Advertisement

ಏರೋ ಇಂಡಿಯಾ: ಬಿಎಂಟಿಸಿ ಬಸ್‌ ಸೇವೆ

06:27 AM Feb 20, 2019 | |

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಫೆ. 20ರಿಂದ 24ರವರೆಗೆ ನಡೆಯಲಿರುವ “ಏರೋ ಇಂಡಿಯಾ-2019′ ವೀಕ್ಷಿಸಲು ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನಗರದ ವಿವಿಧೆಡೆಯಿಂದ ವೈಮಾನಿಕ ಪ್ರದರ್ಶನ ನಡೆಯುವ ಸ್ಥಳಕ್ಕೆ ಬಿಎಂಟಿಸಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಕಲ್ಪಿಸಿದೆ. 

Advertisement

ವೈಮಾನಿಕ ಪ್ರದರ್ಶನವು ಬೆಳಗ್ಗೆ 10ಗಂಟೆ ಹಾಗೂ ಮಧ್ಯಾಹ್ನ 2ಕ್ಕೆ ನಡೆಯಲಿದೆ. ಅದಕ್ಕೆ ಪೂರಕವಾಗಿ ನಿತ್ಯ ಬೆಳಗ್ಗೆ 8ರಿಂದ ನಗರದ ವಿವಿಧ ಭಾಗಗಳಿಂದ ಯಲಹಂಕ ವಾಯುನೆಲೆಗೆ ಹೆಚ್ಚುವರಿ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ. 

ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಬಿಎಂಟಿಸಿಯ ಯಶವಂತಪುರ ಬಸ್‌ ನಿಲ್ದಾಣ, ಶಾಂತಿನಗರ, ಜಯನಗರ, ಕೋರಮಂಗಲ ನಿಲ್ದಾಣಗಳು ಸೇರಿದಂತೆ ಮತ್ತಿತರ ಕಡೆಗಳಲ್ಲಿ  ಸಾರ್ವಜನಿಕರ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. 

ಹೆಚ್ಚುವರಿ ಬಸ್‌ಗಳ ವಿವರ 
ಎಲ್ಲಿಂದ    ಎಲ್ಲಿಗೆ    ಪ್ರಯಾಣ ದರ (ರೂ.ಗಳಲ್ಲಿ)

-ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ    ಎಡಿವಿಎ ಗೇಟ್‌    40
-ಎಚ್‌ಎಸ್‌ಆರ್‌ ಬಡಾವಣೆ    ಎಡಿವಿಎ ಗೇಟ್‌    50 
-ಎಚ್‌ಎಎಲ್‌ ಕಲ್ಯಾಣ ಮಂಟಪ    ಎಡಿವಿಎ ಗೇಟ್‌    40
-ಬನಶಂಕರಿ    ಎಡಿವಿಎ ಗೇಟ್‌    45
-ಕೆಂಗೇರಿ    ಎಡಿವಿಎ ಗೇಟ್‌    45
-ಪೀಣ್ಯ 2ನೇ ಹಂತ    ಎಡಿವಿಎ ಗೇಟ್‌    40
-ಸೆಂಟ್ರಲ್‌ ಸಿಲ್ಕ್ ಬೋರ್ಡ್‌ ಜಂಕ್ಷನ್‌    ಎಡಿವಿಎ ಗೇಟ್‌    45
-ಟಿನ್‌ ಫ್ಯಾಕ್ಟರ್‌ರಿ    ಎಡಿವಿಎ ಗೇಟ್‌    40
-ಯಶವಂತಪುರ ಬಸ್‌ ನಿಲ್ದಾಣ    ಎಡಿವಿಎ ಗೇಟ್‌    40
-ಕೆಂಪೇಗೌಡ ಬಸ್‌ ನಿಲ್ದಾಣ    ಎಡಿವಿಎ ಗೇಟ್‌    40
-ಹೆಬ್ಟಾಳ    ಎಡಿವಿಎ ಗೇಟ್‌    40

ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ವಿಶೇಷ ಸಾರಿಗೆ 
ಎಲ್ಲಿಂದ     ಎಲ್ಲಿಗೆ    ಪ್ರಯಾಣ ದರ (ರೂ.ಗಳಲ್ಲಿ)

-ಕೆಂಪೇಗೌಡ ಬಸ್‌ ನಿಲ್ದಾಣದಿಂದ    ಹುಣಸಮಾರನಹಳ್ಳಿ    160
-ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ/ಹೆಬ್ಟಾಳ    ಹುಣಸಮಾರನಹಳ್ಳಿ    160
-ಇತರೆ ಸ್ಥಳಗಳಿಂದ (ಚಂದಾಪುರ, ಬನಶಂಕರಿ ಟಿಟಿಎಂಸಿ, ಐಟಿಪಿಎಲ್‌, ಸಿಲ್ಕ್ ಬೋರ್ಡ್‌, ಬಿಟಿಎಂ ಬಡಾವಣೆ, ಹೆಚ್‌ಎಸ್‌ಆರ್‌ ಬಡಾವಣೆ, ಎಲೆಕ್ಟ್ರಾನಿಕ್‌ -ಸಿಟಿ, ದೊಡ್ಡನೆಕ್ಕುಂದಿ ಮುಂತಾದ ಸ್ಥಳಗಳಿಂದ)    ಹುಣಸಮಾರನಹಳ್ಳಿ    215 

Advertisement
Advertisement

Udayavani is now on Telegram. Click here to join our channel and stay updated with the latest news.

Next