Advertisement

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

09:47 PM Dec 30, 2024 | Team Udayavani |

ಬುಕವಾಯೊ: ಬೃಹತ್‌ ಮೊತ್ತದ ಮೇಲಾಟಕ್ಕೆ ಕಾರಣವಾದ ಜಿಂಬಾಬ್ವೆ-ಅಫ್ಘಾನಿಸ್ಥಾನ ನಡುವಿನ ಮೊದಲ ಟೆಸ್ಟ್‌ ಪಂದ್ಯ ಡ್ರಾಗೊಂಡಿದೆ.

Advertisement

ಜಿಂಬಾಬ್ವೆಯ 586 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ದಿಟ್ಟ ಜವಾಬು ನೀಡಿದ ಅಫ್ಘಾನಿಸ್ಥಾನ 699 ರನ್‌ ಪೇರಿಸಿತು. ಇದು ಅಫ್ಘಾನ್‌ ಟೆಸ್ಟ್‌ ಇತಿಹಾಸದ ಅತ್ಯಧಿಕ ಮೊತ್ತವಾಗಿದೆ.

ರಹಮತ್‌ ಶಾ ಮತ್ತು ನಾಯಕ ಹಶ್ಮತುಲ್ಲ ಶಾಹಿದಿ ದ್ವಿಶತಕ ಬಾರಿಸಿ ಮೆರೆದಾಡಿದರು. ರಹಮತ್‌ ಶಾ 234 ರನ್‌ (424 ಎಸೆತ, 23 ಬೌಂಡರಿ, 3 ಸಿಕ್ಸರ್‌) ಮತ್ತು ಶಾಹಿದಿ 246 ರನ್‌ ಬಾರಿಸಿದರು (474 ಎಸೆತ, 21 ಬೌಂಡರಿ). ಈ ಜೋಡಿಯಿಂದ 3ನೇ ವಿಕೆಟಿಗೆ 364 ರನ್‌ ಹರಿದು ಬಂತು. ಇದು ಅಫ್ಘಾನ್‌ ತಂಡದ ಅತ್ಯಧಿಕ ಮೊತ್ತದ ಜತೆಯಾಟವಾಗಿದೆ. ಅಫ್ಘಾನ್‌ ಸರದಿಯಲ್ಲಿ ಮಿಂಚಿದ ಮತ್ತೋರ್ವ ಆಟಗಾರ ವಿಕೆಟ್‌ ಕೀಪರ್‌ ಅಫ‌Õರ್‌ ಜಜಾಯ್‌ (113). 4ನೇ ವಿಕೆಟಿಗೆ ಶಾಹಿದಿ-ಜಜಾಯ್‌ 211 ರನ್‌ ರಾಶಿ ಹಾಕಿದರು.

ಜಿಂಬಾಬ್ವೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ 4 ವಿಕೆಟಿಗೆ 142 ರನ್‌ ಗಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next