Advertisement

ಅಗತ್ಯ ಸೌಲಭ್ಯ ನೀಡುವಲ್ಲಿ ಪಪಂ ಆಡಳಿತ ವಿಫ‌ಲ

03:21 PM Jan 17, 2023 | Team Udayavani |

ಅರಕಲಗೂಡು: ಪಪಂ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಕರ್ಯ ಒದ ಗಿಸುವಲ್ಲಿ ಆಡಳಿತ ವಿಫಲವಾಗಿದೆ. ಅನಾವಶ್ಯಕ ಕಾಮಗಾರಿಗಳಿಗೆ ತೆರಿಗೆ ಹಣ ದುರುಪಯೋಗ ಮಾಡಲಾಗುತ್ತಿದೆ. 2023-24 ನೇ ಸಾಲಿನ ಆಯ-ವ್ಯಯ ತಯಾರಿಸುವ ಸಲಹಾ ಸಭೆಯಲ್ಲಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Advertisement

ಸೋಮವಾರ ಪಪಂ ಸಭಾಂಗಣದಲ್ಲಿ ಅಧ್ಯಕ್ಷೆ ಶಾರದ ಅಧ್ಯಕ್ಷತೆಯಲ್ಲಿ ನಡೆದ 2023-24ನೇ ಸಾಲಿನ ಪಪಂ ಆಯ-ವ್ಯಯ ತಯಾರಿಸುವ ಬಗ್ಗೆ ಸಲಹೆ ಸೂಚನೆ ಪಡೆಯುವ ಸಲುವಾಗಿ ಸಾರ್ವಜನಿಕರು ಮತ್ತು ಮಾಜಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮೊದಲನೇ ಪೂರ್ವಭಾವಿ ಸಭೆಯಲ್ಲಿ ಮಾಜಿ ಉಪಾಧ್ಯಕ್ಷ ನಿಖೀಲ್‌ ಕುಮಾರ್‌, ಡಿಸ್‌ ರಾಜು ಸಭೆಯಲ್ಲಿ ಮಾತನಾಡಿದರು. ಸಭೆಯನ್ನ ಕಾಟಾಚಾರಕ್ಕೆ ಮಾಡಬಾರದು. ಸಭೆಯಲ್ಲಿ ಚರ್ಚೆಯಾದ ಕನಿಷ್ಠ ವಿಷಯಗಳ ಬಗ್ಗೆಯಾದರೂ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿದರು.

ಮುಖ್ಯಾಧಿಕಾರಿ ಶಿವಕುಮಾರ್‌ ಪ್ರತಿಕ್ರಿಯಿಸಿ, ಸಭೆಯಲ್ಲಿ ನೀಡುವ ಸಲಹೆಗಳನ್ನು ಪರಿಗಣಿಸಲಾಗುವುದು. ತಮ್ಮೆಲ್ಲರ ಸಲಹೆ ಮೇರೆಗೆ ಪಪಂನ ಆಯ-ವ್ಯಯ ತಯಾರಿಸಲಾಗುತ್ತಿದೆ ಎಂದು ತಿಳಿಸಿದರು.

ಸೌಕರ್ಯ ಒದ ಗಿಸಲು ಆದಾಯ ಸರಿದೂಗಿಸಿ: ಪಟ್ಟಣ ದಿನೇ-ದಿನೇ ಬೆಳೆಯುತ್ತಾ ಹೋಗುತ್ತಿದೆ. ಇದರಿಂದ ಮೂಲಭೂತ ಸೌಕರ್ಯ ಕೊರತೆ ಹೆಚ್ಚಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪಂಚಾಯ್ತಿ ಬೊಕ್ಕಸವನ್ನು ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಇದೆ. ಪಟ್ಟಣ ಹಾಗೂ ಪಟ್ಟಣದ ಹೊರವಲಯಗಳಲ್ಲಿ ಖಾಸಗಿ ಸ್ಥಳಗಳಲ್ಲಿ ಅಕ್ರಮವಾಗಿ ಅಂಗಡಿ ಮಳಿಗೆಗಳನ್ನ ತೆರೆಯಲಾಗಿದೆ. ಇವುಗಳಿಗೆ ಕಾನೂನು ಪ್ರಕಾರ ದಂಡ ವಿಧಿಸಿ ಪರ ವಾನಿಗೆ ನೀಡಲು ಮುಂದಾದರೆ ಪಂಚಾಯಿತಿಗೆ ಆದಾಯ ಹೆಚ್ಚುವುದಿಲ್ಲವೇ ಎಂದು ಮಾಜಿ ಸದಸ್ಯ ಶಂಕರಯ್ಯ ಸಲಹೆ ನೀಡಿದರು.

