Advertisement

Aditya L1: ಪ್ರಭಾವಲಯ ದಾಟಿದ ಆದಿತ್ಯ ಎಲ್‌1

12:41 AM Oct 01, 2023 | Team Udayavani |

ಹೊಸದಿಲ್ಲಿ: ಭೂಮಿಯಿಂದ 9.2 ಲಕ್ಷ ಕಿ.ಮೀ. ದೂರವನ್ನು ಆದಿತ್ಯ ಎಲ್‌1 ಬಾಹ್ಯಾಕಾಶ ನೌಕೆಯು ಕ್ರಮಿಸಿದೆ. ಈ ಮೂಲಕ ಭೂಮಿಯ ಪ್ರಭಾವಲಯವನ್ನು ಯಶಸ್ವಿಯಾಗಿ ದಾಟಿದೆ ಎಂದು ಇಸ್ರೋ ತಿಳಿಸಿದೆ. ಈ ಕುರಿತು ಟ್ವಿಟರ್‌(ಎಕ್ಸ್‌)ನಲ್ಲಿ ಮಾಹಿತಿ ಹಂಚಿಕೊಂಡಿರುವ ಇಸ್ರೋ, “ಆದಿತ್ಯ ಎಲ್‌1 ಬಾಹ್ಯಾಕಾಶ ನೌಕೆಯು ತನ್ನ ಗುರಿಯಾದ ಸೂರ್ಯ-ಭೂಮಿ ಲಾಗ್ರೇಂಜ್‌ ಪಾಯಿಂಟ್‌ 1(ಎಲ್‌ 1)ನತ್ತ ಹೊರಟಿದೆ. ಭೂಮಿಯ ಪ್ರಭಾವದ ಗೋಳದಿಂದ ಹೊರಗೆ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಕಳುಹಿಸುತ್ತಿರುವುದು ಇದು ಎರಡನೇ ಬಾರಿ.

Advertisement

ಮಂಗಳ ಯೋಜನೆಯಲ್ಲಿ ಮೊದಲ ಬಾರಿಗೆ ಇಸ್ರೋ ಈ ಸಾಧನೆ ಮಾಡಿತ್ತು’ ಎಂದು ಹೇಳಿದೆ. ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ ಎಲ್‌1 ಹೊತ್ತ ಪಿಎಸ್‌ಎಲ್‌ವಿ-ಸಿ57 ರಾಕೆಟ್‌ ಸೆ.2ರಂದು ಉಡಾವಣೆಗೊಂಡಿತ್ತು. ಸೂರ್ಯನ ಅಧ್ಯಯನಕ್ಕಾಗಿ ಇಸ್ರೋ ಈ ಯೋಜನೆಯನ್ನು ಕೈಗೊಂಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next