Advertisement
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, 90ರ ದಶಕದಲ್ಲಿ ಬಾಬ್ರಿ ಮಸೀದಿ ಧ್ವಂಸ ಮಾಡಿದಾಗ, ನಾನು ಭೇಟಿ ಕೊಟ್ಟಾಗ ಕಂಡ ಚಿತ್ರಣವನ್ನು ಅವತ್ತು ಹೇಳಿಕೊಂಡಿದ್ದೇನೆ ಅಷ್ಟೇ. ಬೊಂಬೆಯನ್ನು ದೇವರು ಅಂತಾ ಹೇಳಿದ್ರೆ ಏನು ತಪ್ಪು? ಬೊಂಬೆಯಲ್ಲಿ ದೈವತ್ವ ಇರೋದಿಲ್ವ ಎಂದು ಪ್ರಶ್ನೆ ಮಾಡಿದರು.
ಬಿಜೆಪಿಯವರು ನನ್ನನ್ನು ರಾವಣ ಎಂದಿದ್ದಾರೆ. ಅದರಿಂದ ನನಗೆ ಬೇಸರವಿಲ್ಲ. ರಾವಣ ಎನಿಸಿಕೊಳ್ಳಲು ಸಿದ್ಧನಿದ್ದೇನೆ. ಅವನಂಥ ದೈವ ಭಕ್ತ ಯಾರೂ ಇರಲಿಲ್ಲ. ಇವರೆಲ್ಲ ಡೋಂಗಿ ದೈವ ಭಕ್ತರು. ಹಿಂದೆ ಅಣ್ಣಾದೊರೈ ರಾಮಾಯಣಕ್ಕೆ ಬದಲಾಗಿ ರಾವಯಾಣಾವಣ ನಾಟಕ ಆಡಿದ್ರು. ಈ ನಾಟಕದಲ್ಲಿ ರಾವಣ ಸೀತೆ ಮೇಲೆ ಬಲಾತ್ಕಾರ ಮಾಡುವುದಿಲ್ಲ. ಇದು ರಾವಣನ ದೊಡ್ಡ ಗುಣ ಅಲ್ವೇ ಎಂದು ಪ್ರಶ್ನಿಸಿದರು. ಸಚಿವ ಕೆ.ಎನ್.ರಾಜಣ್ಣ ವಾಲ್ಮೀಕಿ ಸಮಾಜದವರು. ಆ ಸಮುದಾಯಕ್ಕೆ ಸೇರಿದವರು ರಾಮನ ಬಗ್ಗೆ ಗೌರವ ಭಾವವನ್ನು ಎದೆಗೂಡಿನಲ್ಲಿ ಇಟ್ಟುಕೊಂಡಿರುತ್ತಾರೆ ಎಂದು ಭಾವಿಸಿದ್ದೆ. ಆದರೆ ಟಿಪ್ಪು ಜಯಂತಿ ಆಚರಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಓಲೈಸಿ ಡಿಸಿಎಂ ಸ್ಥಾನ ಪಡೆಯಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರೇ ಅವರಿಗೆ ಉತ್ತರ ನೀಡುತ್ತಾರೆ. -ಪ್ರತಾಪ ಸಿಂಹ, ಸಂಸದ
Related Articles
ಬಳ್ಳಾರಿ: ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಂಬಂಧ ಸಚಿವ ರಾಜಣ್ಣ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಎಂದು ಸಚಿವ ಬಿ.ನಾಗೇಂದ್ರ ಸಮರ್ಥಿಸಿಕೊಂಡರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಯನ್ನು ಕೇಂದ್ರ ಸರಕಾರ ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಅನಿಸುತ್ತಿದೆ. ಹಾಗೆ ಸಚಿವ ರಾಜಣ್ಣ ಅವರಿಗೆ ಅಯೋಧ್ಯೆಗೆ ಹೋದಾಗ ಕಂಪನ ಆಗಿಲ್ಲದಿರ ಬಹುದು. ನನಗೆ ದೇವಸ್ಥಾನಕ್ಕೆ ಹೋದಾಗ ಕಂಪನ ಆಗುತ್ತದೆ. ಅವರಿಗೆ ಆಗಿಲ್ಲ. ಅದರಲ್ಲಿ ತಪ್ಪೇನಿದೆ. ಹಾಗಂತ ರಾಜಣ್ಣ ಅವರು ರಾಮ ಮಂದಿರವನ್ನು ನಿಂದನೆ ಮಾಡಿದಂತಲ್ಲ ಎಂದರು.
Advertisement
ಸದ್ಯ ನನ್ನ ಕಲ್ಪನೆಯ ಮಂದಿರ ಬೇರೆ ಇದೆ ಎಂದ ಸಚಿವ ನಾಗೇಂದ್ರ ಅವರು, ನಮ್ಮ ಕಲ್ಪನೆಗೆ ಮೀರಿದ ರೀತಿಯಲ್ಲಿ ಮಂದಿರ ಇದ್ದರೆ ಚೆನ್ನಾಗಿರುತ್ತದೆ. ಇಲ್ಲ ಎಂದರೆ ಹಾಗೆ ಅನಿಸುತ್ತದೆ. ನಮ್ಮ ಸರಕಾರ ಇದ್ದರೆ ಇನ್ನು ಅದ್ದೂರಿಯಾಗಿ ಉದ್ಘಾಟನೆ ಮಾಡುತ್ತಿದ್ದೆವು ಎಂದು ತಿಳಿಸಿದರು.