ಬೆಂಗಳೂರು: ವಂದೇ ಮಾತರಂ ಟ್ರಾವೆಲ್ಸ್ 24ನೇ ವರ್ಷದ “ಅಡಿಗಾಸ್ ಯಾತ್ರೆ’ ಪ್ರವಾಸಿ ಕೈಪಿಡಿಯನ್ನು ಈಚೆಗೆ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಕೆ. ಬಸವರಾಜ ಕಚೇರಿ ಆವರಣದಲ್ಲಿ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಬಸವರಾಜ, “ಸಾಕಷ್ಟು ಭಾರತದ ಯಾತ್ರಾ ತಾಣಗಳನ್ನು ವಂದೇ ಮಾತರಂ ಟ್ರಾವೆಲ್ಸ್ ನಿರಂತರವಾಗಿ ಕೈಗೊಂಡಿದೆ. ಈ ಟ್ರಾವೆಲ್ಸ್‌ನೊಂದಿಗೆ ಹತ್ತಾರು ಕಡೆ ಪ್ರವಾಸ ಮಾಡಿದ್ದೇನೆ. ಇಲ್ಲಿನ ಶಿಸ್ತು, ಉಟೋಪಚಾರ, ಯಾತ್ರೆಯ ತಾಣಗಳ ವಿವರಣೆ ವಸತಿ ಸೌಲಭ್ಯ ಸೇರಿದಂತೆ ವಿವಿಧ ಸೇವೆಗಳು ಅತ್ಯುತ್ತಮವಾಗಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಮಾಲಿಕ ಕೆ. ನಾಗರಾಜ ಅಡಿಗ ಮಾತನಾಡಿ, ಪ್ರವಾಸಿಗರ ಅನುಕೂಲಕ್ಕಾಗಿ ವಂದೇ ಮಾತರಂ ಟ್ರಾವೆಲ್ಸ್ ಸೇವೆಗಳನ್ನು ಮತ್ತಷ್ಟು ಉನ್ನತ ದರ್ಜೆಗೆ ಹೆಚ್ಚಿಸಲು ಯೋಜಿಸಲಾಗಿದೆ ಎಂದು ಹೇಳಿದರು. ಭಾರತದ ಎಲ್ಲಾ ಪ್ರವಾಸಿ ತಾಣಗಳಿಗೆ ಲಕ್ಸುರಿ ಟೂರ್‌ಗಳಲ್ಲಿ ವಿಮಾನ ಟಿಕೆಟ್, ಉಟೋಪಚಾರ, ಐಷಾರಾಮಿ ಹೊಟೇಲ್/ ರೆಸಾರ್ಟ್ ಹೌಸಬೋಟ್ ವಸತಿಗಳೊಂದಿಗೆ ಪ್ರವಾಸಗಳನ್ನು ಮಾಡಿಕೊಡಲಾಗುವುದು. ಅಲ್ಲದೆ, ಪ್ರವಾಸಿಗಳ ಅನುಕೂಲಕ್ಕೆ ತಕ್ಕಂತೆ ಕಸ್ಟಮೈಸ್ಡ್ ಪ್ರವಾಸ, ಸ್ಟ್ಯಾಂಡರ್ಡ, ಡಿಲಕ್ಸ್, ಲಕ್ಸುರಿ, ಅಂತಾ ರಾಷ್ಟ್ರೀಯ ಪ್ರವಾಸಗಳನ್ನು ವಿಮಾನ ಟಿಕೆಟ್, ವಿಸಾ, ಕ್ರೂಸ್, ಉಟೋಪಚಾರ, ಹೊಟೇಲ್ ವ್ಯವಸ್ಥೆಗಳೊಂದಿಗೆ ಆಯೋಜಿ ಸಲಾಗುವುದು ಎಂದು ವಿವರಿಸಿದರು.
ಸಂಸ್ಥೆಯು ಗೋಲ್ಡ್‌ನ್ ಟ್ರಯಾಂಗಳ, ಕಾಶಿ, ಗಯಾ, ನೇಪಾಳ, ಪಶುಪತಿನಾಥ, ಮುಕ್ತಿನಾಥ, ಕಠ್ಮಂಡು, ಪೋಖರಾ, ಉತ್ತರ ತಿರ್ಥ, ಹರಿದ್ವಾರ, ವೈಷ್ಣೋದೇವಿ ಸೇರಿದಂತೆ ಪಶ್ಚಿಮ ಮತ್ತು ಮಧ್ಯ ಭಾರತ ಪ್ರವಾಸಗಳು: ಗುಜುರಾತ, ಕಛ…, ಸೌರಾಷ್ಟ್ರ, ಗಿರ್, ಪಂಚದ್ವಾರಕ, ಜ್ಯೋರ್ತಿಲಿಂಗ್, ಸಪ್ತ ಜ್ಯೋರ್ತಿಲಿಂಗ್, ಪಂಚ ಜ್ಯೋರ್ತಿಲಿಂಗ್, ಅಷ್ಟ ನಾಯಕ, ಅಹಮದಾಬಾದ್ ಮತ್ತು ದಕ್ಷಿಣ ಭಾರತದಲ್ಲೂ ಪ್ರವಾಸ ಕೈಗೊಳ್ಳುತ್ತದೆ. ಮಾಹಿತಿಗೆ www.adigasyatra.com ಮೊ: 96116 00810 ಸಂಪರ್ಕಿಸಿ.