ಬೆಂಗಳೂರು: ಅಮೋಘ ಪ್ರದರ್ಶನ ನೀಡಿದ ಬೆಂಗಳೂರು ಎಫ್ಸಿ ತಂಡ ಎಎಫ್ಸಿ ಕಪ್‌ನ ಅರ್ಹತಾ ಸುತ್ತಿನ 2ನೇ ಹಂತದ ಪಂದ್ಯದಲ್ಲಿ ಟ್ರಾನ್ಸ್‌ಪೋರ್ಟ್ ಯುನೈಟೆಡ್ ಎಫ್ಸಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಪ್ಲೇಆಫ್ ಲೆಗ್‌ಗೆ ಪ್ರವೇಶ ಪಡೆದಿದೆ.
ಮಂಗಳವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ 3-0 ಗೋಲುಗಳಿಂದ ಗೆಲುವು ಸಾಧಿಸಿದೆ. ಬೆಂಗಳೂರು ತಂಡದ ಪರ ಬೈತಾಂಗ್ (27ನೇ ನಿಮಿಷ), ಡೇನಿಯಲ್ (54ನೇ ನಿಮಿಷ), ಹರ್ಮನ್‌ಜೋತ್ (62ನೇ ನಿಮಿಷ) ತಲಾ ಒಂದು ಗೋಲು ಸಿಡಿಸಿ ಗೆಲುವಿನ ರುವಾರಿಯಾದರು. ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡ ಬೆಂಗಳೂರು ತಂಡಕ್ಕೆ ಇತ್ತು. ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಬೆಂಗಳೂರು ಎಫ್ಸಿ ಆಟಗಾರರು ಯಶಸ್ವಿಯಾದರು. ಪಂದ್ಯ
ಆರಂಭದಿಂದಲೇ ಎರಡೂ ತಂಡಗಳ ನಡುವೆ ರೋಚಕ ಹೋರಾಟವಿತ್ತು.
ಬೆಂಗಳೂರು ತಂಡ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಹೀಗಾಗಿ 27ನೇ ನಿಮಿಷದಲ್ಲಿಯೇ ಬೈತಾಂಗ್ ಆಕರ್ಷಕವಾಗಿ ಚೆಂಡನ್ನು ಬಲೆಯೊಳಗೆ ಸೇರಿಸಿ ಬೆಂಗಳೂರಿಗೆ ಮುನ್ನಡೆ ತಂದರು. ಇದರಿಂದ ಮೊದಲ ಅವಧಿಯಲ್ಲಿ ಬೆಂಗಳೂರು 1-0 ಮುನ್ನಡೆ ಸಾಧಿಸಿತ್ತು. ಎರಡನೇ ಅವಧಿಯಲ್ಲಿ ಆಕ್ರಮಣಕಾರಿ ಆಟವನ್ನು ಮತ್ತೂಷ್ಟು ಚುರುಕಾಗಿಸಿದ ಬೆಂಗಳೂರು ತಂಡ ಮತ್ತೆ 2 ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಇಂಡಿಯನ್ ಸೂಪರ್ ಲೀಗ್‌ನಲ್ಲಿ ಕೂಡ ಬೆಂಗಳೂರು ಎಫ್ಸಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ.