Advertisement

ಮದುವೆ ಪಾವಿತ್ರ್ಯ ರಕ್ಷಣೆಗೆ ವ್ಯಭಿಚಾರ ಶಿಕ್ಷಾರ್ಹ: SCಗೆ ಕೇಂದ್ರ

04:52 PM Jul 11, 2018 | Team Udayavani |

ಹೊಸದಿಲ್ಲಿ : ಮದುವೆಯ ಪಾವಿತ್ರ್ಯವನ್ನು ಕಾಪಿಡಲು ವ್ಯಭಿಚಾರ ಶಿಕ್ಷಾರ್ಹ ಅಪರಾಧವಾಗಿ ಉಳಿಯಬೇಕು ಎಂದು ಕೇಂದ್ರ ಸರಕಾರ ಇಂದು ಸರ್ವೋಚ್ಚ ನ್ಯಾಯಾಲಯಕ್ಕೆ ಹೇಳಿತು.

Advertisement

ಜೋಸೆಫ್ ಶೈನ್‌ ಅವರ ಅರ್ಜಿಯನ್ನು ವಿರೋಧಿಸಿ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಅಫಿದಾವಿತ್‌ನಲ್ಲಿ ಕೇಂದ್ರ ಸರಕಾರ “ವ್ಯಭಿಚಾರದ ಅಪರಾಧಕ್ಕೆ ಪುರುಷ ಮತ್ತು ಮಹಿಳೆ ಇಬ್ಬರೂ ಸಮಾನವಾಗಿ ಬಾಧ್ಯಸ್ಥರಾಗಿರುತ್ತಾರೆ’ ಎಂದು ಹೇಳಿತು.

ಮದುವೆಯ ಪಾವಿತ್ರ್ಯವನ್ನು ರಕ್ಷಿಸುವುದಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆ.497ರಡಿ ವ್ಯಭಿಚಾರವು ಅಪರಾಧವಾಗಿರುತ್ತದೆ. ಇದನ್ನು  ಸಡಿಲುಗೊಳಿಸಿದ್ದೇ ಆದಲ್ಲಿ ಅದು ಮದುವೆ ಎಂಬ ಪವಿತ್ರ ಬಂಧಕ್ಕೆ ಧಕ್ಕೆ ಉಂಟುಮಾಡುತ್ತದೆ ಎಂದು ಕೇಂದ್ರ ಸರಕಾರ ಹೇಳಿತು.

157 ವರ್ಷಗಳ ಹಿಂದಿನ ಬ್ರಿಟಿಷರ ಕಾಲದ ವ್ಯಭಿಚಾರದ ಕಾನೂನು ಹೇಳುತ್ತದೆ : ಒಬ್ಬ  ಪುರುಷನು ಬೇರೊಬ್ಬ ಪುರುಷನ ಪತ್ನಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದಲ್ಲಿ ಆ ಅಪರಾಧಕ್ಕೆ ಐದು ವರ್ಷಗಳ ಜೈಲು ಮತ್ತು ದಂಡ ವಿಧಿಸತಕ್ಕದ್ದು.

Advertisement

Udayavani is now on Telegram. Click here to join our channel and stay updated with the latest news.

Next