Advertisement

ಉತ್ತಮ ಭವಿಷ್ಯಕ್ಕೆ ಜೀವನ ಮೌಲ್ಯ ಅಳವಡಿಸಿಕೊಳ್ಳಿ

11:40 AM Dec 23, 2021 | Team Udayavani |

ಕಾಳಗಿ: ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಮುಂದಿನ ಭವಿಷ್ಯಕ್ಕಾಗಿ ಜೀವನದ ಮೌಲ್ಯಗಳ ಮಹತ್ವ ಅರಿತು, ಅಳವಡಿಸಿಕೊಂಡರೆ ಮೌಲ್ಯಾಧರಿತ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಮೈಸೂರು-ಕಲಬುರಗಿ ಪ್ರಾದೇಶಿಕ ನಿರ್ದೇಶಕ ಸಂಗಮೇಶ ಹಿರೇಮಠ ಹೇಳಿದರು.

Advertisement

ಪಟ್ಟಣದ ಕಾಳೇಶ್ವರ ಪದವಿ ಮಹಾ ವಿದ್ಯಾಲಯದಲ್ಲಿ 2020-21ನೇ ಸಾಲಿನ ಬಿಎ, ಬಿಕಾಂ, ಬಿಎಸ್ಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು-ಕಲಬುರಗಿ ಕಲಿಕಾ ಕೇಂದ್ರಗಳ ಉದ್ಘಾಟನೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಶಿಕ್ಷಣಕ್ಕೆ ಕೊಡುವಷ್ಟೇ ಮಹತ್ವವನ್ನು ಮೌಲ್ಯಗಳಿಗೂ ಕೊಡಬೇಕು. ಈ ನಿಟ್ಟಿನಲ್ಲಿ ಸಂಬಂಧಗಳ ಮಹತ್ವ ಅರಿಯಬೇಕು. ವಿದ್ಯಾರ್ಥಿ ಜೀವನದಲ್ಲಿ ಸಿಗುವಂತ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡರೆ, ಗುರಿ ಸಾಧನೆ ಹಾದಿ ಸುಗಮವಾಗುತ್ತದೆ ಎಂದರು.

ಚಿತ್ತಾಪುರ ಅಬಕಾರಿ ಇನ್ಸ್‌ಪೆಕ್ಟರ್‌ ಧನರಾಜ ಹಳಖೇಡ ಮಾತನಾಡಿ, ವಿದ್ಯಾರ್ಥಿಗಳು ಗ್ರಾಮೀಣ ಭಾಗದರೆಂಬ ಕಿಳರಿಮೆ ಹೊಂದಬಾರದು. ಅನೇಕ ಉನ್ನತ ಹುದ್ದೆಗಳಲ್ಲಿ ಗ್ರಾಮೀಣ ಭಾಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಿದರು.

ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ಶೌಕತ್‌ಅಲಿ ನಾವದೀಕರ್‌, ಪ್ರಾಚಾರ್ಯ ಅಂಬದಾಸ ಮದನೆ, ವಿದ್ಯಾರ್ಥಿನಿ ಪ್ರಿಯಾಂಕ್‌, ಸಿದ್ಧು, ನಿಖೀತಾ ಮಲ್ಲಿಕಾರ್ಜುನ ಮಾತನಾಡಿದರು.

Advertisement

ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಸಂಗಪ್ಪ ಅರಣಕಲ್‌, ಚಿತ್ತಾಪುರ ಅಬಕಾರಿ ಇಲಾಖೆ ಪ್ರಥಮ ದರ್ಜೆ ಸಹಾಯಕ ರಾಘವೇಂದ್ರ ಔರದಕರ್‌, ಎಂ.ಡಿ. ಸೈಜೋದ್ದಿನ್‌, ಉಪನ್ಯಾಸಕರಾದ ಪ್ರಕಾಶ ಮಠಪತಿ, ಸಂತೋಷ ಕೊಂಡಂಪಳ್ಳಿ, ಮೈಬೂಬ್‌, ಸಂಗೀತಾ ಬೊಮ್ಮಣ್ಣಿ ಹಾಗೂ ಸಿಬ್ಬಂದಿ ಇದ್ದರು. ವಿದ್ಯಾರ್ಥಿ ರಂಜಿತಾ ಸ್ವಾಗತಿಸಿದರು, ಸುಧಾ, ಭಾಗ್ಯಶ್ರೀ ನಿರೂಪಿಸಿದರು, ಕಾವೇರಿ ಮಳಗಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next