೂಟ ಭಾರೀ ಯಶಸ್ಸು ಸಾಧಿಸುವ ನಿರೀಕ್ಷೆ ಹೊಂದಿದ್ದೇನೆ ಎಂದು ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಸ್ಮಿತ್ ಹೇಳಿದ್ದಾರೆ.
ನನ್ನ ಜತೆ ಆಡಿದ ಹಲವು ಶ್ರೇಷ್ಠ ಕ್ರಿಕೆಟಿಗರು ಈ ಕೂಟದಲ್ಲಿ ಆಡಲಿದ್ದಾರೆ. ನಾನು ಅವರ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ್ದೇನೆ. ಇದೀಗ ಅವರ ಜತೆಗೆ ಆಡುವ ಅವಕಾಶ ಸಿಕ್ಕಿದೆ ಮತ್ತು ಒಳ್ಳೆಯ ಕ್ರಿಕೆಟ್ ಆಡಲು ಪ್ರಯತ್ನಿಸುವೆ ಎಂದು ಸ್ಮಿತ್ ತಿಳಿಸಿದರು.
ಕೆಂಪು ಚೆಂಡಿನ ಸಹಿತ ಆಟಗಾರರು ಸಾಂಪ್ರದಾಯಿಕ ಕ್ರಿಕೆಟ್ ಪರಿಕರಗಳನ್ನು ಕ್ರಿಕೆಟಿಗರು ಬಳಸಬಹುದು. ಸ್ಪೈಕ್ ಬದಲು ನ್ಪೋರ್ಟ್ಸ್ ಶೂ ಧರಿಸಬೇಕಾಗಿದೆ. ಹವಾಮಾನ ಚೆನ್ನಾಗಿದೆ ಆದರೆ ತಾಪಮಾನ -20 ಡಿಗ್ರಿ ಸೆಲ್ಸಿಯಸ್‌ವರೆಗೆ ಹೋಗುವ ಸಾಧ್ಯತೆಯಿದೆ.
ಪಂದ್ಯಗಳು ಮ್ಯಾಟ್ ಪಿಚ್‌ನಲ್ಲಿ ನಡೆಯಲಿದೆ. ಈ ಕೂಟಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಒಪ್ಪಿಗೆ ಸೂಚಿಸಿದೆ ಎಂದು ಸಂಘಟಕರಾದ ವಿಜೆ ನ್ಪೋರ್ಟ್ಸ್ ತಿಳಿಸಿದೆ.