Advertisement

ಪಕ್ಷದ ಹಿರಿಯರ ನಿರ್ಧಾರದ ಬಳಿಕ ಆದಿತ್ಯ ಠಾಕ್ರೆ ಸ್ಪರ್ಧೆ

03:36 PM May 30, 2019 | Team Udayavani |

ಮುಂಬಯಿ: ಶಿವಸೇನೆಯ ಯುವಸೇನೆ ಮುಖ್ಯಸ್ಥ ಆದಿತ್ಯ ಠಾಕ್ರೆ ಅವರ ವಿಧಾನಸಭೆ ಚುನಾವಣೆ ಸ್ಪರ್ಧೆಯ ಕುರಿತು ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಖಚಿತ ಮಾಹಿತಿ ಸಿಗಲಿದೆ ಎಂದು ಶಿವಸೇನೆ ಸಚಿವ ಮಿಲಿಂದ್‌ ನಾರ್ವೇಕರ್‌ ಅವರು ಮರಾಠಿ ಸ್ಥಾನೀಯ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಆದಿತ್ಯ ಠಾಕ್ರೆ ಅವರು ಚುನಾವಣೆಗೆ ಸ್ಪರ್ಧಿಸಿದರೆ ನಮಗೆ ಸಂತೋಷ. ಆದರೆ ಈ ನಿರ್ಣಯವನ್ನು ಸ್ವತಃ ಆದಿತ್ಯ ಅಥವಾ ಪಕ್ಷದ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ತೆಗೆದುಕೊಳ್ಳುತ್ತಾರೆ ಎಂದರು. ಎಲ್ಲರ ಗಮನ 2019ರ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿದೆ. ಆದಿತ್ಯ ಠಾಕ್ರೆ ಅವರು, ಚುನಾವಣೆ ಸ್ಪರ್ಧಿಸುವುದನ್ನು ಮಹಾರಾಷ್ಟ್ರವು ಕಾಯುತ್ತಿದೆ ಎಂದು ಯುವಸೇನೆಯ ಪದಾಧಿಕಾರಿ ವರುಣ್‌ ಸರ್ದೇಸಾಯಿ ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ ಅನಂತರ, ಆದಿತ್ಯ ಠಾಕ್ರೆ ವಿಧಾನಸಭೆಗೆ ಸ್ಪರ್ಧಿಸುವರೆ ಎನ್ನುವ ಚರ್ಚೆಯು ನಡೆಸಲಾಗುತ್ತಿದೆ. ಈ ಕುರಿತು ಮಿಲಿಂದ್‌ ಠಾಕ್ರೆ ಅವರನ್ನು ಕೇಳಿದಾಗ ಮಾತನಾಡಿದ ಅವರು, ಚುನಾವಣೆ ಸ್ಪರ್ಧಿಸುವ ಕುರಿತು ನಿರ್ಣಯ ಆದಿತ್ಯ ಠಾಕ್ರೆ ಅವರು ಹಾಗೂ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ತೆಗೆದುಕೊಳ್ಳಲ್ಲಿದ್ದಾರೆ.

ಆದಿತ್ಯ ಠಾಕ್ರೆ ಸ್ಪರ್ಧಿಸಿದರೆ ಯಾವ ಕ್ಷೇತ್ರದಲ್ಲಿ ನಿಲ್ಲಬಹುದು ಎನ್ನುವ ಪ್ರಶ್ನೆಗೆ ಉತ್ತರಿಸಿ ಮಿಲಿಂದ್‌ ಠಾಕ್ರೆ ಅವರು, ಸಂಪೂರ್ಣ ಮಹಾರಾಷ್ಟ್ರವು ಆದಿತ್ಯ ಠಾಕ್ರೆ ಅವರ ಚುನಾವಣೆ ಕ್ಷೇತ್ರವಾಗಿದೆ ಎಂದು ಹೇಳಿದ್ದಾರೆ.

