Advertisement

Gadar 2 vs OMG 2: ಒಂದೇ ದಿನ 2 ಸಿನಿಮಾ ರಿಲೀಸ್;ಅಡ್ವಾನ್ಸ್‌ ಬುಕಿಂಗ್‌ನಲ್ಲಿ ಯಾರು ಮುಂದೆ?

02:52 PM Aug 03, 2023 | Team Udayavani |

ಮುಂಬಯಿ: ಬಾಲಿವುಡ್‌ ನಲ್ಲಿ ಬಾಕ್ಸ್‌ ಆಫೀಸ್‌ ಜಿದ್ದಾಜಿದ್ದಿ ಮತ್ತೆ ಆರಂಭವಾಗಿದೆ. ಆಗಸ್ಟ್‌ 11 ರಂದು ಎರಡು ದೊಡ್ಡ ಸಿನಿಮಾಗಳು ರಿಲೀಸ್‌ ಆಗಲಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಯಾವ ಸಿನಿಮಾ ಸದ್ದು ಮಾಡುತ್ತದೆ ಎನ್ನುವ ಕುತೂಹಲ ಮೂಡಿದೆ.

Advertisement

ಒಂದು ಕಡೆ ಅಕ್ಷಯ್‌ ಕುಮಾರ್‌ ಅವರ ʼಓ ಮೈ ಗಾಡ್‌ -2ʼ, ಹಾಗೂ ಸನ್ನಿ ಡಿಯೋಲ್‌ ಅವರ ʼಗದರ್‌-2ʼ ಸಿನಿಮಾಗಳು ರಿಲೀಸ್‌ ಆಗಲಿವೆ. ಈ ಎರಡೂ ಸಿನಿಮಾದ ಮೊದಲ ಭಾಗ ಬಾಲಿವುಡ್‌ ನಲ್ಲಿ ಹಿಟ್‌ ಸಾಲಿಗೆ ಸೇರಿತು. ಇದರ ಸೀಕ್ವೆಲ್‌ ಮೇಲೆ ಬಹು ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.

ಕಳೆದ ವರ್ಷವೂ ಆಗಸ್ಟ್‌ 11 ಕ್ಕೆ ರಿಲೀಸ್‌ ಆಗಿತ್ತು ಎರಡು ಸಿನಿಮಾ:  ಕಳೆದ ವರ್ಷ ಆ.11 ರಂದು ಬಿಟೌನ್‌ ನಲ್ಲಿ ಎರಡು ದೊಡ್ಡ ಸಿನಿಮಾಗಳು ರಿಲೀಸ್‌ ಆಗಿತ್ತು.  ಇದರಲ್ಲಿ ಅಕ್ಷಯ್‌ ಕುಮಾರ್‌ ಅವರ ʼರಕ್ಷಾ ಬಂಧನ್‌ʼ ಸಿನಿಮಾವೂ ಒಂದಾಗಿತ್ತು. ಇನ್ನೊಂದು ಸಿನಿಮಾ ಆಮಿರ್‌ ಖಾನ್‌ ಅವರ ʼಲಾಲ್‌ ಸಿಂಗ್‌ ಚಡ್ಡಾʼ. ಈ ಎರಡೂ ಸಿನಿಮಾಗಳು ಬಾಕ್ಸ್‌ ಆಫೀಸ್‌ ನಲ್ಲಿ ಹೀನಾಯವಾಗಿ ಸೋಲುಂಡಿತ್ತು.

ಹೇಗಿದೆ ಅಡ್ವಾನ್ಸ್‌ ಬುಕಿಂಗ್ ರೆಸ್ಪಾನ್ಸ್:‌ 

ಗದರ್‌ – 2:  ಸನ್ನಿ ಡಿಯೋಲ್‌ ಹಾಗೂ ಅಮೀಶಾ ಪಟೇಲ್ ಅಭಿನಯಯದ ʼಗದರ್‌ -2ʼ ಸಿನಿಮಾದ ಟ್ರೇಲರ್‌ ಈಗಾಗಲೇ ಸದ್ದು ಮಾಡಿದೆ. ತಾರಾ ಸಿಂಗ್‌ ಅವತಾರದಲ್ಲಿ ಸನ್ನಿ ಡಿಯೋಲ್‌ ಮಿಂಚಿದ್ದಾರೆ. ಸಿನಿಮಾದ ಮೊದಲ ಭಾಗಕ್ಕೆ ಸಿಕ್ಕ ಪ್ರತಿಕ್ರಿಯೆ ಎರಡನೇ ಭಾಗಕ್ಕೂ ಸಿಗುವ ನಿರೀಕ್ಷೆ ಚಿತ್ರತಂಡಕ್ಕಿದೆ. ಆ  ನಿಟ್ಟಿನಲ್ಲಿ  ಸಿನಿಮಾದ ಅಡ್ವಾನ್ಸ್‌ ಬುಕಿಂಗ್ ಆರಂಭಗೊಂಡಿದೆ.

