ಬೆಂಗಳೂರು: ಭಾರತೀಯ ವಾಯು ಸೇನೆಗೆ 12 ತರಬೇತಿ ಪೈಲೆಟ್‌ಗಳು ಮತ್ತು ಮೂವರು ವಿಮಾನ ತರಬೇತಿ ಎಂಜಿನಿಯರ್‌ಗಳು ಭಾನುವಾರ ಸೇರ್ಪಡೆಯಾಗಿದ್ದಾರೆ. ನಗರದಲ್ಲಿರುವ ಏರ್‌ಫೋರ್ಸ್ ಟೆಸ್ಟ್ ಪೈಲೆಟ್ ಸ್ಕೂಲ್‌ನಲ್ಲಿ ಸತತ 46 ವಾರಗಳ ತರಬೇತಿ ಬಳಿಕ 15 ಮಂದಿಯ 39ನೇ ತಂಡವನ್ನು ಭಾರತೀಯ ವಾಯುಸೇನೆಗೆ ಸೇರ್ಪಡೆ ಮಾಡಲಾಯಿತು. ಏರ್‌ಫೋರ್ಸ್ ಟೆಸ್ಟ್ ಪೈಲೆಟ್ ಸ್ಕೂಲ್ ಯುದ್ಧವಿಮಾನ ಮತ್ತು ಸಿಸ್ಟಮ್ ಟೆಸ್ಟಿಂಗ್ ಎಸ್ಲಾಬ್ಲಿಷ್‌ಮೆಂಟ್‌ನ ಭಾಗವಾಗಿದೆ.
ತರಬೇತಿ ಪೈಲೆಟ್‌ಗಳು ಮತ್ತು ತರಬೇತಿ ಎಂಜಿನಿಯರ್‌ಗಳ ಸೇರ್ಪಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೋವಾ 15 ಮಂದಿಗೆ ಪದವಿ ಪ್ರದಾನ ಮಾಡಿದರಲ್ಲದೆ, ಪ್ರಶಸ್ತಿ ವಿಜೇತ ಪೈಲೆಟ್‌ಗಳನ್ನು ಅಭಿನಂದಿಸಿದರು. ಸೇವಾವಧಿಯಲ್ಲಿ ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸುವಂತೆ ಕಿವಿಮಾತು ಹೇಳಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮೇಕ್ ಇನ್ ಇಂಡಿಯಾದಲ್ಲಿ ವೈಮಾನಿಕ ಕ್ಷೇತ್ರ ಅತ್ಯಂತ ಪ್ರಮುಖವಾದ್ದದು. ಆದ್ದರಿಂದ ತರಬೇತಿ ಪೈಲೆಟ್‌ಗಳು ಮತ್ತು ಎಂಜಿನಿಯರ್‌ಗಳು ಮೇಕ್ ಇನ್ ಇಂಡಿಯಾದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಇದುವರೆಗೆ ಬೆಂಗಳೂರಿನ ಏರ್‌ಫೋರ್ಸ್ ಟೆಸ್ಟ್ ಪೈಲೆಟ್ ಸ್ಕೂಲ್‌ನಲ್ಲಿ 272 ತರಬೇತಿ ಪೈಲೆಟ್‌ಗಳು ಮತ್ತು 128 ವಿಮಾನ ತರಬೇತಿ ಎಂಜಿನಿಯರ್‌ಗಳು ತರಬೇತಿ ಪಡೆದು ವಾಯುಸೇನೆಗೆ ಸೇರಿಕೊಂಡಿದ್ದಾರೆ. ವೈಮಾನಿಕ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಗೆ ಇವರು ಮಹತ್ವದ ಕೊಡುಗೆ ನೀಡುತ್ತಿದ್ದಾರೆ ಎಂದು ಶ್ಲಾ ಸಿದರು.
ಇದೇ ವೇಳೆ ಸ್ಕಾಡ್ರನ್ ಲೀಡರ್ ಪಿ.ಕೆ.ಠಾಕೂರ್ ಅವರಿಗೆ ಉತ್ಯುತ್ತಮ ಆಲ್‌ರೌಂಡರ್ ತರಬೇತಿ ಪೈಲೆಟ್, ಸ್ಕವಾಡ್ರನ್ ಲೀಡರ್ ಎ.ಕೆ.ಯಾದವ್ ಅವರಿಗೆ ಅತ್ಯುತ್ತಮ ವಿದ್ಯಾರ್ಥಿ ಚೀಫ್ ಆಫ್ ಏರ್ ಸ್ಟಾಪ್ ಟ್ರೋಪಿ, ಹಾಗೂ ಮಹಾರಾಜ ಹನುಮಂತ ಸಿಂಗ್‌ಜಿ ಅವರಿಗೆ ವಿಮಾನ ತರಬೇತಿಗೆ ಸಂಬಂಧಿಸಿದ ಆಲ್‌ರೌಂಡರ್, ಸ್ಕ್ವಾಡ್ರನ್ ಲೀಡರ್ ವಿವೇಕ್ ಶರ್ಮಾ ಅವರಿಗೆ ಡನ್‌ಲಪ್ ಟ್ರೋಫಿ (ವಿಮಾನ ತರಬೇತಿ ಎಂಜಿನಿಯರ್ ವಿಭಾಗ) ಹಾಗೂ ಸ್ಕ್ವಾಡ್ರನ್ ಲೀಡರ್ ಎಸ್.ಎನ್.ಪೊಹರೆ ಅವರಿಗೆ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ ಮಾಡಲಾಯಿತು.