ದಾವಣಗೆರೆ: ಆತ್ಮವಿಶ್ವಾಸ, ಕೌಶಲ್ಯ ಮತ್ತು ಸಾಮರ್ಥ್ಯದಿಂದ ಜೀವನದ ಗುರಿ ಸಾಧಿಸುವ ಛಲ ಬೆಳೆಸಿಕೊಳ್ಳಬೇಕು ಎಂದು ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ| ಪ್ರಿಯತಮ್‌ಕುಮಾರ್ ತಿಳಿಸಿದ್ದಾರೆ.
ಜಿ.ಎಂ.ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಮೂರು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ವಾತಾವರಣದಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ವಿಭಾಗದ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ ಇವೆ.
ತಮ್ಮ ಗುರಿ ಸಾಧನೆಗೆ ಇಂತಹ ಕಾರ್ಯಾಗಾರಗಳು ಉಪಯುಕ್ತವಾಗಲಿ ಎಂದು ಆಶಿಸಿದರು. ಶಿವಮೊಗ್ಗದ ಜೆಎನ್‌ಸಿಇ ಕಾಲೇಜಿನ ಡಾ| ಪಿ. ಮಂಜುನಾಥ್, ಇಂದಿನ ದಿನಗಳಲ್ಲಿ ಬಹಳಷ್ಟು ಕಂಪನಿಗಳಲ್ಲಿ ಎಲ್‌ಒಟಿ ತಂತ್ರಜ್ಞಾನದ ಬಳಕೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ತಂತ್ರಜ್ಞಾನದ ಮಹತ್ವ ಅರಿತು ಸತತ ಅಧ್ಯಯನದ ಮೂಲಕ ಸಮಗ್ರ ಮಾಹಿತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ| ಪಿ. ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಕ್ರಮದ ಜೊತೆಗೆ ಹೊಸ ಪರಿಕಲ್ಪನೆ ಹಾಗೂ ಪ್ರಾಯೋಗಿಕವಾಗಿ ಆಧುನಿಕ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಬಳಸಿಕೊಂಡು ಪ್ರಾಜೆಕ್ಟ್ ಸಿದ್ಧಪಡಿಸಬೇಕು. ಇಂತಹ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಲೇಜು ಉಪ ಪ್ರಾಚಾರ್ಯ ಡಾ| ಬಿ.ಆರ್. ಶ್ರೀಧರ್, ಕಾರ್ಯಾಗಾರದ ಮುಖ್ಯ ಸಂಯೋಜಕ ಡಾ| ಡಿ.ಎನ್. ಚಂದ್ರಪ್ಪ, ಜಿ.ಪಿ. ರಘುದತ್ತೇಶ್, ಅರುಣ್ ಎ. ಬಡಿಗೇರ್, ಬಿ. ರವಿತೇಜ್, ವೈ. ವಿಕಾಸ್ ಇತರರು ಇದ್ದರು. ಎಚ್.ಎಸ್. ಸುಮಾ ಸ್ವಾಗತಿಸಿದರು. ಬಿ.ವಿ. ಸುಸ್ಮಿತಾ, ಸೋನಿಗುಪ್ತಾ ನಿರೂಪಿಸಿದರು. ಪ್ರೊ| ವಿಕಾಸ್ ಎತ್ನಾಳ್ ವಂದಿಸಿದರು.