Advertisement

ಕೋವಿಡ್ ಕಳವಳದ ನಡುವೆ ಅಫ್ಘಾನ್‌ ಕ್ರಿಕೆಟಿಗರ ಅಭ್ಯಾಸ ಆರಂಭ

05:29 PM Jun 08, 2020 | keerthan |

ಕಾಬೂಲ್‌: ರಶೀದ್‌ ಖಾನ್‌, ಮೊಹಮ್ಮದ್‌ ನಬಿ ಸೇರಿದಂತೆ ಅಫ್ಘಾನಿಸ್ಥಾನದ ಕ್ರಿಕೆಟಿಗರು ರವಿವಾರ ಇಲ್ಲಿನ “ಕಾಬೂಲ್‌ ಕ್ರಿಕೆಟ್‌ ಸ್ಟೇಡಿಯಂ’ನಲ್ಲಿ ಅಭ್ಯಾಸ ಆರಂಭಿಸಿದರು.

Advertisement

ಇವರ ಅಭ್ಯಾಸ  ಒಂದು ತಿಂಗಳ ಕಾಲ ಮುಂದುವರಿಯಲಿದೆ ಎಂದು ಅಫ್ಘಾನಿಸ್ಥಾನ ಕ್ರಿಕೆಟ್‌ ಮಂಡಳಿ ತಿಳಿಸಿದೆ.

“ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಅಭ್ಯಾಸವನ್ನೆಲ್ಲ ಈ ವೇಳೆ ನಡೆಸಲಾಗುವುದು. ಕೋವಿಡ್‌-19 ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಎಲ್ಲ ಮಾರ್ಗಸೂಚಿಯನ್ನು ತಪ್ಪದೇ ಪಾಲಿಸಲಾಗುವುದು’ ಎಂದು ಎಸಿಬಿ ಹೇಳಿದೆ.

ಒಟ್ಟು 22 ಮಂದಿ ಆಟಗಾರರು ಅಭ್ಯಾಸದಲ್ಲಿ ತೊಡಗಿದ್ದಾರೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕಾರಣದಿಂದ ಒಮ್ಮೆಗೆ ಐದರಿಂದ ಆರು ಆಟಗಾರರು ಮಾತ್ರ ಮೈದಾನದಲ್ಲಿ ಅಭ್ಯಾಸ ನಡೆಸುತ್ತಾರೆ. ಒಂದು ವೇಳೆ ಆಟಗಾರರಿಗೆ ಅನಾರೋಗ್ಯ ಕಂಡು ಬಂದಲ್ಲಿ ಅಂಥವರನ್ನು ಸ್ಟೇಡಿಯಂಗೆ ಕರೆಸಿಕೊಳ್ಳುವುದಿಲ್ಲ ಎಂದು ಎಸಿಬಿ ವಕ್ತಾರ ಅಬ್ದುಲ್ಲಾ ಪಕ್ತಾನಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next