Advertisement

ಕಾಬೂಲ್‌: ಉಗ್ರರಿಬ್ಬರನ್ನು ಕೊಂದ ಬಾಲಕಿ

09:40 AM Jul 23, 2020 | mahesh |

ಕಾಬೂಲ್‌: ಅಫ್ಘಾನಿಸ್ಥಾನದಲ್ಲಿ ಬಾಲಕಿಯೊಬ್ಬಳು ಎಕೆ 47 ರೈಫ‌ಲ್‌ನಿಂದ ಇಬ್ಬರು ತಾಲಿಬಾನ್‌ ಉಗ್ರರನ್ನು ಕೊಂದಿದ್ದಾಳೆ. ಮನೆಗೆ ನುಗ್ಗಿ ತನ್ನ ತಂದೆ ತಾಯಿಯನ್ನು ಕೊಂದು ಹಾಕಿದ ಉಗ್ರರ ಮೇಲೆ 14-16 ವರ್ಷದ ಬಾಲಕಿ ಕ್ವಾಮರ್‌ ಗುಲ್‌ ಸೇಡು ತೀರಿಸಿಕೊಂಡಿದ್ದಾಳೆ. ಕೇಂದ್ರ ಭಾಗದ ಘೋರ್‌ ಪ್ರಾಂತ್ಯದ ಗ್ರಿವಾ ಎಂಬ ಗ್ರಾಮಕ್ಕೆ ಬಾಲಕಿಯ ತಂದೆ ಮುಖ್ಯಸ್ಥರು. ಅವರು ಸರಕಾರದ ಬೆಂಬಲಿಗರೂ ಆಗಿದ್ದರು.

Advertisement

ಈ ಕಾರಣಕ್ಕಾಗಿ ಇತ್ತೀಚೆಗೆ ತಾಲಿಬಾನ್‌ ಉಗ್ರರು, ಮನೆಗೆ ನುಗ್ಗಿ ಈಕೆಯ ತಂದೆ ತಾಯಿಯನ್ನು ಹೊರಗೆ ಎಳೆದುಕೊಂಡು ಬಂದು ಕೊಂದು ಹಾಕಿದ್ದರು. ಇದರಿಂದ ಸಿಟ್ಟಿಗೆದ್ದ ಬಾಲಕಿ ಗುಲ್‌, ಮನೆಯಲ್ಲಿದ್ದ ಎಕೆ 47 ರೈಫ‌ಲ್‌ ತೆಗೆದು ಕೊಂಡು ಗುಂಡು ಹಾರಿಸಿ, ಇಬ್ಬರು ಹಂತಕರನ್ನು ಹತ್ಯೆ ಮಾಡಿದ್ದಾರೆ. ಅಲ್ಲದೆ ತನ್ನ ಕಿರಿಯ ಸಹೋದರರನ್ನು ರಕ್ಷಿಸಿದ್ದಾರೆ. ಘಟನೆ ಬಳಿಕ ಹಲವು ಮಂದಿ ಉಗ್ರರು ಮನೆಗೆ ಬಂದು ಆಕೆಯ ಮೇಲೆ ದಾಳಿ ನಡೆಸಲು ಯತ್ನಿಸಿದ್ದಾರೆ. ಗ್ರಾಮಸ್ಥರು ಪ್ರತಿರೋಧ ತೋರಿದ್ದಕ್ಕಾಗಿ ಉಗ್ರರು ಪರಾರಿಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next