ಮುಂಬೈ: ಬಾಂಬೆ ಉಚ್ಚ ನ್ಯಾಯಾಲಯ ಮಹತ್ವದ ತೀರ್ಪೊಂದನ್ನು ನೀಡಿದೆ. ವಾಟ್ಸ್‌ಆ್ಯಪ್ ಗುಂಪಿನ ಅಡ್ಮಿನ್‌ಗೆ ಸೀಮಿತ ಅಧಿಕಾರವಿರುತ್ತದೆ. ಗುಂಪಿನ ಸಹಸದಸ್ಯರ ಪೋಸ್ಟ್‌ಗಳ ಆಧಾರದಲ್ಲಿ ಅಡ್ಮಿನ್ ಅನ್ನು ಅಪರಾಧಿ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಅದು ತೀರ್ಪು ನೀಡಿದೆ.
ಈ ತೀರ್ಪು ನೀಡಿ ಹಲವು ದಿನಗಳೇ ಕಳೆದಿದ್ದರೂ, ಇತ್ತೀಚೆಗಷ್ಟೇ ಬಹಿರಂಗವಾಗಿದೆ. 2016ರಲ್ಲಿ ಮಹಾರಾಷ್ಟ್ರದ ಗೊಂಡಿಯ ಜಿಲ್ಲೆಯಲ್ಲಿ ಕಿಶೋರ್ ತರುಣ್ (33) ಎಂಬ ವ್ಯಕ್ತಿಯೊಬ್ಬರ ಮೇಲೆ ಹಲವು ಪ್ರಕರಣಗಳಡಿ ದೂರು ದಾಖಲಾಗಿತ್ತು.
ವಾಟ್ಸ್‌ಆ್ಯಪ್ ಗುಂಪಿನ ಅಡ್ಮಿನ್ ಆಗಿದ್ದ ಇವರು, ಗುಂಪಿನ ಇನ್ನೊಬ್ಬ ಸದಸ್ಯ, ಅದೇ ಗುಂಪಿನ ಮಹಿಳೆಯೊಬ್ಬರ ಮೇಲೆ ಮಾಡಿದ ಅಶ್ಲೀಲ ಕಾಮೆಂಟನ್ನು ತಡೆಯಲು ವಿಫಲವಾಗಿದ್ದಾರೆ. ಆದ್ದರಿಂದ ಅವರು ತಪ್ಪಿತಸ್ಥರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಇದನ್ನೂ ಓದಿ :ಸ್ಥಳೀಯ ಸಂಸ್ಥೆ ಚುನಾವಣೆ ನಿಗದಿಯಂತೆ ನಡೆಯಲಿದೆ: ಆಯೋಗ
ಆದರೆ ಅಡ್ಮಿನ್‌ಗೆ ಗುಂಪು ರಚಿಸಲು, ವ್ಯಕ್ತಿಗಳನ್ನು ತೆಗೆಯಲು ಮತ್ತು ಸೇರಿಸಿಕೊಳ್ಳಲು ಮಾತ್ರ ಅಧಿಕಾರವಿರುತ್ತದೆ. ಆದರೆ ಇತರೆ ಸದಸ್ಯರ ಪೋಸ್ಟ್‌ಗಳನ್ನು ನಿಯಂತ್ರಿಸುವ ಸಾಮರ್ಥ್ಯವಿರುವುದಿಲ್ಲ ಎಂದು ಹೇಳಿದೆ.