ಬೀದಿ ನಾಯಿಗಳ ಹಾವಳಿ ತಪ್ಪಿಸಿ: ಪಟ್ಟಣದ ವ್ಯಾಪ್ತಿಯಲ್ಲಿ ಪ್ರತಿದಿನ ನಾಯಿಗಳ ಕಡಿತದಿಂದ ಗಾಯಗೊಳ್ಳುವ ವರ ಸಂಖ್ಯೆ ಹೆಚ್ಚುತ್ತಿದೆ. ಇದರ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ. ಈ ಕೂಡಲೇ ಇದರ ಬಗ್ಗೆ ಕ್ರಮಕ್ಕೆ ಮುಂದಾಗುವಂತೆ ಸಭೆಯಲ್ಲಿ ಸಾರ್ವಜನಿಕರು ಒತ್ತಾಯಿಸಿದರು.

Advertisement

ಪಾರ್ಕ್‌, ಸ್ಮಶಾನ-ಅಭಿವೃದ್ಧಿಗೊಳಿಸಿ: ಪಟ್ಟಣದಲ್ಲಿರುವ ಉದ್ಯಾನವನಗಳು ಒತ್ತುವರಿಯಾಗುವ ಮೂಲಕ ನಶಿಸುತ್ತಿವೆ. ಇವುಗಳ ರಕ್ಷಣೆಗೆ ಮುಂದಾಗುವ ಮೂಲಕ ಉದ್ಯಾನವನವನ್ನು ಅಭಿವೃ ದ್ಧಿಗೊಳಿಸಿ. ವಯಸ್ಕರು ಮತ್ತು ಮಕ್ಕಳಿಗೆ ವಿಶ್ರಾಂತಿ ತಾಣ ವನ್ನಾಗಿ ಪರಿವರ್ತಿಸಿ ಎಂದು ಪ ಪಂ ಸದಸ್ಯ ನಿಖಿಲ್‌ ಕುಮಾರ್‌ ಸಲಹೆ ನೀಡಿದರು.

ಸ್ಮಶಾನಗಳ ಸ್ವಚ್ಛತೆ ಇಲ್ಲದೆ ಶವ ಒಯ್ಯಲು ಕಷ್ಟ ಕರವಾಗಿತ್ತು. ಆದರಿಂದ ತಿಂಗಳಿಗೆ ಒಮ್ಮೆಯಾದರೂ ಸ್ವಚ್ಛತೆಗೆ ಒತ್ತು ನೀಡಿ. ಶವವನ್ನ ಸಾಗಿಸಲು, ಶ್ರದ್ಧಾಂಜಲಿ ವಾಹನದ ವ್ಯವಸ್ಥೆ ಈ ಬಾರಿ ಆಯ-ವ್ಯಯದಲ್ಲಿ ಮಂಡಿಸಿ ಜನ ತೆಗೆ ವ್ಯವಸ್ಥೆ ಮಾಡುವಂತೆ ಪತ್ರಕರ್ತರಾದ ಶಂಕರ್‌, ಮೋಹನ್‌ ಸಭೆಯಲ್ಲಿ ಸಲಹೆ ನೀಡಿದರು. ಸಭೆಯಲ್ಲಿ ಪಪಂ ಉಪಾಧ್ಯಕ್ಷೆ ರಶ್ಮಿ, ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next