ಗ್ರಾಮೀಣ ಪ್ರದೇಶದಿಂದ ಸ್ಪರ್ಧಿ
ಆದಿತ್ಯ ಠಾಕ್ರೆ ಅವರಿಗಾಗಿ ಕೆಲವು ಮಹತ್ವದ ಚುನಾವಣೆ ಕ್ಷೇತ್ರಗಳ ಆಯ್ಕೆ ಮಾಡಲಾಗಿದೆ. ಅದರಲ್ಲಿ ವರ್ಲಿ, ಶಿವಿz ಈ ಕ್ಷೇತ್ರಗಳಲ್ಲಿ ಶಿವಸೇನೆಯ ಪ್ರಾಬಲ್ಯ ಹೆಚ್ಚಾಗಿದೆ. ಆದರೆ ಆದಿತ್ಯ ಠಾಕ್ರೆ ಅವರು ಗ್ರಾಮೀಣ ಪ್ರದೇಶಗಳಲ್ಲಿ ಸ್ಪರ್ಧಿಸಬೇಕೇನ್ನುವುದು ಶಿವಸೇನೆಯ ಹಿರಿಯ ನಾಯಕರ ಬೇಡಿಕೆಯಾಗಿದೆ.

ಚುನಾವಣೆಗೂ ಮುನ್ನ ಸಚಿವ ಸಂಪುಟದಲ್ಲಿ ಶಿವಸೇನೆಗೆ ಉಪಮುಖ್ಯಮಂತ್ರಿ ಸ್ಥಾನ ದೊರೆಯುವ ಬಗ್ಗೆ ಚರ್ಚೆ ಆರಂಭ ವಾಗಿತ್ತು. ಈ ವೇಳೆ ಶಿವಸೇನೆಯಿಂದ ಪಕ್ಷದ ಮುಖ್ಯಸ್ಥ ಉದ್ಧವ್‌ ಠಾಕ್ರೆ ಹಾಗೂ ಸುಭಾಷ್‌ ದೇಸಾಯಿ ಅವರ ಹೆಸರು ಚರ್ಚೆಯಲ್ಲಿತ್ತು.

Advertisement

ಆದರೆ ದೇಸಾಯಿ ಅವರ ಹೆಸರು ಚರ್ಚೆ ಯಿಂದ ಶಿವಸೇನೆಯ ನಾಯಕರಲ್ಲಿ ಅಸಮಾಮಾದಾನ ವ್ಯಕ್ತಪಡಿಸಿದರು. ಆದ್ದರಿಂದ ಆದಿತ್ಯ ಠಾಕ್ರೆ ಅವರನ್ನು ಉಪಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿಸುವ ಶಿವಸೇನೆ ಪಕ್ಷ ಪ್ರಮುಖರ ವಿಚಾರ ಆಗಿರಬಹುದೇ ಎನ್ನಲಾಗಿದೆ.

ಇಲ್ಲಿಯ ತನಕ ಠಾಕ್ರೆ ಕುಟುಂಬವು ಮಾತೋಶ್ರಿಯಿಂದ ಶಿವಸೇನೆಯ ಹಾಗೂ ರಾಜಕೀಯ ಸೂತ್ರವನ್ನು ಮಾತ್ರ ನಿಭಾಯಿಸಿದ್ದಾರೆ. ಠಾಕ್ರೆ ಕುಟುಂಬದಲ್ಲಿ ಯಾವುದೇ ಸದಸ್ಯರು ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಪಕ್ಷ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕಾಣುವ ಇಚ್ಛೆ ಪಕ್ಷದ ನಾಯಕರು ಹಾಗೂ ಪದಾಧಿಕಾರಿಗಳ ವ್ಯಕ್ತಪಡಿಸಿದರು. ಆದರೆ ಆದಿತ್ಯ ಠಾಕ್ರೆ ಅವರು, ಚುನಾವಣೆ ಕಣಕ್ಕಿಳಿದರೆ ಶಿವಸೈನಿಕರಲ್ಲಿ ಉತ್ಸಾಹ ಹೆಚ್ಚಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next