Advertisement

ಆಡಳಿತದಲ್ಲಿ ಕನ್ನಡದ ಜಾರಿಗೆ ನುಡಿ-6 ಬಳಸಲು ಸಲಹೆ

11:25 AM Jun 26, 2017 | Team Udayavani |

ಬೆಂಗಳೂರು: ಏಕಸಾಮ್ಯ ಮತ್ತು ಏಕರೂಪ ಇರದ ಕನ್ನಡ ತಂತ್ರಾಂಶಗಳಿಂದ ಸಂವಹನಕ್ಕೆ ತೊಡಕುಂಟಾಗುತ್ತಿದೆ. ಅದರ ಬದಲು ಕನ್ನಡ ಗಣಕ ಪರಿಷತ್ತು ಅಭಿವೃದ್ಧಿಪಡಿಸಿರುವ ನುಡಿ-6 ತಂತ್ರಾಂಶವನ್ನು ಆಡಳಿತ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಅಳವಡಿಸಿಕೊಂಡರೆ ಕನ್ನಡ ಹೆಚ್ಚು ಪರಿಣಾಮಕಾರಿಯಾಗಿ ಜಾರಿಯಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

Advertisement

 ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆದ ಕನ್ನಡ ತಂತ್ರಾಂಶ ತಯಾರಕರ, ಪ್ರಕಾಶನ ಮತ್ತು ಮುದ್ರಣ ಮಾಧ್ಯಮದವರ ಸಭೆಯಲ್ಲಿ ಮಾತನಾಡಿದ ಅವರು, ಮುಕ್ತ ತಂತ್ರಾಂಶಗಳನ್ನು ಅಳವಡಿಸಿಕೊಳ್ಳುವುದರಿಂದ ಬಳಕೆದಾರರು ಹೆಚ್ಚು ಸ್ವತಂತ್ರವಾಗಿ, ಯಾವುದೇ ಅಳುಕಿಲ್ಲದೆ ಮತ್ತು ಅಧಿಕೃತವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕನ್ನಡ ನುಡಿ 6ರ ಕುರಿತು ಮಾತನಾಡಿದ ಕನ್ನಡ ಗಣಕ ಪರಿಷತ್ತಿನ ಜಿ.ಎನ್‌.ನರಸಿಂಹಮೂರ್ತಿ, ನುಡಿ-6 ಯುನಿಕೋಡ್‌ ತಂತ್ರಾಂಶ ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಂಡಿದ್ದು ಹೆಚ್ಚು ದಕ್ಷತೆಯಿಂದಲೂ ಮತ್ತು ಸರಳವಾಗಿಯೂ ಇದೆ. ಅಂತಜಾìಲದ ಮೂಲಕ ಅಥವಾ ಯಾವುದೇ ತಂತ್ರಾಂಶ ಬಳಸುತ್ತಿದ್ದರೂ ನುಡಿ-6 ಯುನಿಕೋಡ್‌ ತಂತ್ರಾಂಶ ಬಳಕೆ ತುಂಬಾ ಸರಳ ಎಂದರು. 

ತಜ್ಞರಾದ ಬೇಳೂರು ಸುದರ್ಶನ ಮಾತನಾಡಿ, “ದುಬಾರಿ ವೆಚ್ಚದ ಮತ್ತು ಅನಧಿಕೃತ ತಂತ್ರಾಂಶಗಳನ್ನು ಬಳಸುವುದರಿಂದ ಜನರು ಹೊರಬಂದು ನಿರ್ಭಯವಾಗಿ ಮುಕ್ತವಾದ ಮತ್ತು ಉಚಿತವಾದ ತಂತ್ರಾಂಶಗಳನ್ನು ಅದರಲ್ಲೂ ಕನ್ನಡ ಯುನಿಕೋಡ್‌ ಬೆಂಬಲಿಸುವ ತಂತ್ರಾಂಶಗಳನ್ನು ಬಳಸಬೇಕು. ಇದರಿಂದ ಸಂವಹನ ಮಾಧ್ಯಮದಲ್ಲಿ ಮತ್ತು ಮಾಹಿತಿ ಕ್ಷೇತ್ರದಲ್ಲಿ ಪಾರದರ್ಶಕತೆಯನ್ನು ಹಾಗೂ ಕನ್ನಡದ ಅಸ್ಮಿತೆಯನ್ನು ಹೊಂದಲು ಸಾಧ್ಯ,’ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಪ್ರಕಾಶ್‌ ಜೈನ್‌, ಗಿರೀಶ್‌ಪಟೇಲ್‌, ಕಾರ್ಯದರ್ಶಿ ಡಾ.ಕೆ.ಮುರಳಿಧರ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next