ವಿಜಯಪುರ: ನಗರದ ಪ್ರತಿಷ್ಠಿತ ಎಕ್ಸ್‌ಲೆಂಟ್ ಶಿಕ್ಷಣ ಸಂಸ್ಥೆಗಳ ಆಡಳಿತಾಧಿ ಕಾರಿಯಾಗಿ ನಿವೃತ್ತ ಡಿಡಿಪಿಯು ಜೆ.ಎಸ್. ಪೂಜೇರಿ ಅ ಧಿಕಾರ ಸ್ವೀಕರಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಚೇರಮನ್ ಬಸವರಾಜ ಕೌಲಗಿ ಮಾತನಾಡಿ, ಜೆ.ಎಸ್. ಪೂಜೇರಿ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ, ಉಪ ನಿರ್ದೇಶಕರಾಗಿ, ಪ್ರಭಾರ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಅಪಾರ ಅನುಭವ ಹೊಂದಿದ್ದಾರೆ. ಇದೀಗ ನಮ್ಮ ಸಂಸ್ಥೆಗೆ ಆಡಳಿತಾಧಿ ಕಾರಿ ಆಗಿರುವುದು ಹೆಮ್ಮೆ ಎನಿಸಿದೆ ಎಂದರು.
ಸಂಸ್ಥೆಯ ಪ್ರಧಾನ ಕಾರ್ಯರ್ಶಿ ಶಿವಾನಂದ ಕೇಲೂರ ಮಾತನಾಡಿ, ಅನುಭವಿ ಜೆ.ಎಸ್. ಪೂಜೇರಿ ಮಾರ್ಗದರ್ಶನದಲ್ಲಿ ನಮ್ಮ ಸಂಸ್ಥೆ ಶೈಕ್ಷಣಿಕವಾಗಿ ಉತ್ತುಂಗಕ್ಕೆ ಏರುವ ವಿಶ್ವಾಸವಿದೆ ಎಂದರು. ಹಿರಿಯ ನಿರ್ದೇಶಕ ರಾಜಶೇಖರ ಕೌಲಗಿ ಮಾತನಾಡಿ, ಪೂಜೇರಿ ಅವರ ಸಮರ್ಥ ಮಾರ್ಗದರ್ಶನ, ಕ್ರಿಯಾಶೀಲ ನೇತೃತ್ವ, ಆದರ್ಶ ಮೌಲ್ಯಗಳಿಂದ ಸಂಸ್ಥೆಗೆ ಅಪಾರ ಲಾಭವಾಗಲಿದೆ ಎಂದರು.
ಸಂಸ್ಥೆಯ ಹಿರಿಯ ನಿರ್ದೇಶಕ ರಾಜಶೇಖರ ಕೌಲಗಿ ಅವರು ಪೂಜೇರಿಯವರ ಆಗಮನದಿಂದ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿದೆ ಎಂದರು. ಜೆ.ಎಸ್. ಪೂಜೇರಿ ಮಾತನಾಡಿ, ರಾಜ್ಯಾದ್ಯಂತ ಅದಾಗಲೇ ಕೀರ್ತಿ ಹೊಂದಿರುವ ಎಕ್ಸ್‌ಲೆಂಟ್ ಶಿಕ್ಷಣ ಸಂಸ್ಥೆಗೆ ಆಡಳಿತಾಧಿ ಕಾರಿ ಆಗುತ್ತಿರುವುದು ನನಗೂ ಸಂತಸ ತಂದಿದೆ. ಸಾಧಿ ಸುವ ಛಲಗಾರಿಕೆ ಹೊಂದಿರುವ ಸಂಸ್ಥೆ ತಮ್ಮ ಮೇಲೆ ಇಟ್ಟಿರುವ ನಂಬಿಕೆ-ವಿಶ್ವಾಸ ವೃದ್ಧಿಯಾಗುವಂತೆ ಪ್ರಾಮಾಣಿಕ ಸೇವೆ ಸಲ್ಲಿಸುವುದಾಗಿ ಹೇಳಿದರು.
ಪ್ರಾಚಾರ್ಯ ಡಿ.ಎಲ್. ಬನಸೋಡೆ, ಶಿವಾನಂದ ಕಲ್ಯಾಣಿ ಮಾತನಾಡಿದರು. ಸಂಸ್ಥೆ ನಿರ್ದೇಶಕ ಮಂಜುನಾಥ ಕೌಲಗಿ, ಆಡಳಿತಾ ಧಿಕಾರಿ ಪರುಶುರಾಮ ಭಾವಿಕಟ್ಟಿ ಇದ್ದರು.