Advertisement

ಆದಿನಾರಾಯಣಸ್ವಾಮಿ ಮಠಕ್ಕೆ ಸೂಕ್ತ ರಸ್ತೆ ಸೌಲಭ್ಯ ಒದಗಿಸಿ

03:29 PM Sep 10, 2021 | Team Udayavani |

ಪಾತಪಾಳ್ಯ: ಬಾಗೇಪಲ್ಲಿ ತಾಲೂಕಿನ ಸುಜ್ಞಾನಂಪಲ್ಲಿ ಬಳಿ ಇರುವ ಅವಧೂತ ಆದಿನಾರಾಯಣಸ್ವಾಮಿ ಮಠಕ್ಕೆ ಸೂಕ್ತ ರಸ್ತೆ ಸೌಲಭ್ಯ ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

ಪಾತಪಾಳ್ಯ ಹೋಬಳಿ ತೋಳ್ಳಪಲ್ಲಿ ಗ್ರಾಪಂ ವ್ಯಾಪ್ತಿಯ ಆವಧೂತ ಆದಿನಾರಾಯಣಸ್ವಾಮಿ ಮಠ ಕಳ್ಳಿಪಲ್ಲಿಗೆ 2 ಕಿ.ಮೀ. ದೂರದಲ್ಲಿದೆ. ಮಠಕ್ಕೆ
ಹೋಗಲು ಸೂಕ್ತ ರಸ್ತೆ ಇಲ್ಲ. ಬೆಟ್ಟಗುಡ್ಡಗಳ ಮಧ್ಯೆ ಇರುವ ಮಠಕ್ಕೆ ಪ್ರತಿದಿನ 100ಕ್ಕೂ ಹೆಚ್ಚು ಭಕ್ತರು ಆಗಮಿಸಿ ಸೇವೆ ಸಲ್ಲಿಸುತ್ತಿದ್ದಾರೆ.

ರಸ್ತೆಗೆ ಹಾಕಿದ್ದ ಮಣ್ಣು ಕೊಚ್ಚಿ ಹೋಗಿದ್ದು, ಓಡಾಡಲು ಕಷ್ಟವಾಗಿದೆ. ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸಂಬಂಧಪಟ್ಟ ಇಲಾಖೆಯವರು ಮಠಕ್ಕೆ ಸೂಕ್ತ ರಸ್ತೆ ಕಲ್ಪಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಬೆಳ್ಳುಳ್ಳಿ ಬೆಲೆ ಅರ್ಧಕ್ಕರ್ಧ ಕುಸಿತ, ಬೆಳೆಗಾರರು ಕಂಗಾಲು

ಆವಧೂತ ಆದಿನಾರಾಯಣಸ್ವಾಮಿ ಮಠಕ್ಕೆ ರಸ್ತೆಕಲ್ಪಿಸಲು ಗ್ರಾಮ ಪಂಚಾಯ್ತಿಅಧಿಕಾರಿಗಳ ಗಮನಕ್ಕೆ ತರಲಾಗಿದೆ.
– ವೇಣುಗೋಪಾಲ, ಗ್ರಾಪಂ ಸದಸ್ಯ, ಸುಜ್ಞಾನಂಪಲ್ಲಿ

Advertisement

ನರೇಗಾಯೋಜನೆಯಲ್ಲಿ ಸುಜ್ಞಾನಂಪಲ್ಲಿ ಬಳಿ ಇರುವಅವಧೂತಆದಿರಾಯಣಸ್ವಾಮಿ ಮಠಕ್ಕೆ ರಸ್ತೆ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ಬಂದ ತಕ್ಷಣರಸ್ತೆ ನಿರ್ಮಾಣಮಾಡಲಾಗುವುದು
– ಕೆ.ವಿ.ನಾರಾಯಣಸ್ವಾಮಿ, ಪಿಡಿಒ, ತೋಳ್ಳಪಲ್ಲಿ ಗ್ರಾಪಂ

Advertisement

Udayavani is now on Telegram. Click here to join our channel and stay updated with the latest news.

Next