Advertisement

ಅದಾನಿ ಗ್ರೂಪ್ ತೆಕ್ಕೆಗೆ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

04:20 PM Oct 14, 2021 | Team Udayavani |

ತಿರುವನಂತಪುರಂ; – ಹಲವು ಕಾನೂನಾತ್ಮಕ ಮತ್ತು ಸಾಮಾಜಿಕ ವಿರೋಧದ ನಡುವೆಯೂ ಅದಾನಿ ಗ್ರೂಪ್‌ ತಿರುವನಂತಪುರಂನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತವನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ.

Advertisement

ಈ ಬಗ್ಗೆ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದು, ಅಧಿಕೃತವಾಗಿ ಆಡಳಿತ ಜವಾಬ್ದಾರಿಯನ್ನು ವಹಿಸುಕೊಳ್ಳುವಿಕೆಯನ್ನು ಘೋಷಿಸಿದೆ. ಸೊಂಪಾದ ಹಸಿರು, ಸುಂದರ ಕಡಲತೀರಗಳು ಮತ್ತು ಸೊಗಸಾದ ತಿನಿಸುಗಳಿಂದ ಕೂಡಿದ ದೇವರ ನಾಡಿಗೆ ಪ್ರಯಾಣಿಕರನ್ನು ಸ್ವಾಗತಿಸಲು ಮತ್ತು ಅವರ ಸೇವೆ ಮಾಡಲು ಹೆಮ್ಮೆ ಪಡುತ್ತೇವೆ ಎಂದು ಹೇಳಿಕೊಂಡಿದೆ.

ಕೇರಳದಲ್ಲಿ ಅಧಿಕಾರದಲ್ಲಿರುವ ಎಲ್‌ಡಿಎಫ್ ಮತ್ತು ವಿರೋಧ ಪಕ್ಷ ಯುಡಿಎಫ್ ಎರಡೂ ಖಾಸಗಿ ಉದ್ಯಮಿಗಳಿಗೆ ವಿಮಾನ ನಿಲ್ದಾಣದ ನಿರ್ವಹಣೆ ನೀಡುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದವು. ತೀವ್ರ ವಿರೋಧಗಳ ನಡುವೆಯೂ ವಿಮಾನ ನಿಲ್ದಾಣದ ಆಡಳಿತವನ್ನು ಅದಾನಿ ಗ್ರೂಪ್  ಕೈಗೆತ್ತಿಕೊಂಡಿದೆ.

ಇದನ್ನೂ ಓದಿ:- ಚಿಂತಾಮಣಿ: ನೀರಿನಲ್ಲಿ ಮುಳುಗಿದ್ದ ಯುವಕನ ಶವ ಪತ್ತೆ

ಕಳೆದ ವರ್ಷ, ಕೇರಳದ ಅಸೆಂಬ್ಲಿಯಲ್ಲಿ  ವಿಮಾನ ನಿಲ್ದಾಣದ ಖಾಸಗೀಕರಣವನ್ನು ವಿರೋಧಿಸುವ ನಿರ್ಣಯವನ್ನು  ಸರ್ವ ಪಕ್ಷಗಳು ಸರ್ವಾನುಮತದಿಂದ ಅಂಗೀಕರಿಸಿತು. ಕೇರಳದ ಮುಖ್ಯಮಂತ್ರಿ ಪಿನರಾಯಿ ವಿಜಯನ್‌, ವಿಮಾನ ನಿಲ್ದಾಣವನ್ನು ಅದಾನಿ ಗ್ರೂಫ್‌ ವಹಿಸಿಗೊಂಡಿರುವುದನ್ನು ಖಂಡಿಸಿದ್ದಾರೆ. ಇದು ಯಾವುದೇ ಅಬಿವೃದ್ಧಿಗಾಗಿ ಅಲ್ಲ, ಬದಲಾಗಿ ಔದ್ಯಮಿಕ ಏಕಸ್ವಾಮ್ಯತೆಯನ್ನು ಸೃಷ್ಟಿಸಲು ಈ ರೀತಿ ಖಾಸಗೀಕರಣ ಮಾಡಲಾಗುತ್ತದೆ ಎಂದು ಪಿನರಾಯಿ ವಿಜಯನ್‌ ಕೇಂದ್ರ ಸರ್ಕಾರವನ್ನು ದೂರಿದ್ದಾರೆ.

Advertisement

ಕೇರಳದ ಮೊದಲ ವಿಮಾನ ನಿಲ್ದಾಣವಾಗಿರುವ ತಿರುವನಂಪುರಂನ  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 1932ರಲ್ಲಿ ಸ್ಥಾಪಿಸಲ್ಪಟ್ಟಿತು.  ಈ ನಿಲ್ದಾಣವು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next