Advertisement

ಅಡ್ಯಂತಾಯರು ಯುವ ಪೀಳಿಗೆಗೆ ಮಾದರಿ: ಯು.ಟಿ. ಖಾದರ್‌

11:10 PM Aug 06, 2023 | Team Udayavani |

ಮಂಗಳೂರು: “ಚಂದ್ರಾಮೃತ’ ಕಾರ್ಯಕ್ರಮ ಕೇವಲ ಹುಟ್ಟುಹಬ್ಬದ ಆಚರಣೆಯಲ್ಲ, ಯುವ ಪೀಳಿಗೆಗೆ ಆದರ್ಶ ವ್ಯಕ್ತಿಯೊಬ್ಬರನ್ನು ಪರಿಚಯಿಸುವ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳಲು ಪ್ರೇರಣೆ ನೀಡುವ ಸಮಾರಂಭ ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್‌ ಹೇಳಿದರು.

Advertisement

ಸಾಮಾಜಿಕ, ಧಾರ್ಮಿಕ ಸಹಿತ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿ ಕೊಂಡಿ ರುವ ಕುತ್ತಾರಗುತ್ತು ಚಂದ್ರಹಾಸ ಅಡ್ಯಂತಾಯ ಅವರ 75ನೇ ಜನ್ಮದಿನದ ಅಂಗವಾಗಿ ಶನಿವಾರ ಅಡ್ಯಾರ್‌ ಗಾರ್ಡನ್‌ನಲ್ಲಿ ಆಯೋಜಿಸಲಾದ “ಚಂದ್ರಾಮೃತ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

75 ವರ್ಷಗಳ ಜೀವನದಲ್ಲಿ ಅಡ್ಯಂತಾಯರು ಸಮಾಜಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಸರ್ವ ಧರ್ಮೀಯರ ಪ್ರೀತಿ, ವಿಶ್ವಾಸ ಸಂಪಾದಿಸಿ ದ್ದಾರೆ. ತಮಗೆ ಉದ್ಯೋಗ ನೀಡಿ, ಜೀವನ ರೂಪಿಸಿದವರನ್ನು ಇಂದಿಗೂ ನೆನಪಿಸಿಕೊಂಡು ಸ್ವಾಮಿ ನಿಷ್ಠೆ ಮೆರೆಯುತ್ತಿದ್ದಾರೆ ಎಂದು ಶ್ಲಾಘಿಸಿದರು.

ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ನೈಜ ಸಾಧಕರೊಬ್ಬರಿಗೆ ಅಭಿನಂದನೆ ಸಂದಿದೆ. ಅಡ್ಯಂತಾಯರು 75ನೇ ಹುಟ್ಟುಹಬ್ಬ ವನ್ನು ಆಡಂಬರಕ್ಕೆ ಆಚರಿಸದೆ ಕಷ್ಟದಲ್ಲಿರು ವವರಿಗೆ ನೆರವಾಗುವ ಮೂಲಕ ಮಾದರಿಯಾಗಿದ್ದಾರೆ ಎಂದರು.

ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ಅವರು ಉದ್ಘಾಟಿಸಿ, ಸಮಾಜ ಸೇವೆಯ ಮೂಲಕ ಸಾಧನೆಗೆ ಚಂದ್ರಹಾಸ ಅಡ್ಯಂತಾಯರ ಜೀವನ ಅರ್ಪಿತವಾಗಿದೆ. ಪ್ರಮಾಣಿಕರ ಜತೆಗೆ ಸಮಾಜ ಇರುತ್ತದೆ ಎನ್ನುವುದಕ್ಕೆ ಅವರೇ ಸಾಕ್ಷಿ ಎಂದರು.

Advertisement

ಸಮ್ಮಾನ
ಚಂದ್ರಹಾಸ ಅಡ್ಯಂತಾಯ ಮತ್ತುಗೀತಾ ದಂಪತಿಯನ್ನು ಸಮ್ಮಾನಿಸಲಾಯಿತು. ಅಡ್ಯಂತಾಯರು ಮಾತ
ನಾಡಿ, ಸದಾನಂದ ಶೆಟ್ಟಿ ಮತ್ತು ನಿಟ್ಟೆ ವಿನಯ ಹೆಗ್ಡೆ ಅವರು ನನ್ನ ಎರಡು ಕಣ್ಣುಗಳಂತೆ. ಅವರಿಂದಲೇ ಈ ಸ್ಥಾನ
ಸಂಪಾದಿಸಿದ್ದೇನೆ. ಇನ್ನಷ್ಟು ಸಮಾಜಮುಖಿ ಕೆಲಸ ಮಾಡಲು ಎಲ್ಲರ ಆಶೀರ್ವಾದ ಬೇಕಾಗಿದೆ ಎಂದರು.

ಶ್ರೀದೇವಿ ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ| ಎ. ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸರಕಾರದ ಸಣ್ಣ ಕೈಗಾರಿಕಾ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಉದಯಚಂದ್ರ ಡಿ. ಸುವರ್ಣ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್‌, ಸಮಿತಿಯ ಗೌರವಾಧ್ಯಕ್ಷ ಕೆ.ಟಿ. ಸುವರ್ಣ ಉಪಸ್ಥಿತರಿದ್ದರು.

ಕದ್ರಿ ನವನೀತ್‌ ಶೆಟ್ಟಿ ಅಭಿನಂದನೆಯ ಮಾತುಗಳನ್ನಾಡಿ ದರು. ಅಭಿನಂದನ ಸಮಿತಿಯ ಅಧ್ಯಕ್ಷ ಪ್ರಸಾದ್‌ ರೈ ಕಲ್ಲಿಮಾರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು ವಂದಿಸಿದರು. ನವೀನ್‌ ಶೆಟ್ಟಿ ಎಡೆ¾ಮಾರ್‌ ನಿರ್ವಹಿಸಿದರು.

ಸಹಾಯಹಸ್ತ
ಅಭಿನಂದನ ಕಾರ್ಯಕ್ರಮದ ಭಾಗವಾಗಿ ನಾಟೆಕಲ್ಲು ಸಮೀಪದ ತಿಬ್ಲೆಪದವು, ಪರಂಡೆಯಲ್ಲಿ ನಿರ್ಮಿಸಲಾದ ಪ್ರಯಾಣಿಕರ ಬಸ್‌ ತಂಗುದಾಣದ ವರ್ಚುವಲ್‌ ಉದ್ಘಾಟನೆ ನೆರವೇರಿತು. ಅನಾರೋಗ್ಯ ಸೇರಿದಂತೆ ಆರ್ಥಿಕವಾಗಿ ಬಳಲುತ್ತಿರುವವರ ಕುಟುಂಬಕ್ಕೆ ನೆರವು, ಶೈಕ್ಷಣಿಕ ಸಹಾಯಧನ, ಲ್ಯಾಪ್‌ಟಾಪ್‌ ವಿತರಣೆ, ಮೂವರು ಸಾಧಕಿಯರಿಗೆ ಗೌರವಾರ್ಪಣೆ ನಡೆಯಿತು. ಚಂದ್ರಹಾಸ ಅಡ್ಯಂತಾಯರ “ಬದುಕಿನ ಹೆಜ್ಜೆ’ ಸಾಕ್ಷ é ಚಿತ್ರವನ್ನು ಪ್ರದರ್ಶಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next