Advertisement

ಆ. 3 ರ ಬೆಳಗ್ಗೆ 11 ಗಂಟೆಯವರೆಗೆ ಪಿವಿಆರ್‌ನಲ್ಲಿ 1700 ಟಿಕೆಟ್‌ಗಳು, ಐನಾಕ್ಸ್‌ನಲ್ಲಿ 1200 ಟಿಕೆಟ್‌ಗಳು ಮತ್ತು ಸಿನೆಪೊಲಿಸ್‌ನಲ್ಲಿ 5200 ಟಿಕೆಟ್‌ಗಳು ಬುಕ್‌ ಆಗಿವೆ.  ರಿಲೀಸ್‌ ನ 8 ದಿನಗಳ ಮೊದಲು ʼಗದರ್-2‌ʼ ಸಿನಿಮಾದ 8 ಸಾವಿರಕ್ಕೂ ಹೆಚ್ಚು ಟಿಕೆಟ್‌ ಗಳು ಮಾರಾಟವಾಗಿದೆ.

ಇದನ್ನೂ ಓದಿ: ʼಗಗನʼದಲ್ಲಿ ʼಗಾಳಿಪಟʼ ಹಾರಿಸಿದ ಅನಂತ್‌ ನಾಗ್‌ ಸಿನಿ ಪಯಣಕ್ಕೆ 50ರ ಸಂಭ್ರಮ: ಶುಭಕೋರಿದ ನಟರು

ʼಓ ಮೈ ಗಾಡ್-2‌ʼ: ಬಾಲಿವುಡ್‌ ನ ಮತ್ತೊಂದು ಬಹು ನಿರೀಕ್ಷಿತ ಸೀಕ್ವೆಲ್‌ ಅಕ್ಷಯ್‌ ಕುಮಾರ್‌ ಅವರ ʼಓ ಮೈ ಗಾಡ್‌ -2ʼ. ಸಿನಿಮಾದ ಟಿಕೆಟ್‌ ಬುಕಿಂಗ್‌ ಟ್ರೇಲರ್‌ ರಿಲೀಸ್‌ ಗೂ ಮುನ್ನ ಜೋರಾಗಿದೆ ( ಈಗ ಟ್ರೇಲರ್‌ ರಿಲೀಸ್‌ ಆಗಿದೆ). ಆ. 3 ರ ಬೆಳಗ್ಗೆ 11 ಗಂಟೆಯವರೆಗೆ ಪಿವಿಆರ್‌ ನಲ್ಲಿ 1100 ಟಿಕೆಟ್‌ಗಳು, ಐನಾಕ್ಸ್‌ ನಲ್ಲಿ 550 ಟಿಕೆಟ್‌ಗಳು ಮತ್ತು ಸಿನೆಪೊಲಿಸ್‌ನಲ್ಲಿ ನಲ್ಲಿ 350 ಟಿಕೆಟ್‌ಗಳು ಮುಂಗಡವಾಗಿ ಮಾರಾಟವಾಗಿದೆ. ಅಕ್ಷಯ್‌ ಕುಮಾರ್‌ ಕಳೆದ ಸಿನಿಮಾಗಳನ್ನು ಹೋಲಿಸಿದರೆ ʼಓ ಮೈ ಗಾಡ್‌ -2ʼ ಅಡ್ವಾನ್ಸ್‌ ಬುಕಿಂಗ್‌ ನಲ್ಲೇ ಸದ್ದು ಮಾಡುತ್ತಿದೆ. ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದ್ದು, ಅಡ್ವಾನ್ಸ್‌ ಬುಕಿಂಗ್‌ ನಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ.

1971 ರ ಇಂಡೋ-ಪಾಕಿಸ್ತಾನ ಯುದ್ಧದ ಸಮಯದಲ್ಲಿ, ತಾರಾ ಸಿಂಗ್ ತನ್ನ ಮಗ ಚರಣಜೀತ್‌ನನ್ನು ಮನೆಗೆ ಕರೆತರಲು ಪಾಕಿಸ್ತಾನಕ್ಕೆ ಹಿಂದಿರುಗುವ ಕಥೆ ʼಗದರ್‌ -2ʼ ನಲ್ಲಿದೆ.

ಲೈಂಗಿಕ ಶಿಕ್ಷಣದ ಕುರಿತು ʼಓ ಮೈ ಗಾಡ್‌ -2ʼ ಸಿನಿಮಾದ ಕಥೆ ಸಾಗುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next