Advertisement

ಬಿಜೆಪಿ ಪ್ರಣಾಳಿಕೆಗೆ ವೈದ್ಯರಿಂದ ಸಲಹೆ

07:20 AM Dec 21, 2017 | Team Udayavani |

ಬೆಂಗಳೂರು: ಮುಂಬರುವ ವಿಧಾನಸಬೆ ಚುನಾವಣೆಗೆ ಪ್ರಣಾಳಿಕೆ ಸಿದ್ಧಪಡಿಸಲು ಜನರ ಸಲಹೆಗಳನ್ನು ಪಡೆಯುತ್ತಿರುವ ಬಿಜೆಪಿ, ಇದೀಗ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಪ್ರಕಟಿಸಲು ತಜ್ಞ ವೈದ್ಯರ ಸಲಹೆ ಪಡೆಯಲು ಮುಂದಾಗಿದೆ.

Advertisement

ಈ ನಿಟ್ಟಿನಲ್ಲಿ ಮಲ್ಲೇಶ್ವರ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ನಡೆಯುತ್ತಿರುವ ನವ ಕರ್ನಾಟಕ ಜನಪರ ಶಕ್ತಿ- ನಿಮ್ಮ ಅಭಿಪ್ರಾಯಗಳೊಂದಿಗೆ ಮುನ್ನಡೆ ಕಾರ್ಯಕ್ರಮದಲ್ಲಿ ಗುರುವಾರ ಸಂಜೆ ಆರೋಗ್ಯ ರಕ್ಷಣೆ ಉಪಕ್ರಮಗಳ ಬಗ್ಗೆ ತಜ್ಞ ವೈದ್ಯರೊಂದಿಗೆ ಸಂವಾದ ಏರ್ಪಡಿಸಲಾಗಿದೆ.

ಗುರುವಾರ ಸಂಜೆ 6 ಗಂಟೆಗೆ ಭಾರತೀಯ ವಿದ್ಯಾಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ತಜ್ಞ ವೈದ್ಯರಾದ ಡಾ.ದೇವಿಪ್ರಸಾದ್‌ ಶೆಟ್ಟಿ, ಡಾ.ವೆಂಕಟೇಶ್‌ ತುಪ್ಪಿಲ್‌, ಡಾ.ಅಲೆಕ್ಸಾಂಡರ್‌ ಥೋಮಸ್‌, ಡಾ.ನಾಗೇಂದ್ರ ಸ್ವಾಮಿ, ಡಾ.ಗಿರಿಧರ್‌ ಬಾಬು, ಡಾ.ಮಲ್ಲೇಶ್‌ ಹುಲ್ಲಮನಿ ಸೇರಿದಂತೆ ಸುಮಾರು 25 ಮಂದಿ ಪಾಲ್ಗೊಳ್ಳಲಿದ್ದಾರೆ.

ಸೇವಾ ಕ್ಷೇತ್ರದಲ್ಲಿ ಆರೋಗ್ಯ ಕ್ಷೇತ್ರ ಪ್ರಮುಖವಾಗಿದ್ದು, ಜನರ ಆರೋಗ್ಯ ಸಂರಕ್ಷಣೆ ದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವೈದ್ಯರಿಂದ ಮಾಹಿತಿ ಪಡೆಯಲಾಗುತ್ತದೆ. ನಂತರ ಈ ಕುರಿತು ಪ್ರಮುಖ ಅಂಶಗಳನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next