Advertisement
ನಾವು ಪ್ರತಿಭಟನೆ ನಡೆಸುತ್ತಿರು ವಾಗಲೇ ಅವರು ಈ ರೀತಿ ಕಾಂಗ್ರೆಸ್ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿ ದ್ದಾರೆ. ವಾಲ್ಮೀಕಿ ಹಗರಣದ ವಿರುದ್ಧ ನಾವು ಹೋರಾಟ ಮಾಡುವ ವೇಳೆ ಅವರು ಡಿಕೆಶಿ ಬಳಿ ಬಂದು ಸಹಿ ಮಾಡಿಸಿಕೊಂಡಿರುವುದನ್ನು ನೋಡಿ ದ್ದೇನೆ. ಈ ವೀಡಿಯೋ ಬಿಡುಗಡೆ ಮಾಡಲೇ ಎಂದು ಸುದ್ದಿಗಾರರ ಜತೆ ಯತ್ನಾಳ್ ಪ್ರಶ್ನಿಸಿದರು.
ಬೆಂಗಳೂರು: ನಾನು ಈ ರಾಜ್ಯದ ಡಿಸಿಎಂ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಕೂಡ ಕ್ಷೇತ್ರದ ಕೆಲಸಗಳ ಕುರಿತು ಒಂದಿಷ್ಟು ಪತ್ರಗಳಿಗೆ ಸಹಿ ಹಾಕಿಸಿ ಕೊಂಡು ಹೋಗಿದ್ದರು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ಯತ್ನಾಳ್ ಮಾತಿಗೆ ಪ್ರತಿಕ್ರಿಯೆ ಎಂಬಂತೆ ಮಾತ ನಾಡಿದ ಡಿಕೆಶಿ, “ನಾನು ಅವರ ಕ್ಷೇತ್ರದ ಕೆಲಸ ಮಾಡಿಕೊಡ ಬಹುದು, ಮುಂದಕ್ಕೂ ಆ ಕಾರ್ಯ ಮಾಡಬಹುದು. ಏಕೆಂದರೆ ಅದು ನನ್ನ ಕರ್ತವ್ಯ’ ಎಂದರು.