Advertisement

Aditya-L1: ಆದಿತ್ಯ-ಎಲ್‌1 ಉಡಾವಣ ತಾಲೀಮು ಪೂರ್ಣ

11:51 PM Aug 30, 2023 | Team Udayavani |

ಹೊಸದಿಲ್ಲಿ: ಭಾರತದ ಮೊದಲ ಸೂರ್ಯ ಸಂಶೋಧನ ಯೋಜನೆ “ಆದಿತ್ಯ ಎಲ್‌1′ ಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಬುಧವಾರ ಉಡಾವಣ ತಾಲೀಮು ನಡೆಸಿದೆ. ಈ ಕುರಿತ ಚಿತ್ರಗಳನ್ನು ಟ್ವಿಟರ್‌ನಲ್ಲಿ ಇಸ್ರೋ ಹಂಚಿಕೊಂಡಿದೆ. “ಆದಿತ್ಯ-ಎಲ್‌1 ಯೋಜನೆಯಡಿ ಪಿಎಸ್‌ಎಲ್‌ವಿ-ಸಿ57 ಉಡಾವಣೆಗೆ ಎಲ್ಲ ಸಿದ್ಧತೆಗಳು ಪ್ರಗತಿಯಲ್ಲಿವೆ. ಈ ಕುರಿತ ಉಡಾವಣ ತಾಲೀಮು ಪೂರ್ಣಗೊಂಡಿದೆ’ ಎಂದು ಇಸ್ರೋ ಟ್ವೀಟ್‌ ಮಾಡಿದೆ. ಸೆ. 2ರಂದು “ಆದಿತ್ಯ ಎಲ್‌1′ ಉಡಾವಣೆಗೆ ಇಸ್ರೋ ದಿನಾಂಕ ನಿಗದಿಪಡಿಸಿದೆ.

Advertisement

ಈ ನೌಕೆಯು ಏಳು ಪೇಲೋಡ್‌ಗಳನ್ನು ಹೊಂದಿರಲಿದೆ. ಎಲೆಕ್ಟ್ರೋಮ್ಯಾಗ್ನೆಟಿಕ್‌ ಮತ್ತು ಪಾರ್ಟಿಕಲ್‌ ಡಿಟೆಕ್ಟರ್‌ಗಳ ಸಹಾಯದಿಂದ ಸೂರ್ಯನ ಫೋಟೋಸ್ಪಿಯರ್‌, ಕ್ರೋಮೋಸ್ಪಿಯರ್‌ ಮತ್ತು ಹೊರಗಿನ ಪದರಗಳನ್ನು ಅಧ್ಯಯನ ನಡೆಸಲಾಗುತ್ತದೆ. ಇದು ಯಾವುದೇ ಅಡೆತಡೆ ಇಲ್ಲದೇ ಸೂರ್ಯನನ್ನು ನಿರಂತರವಾಗಿ ಅಧ್ಯಯನ ನಡೆಸಲಿದೆ. ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ. ದೂರದಲ್ಲಿ, ಸೂರ್ಯ-ಭೂಮಿ ನಡುವಿನ ಲ್ಯಾಗ್ರಾಂಜಿಯನ್‌ ಪಾಯಿಂಟ್‌(ಎಲ್‌1) ಸುತ್ತಲಿನ ಕಕ್ಷೆಯಲ್ಲಿ ಆದಿತ್ಯ-ಎಲ್‌1 ಇರಲಿದ್ದು, ಸೂರ್ಯನ ನಿರಂತರ ಅಧ್ಯಯನ ನಡೆಸಲಿದೆ ಎಂದು ಇಸ್ರೋ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next