Advertisement

ನಟಿ ಪ್ರಿಯಾ ಪ್ರಕಾಶ್‌ ಹಾಡಿನ ವಿರುದ್ಧ ಕೇಸು

10:25 AM Feb 15, 2018 | Harsha Rao |

ಹೈದರಾಬಾದ್‌/ಕೊಚ್ಚಿ: ರಾತ್ರೋ ರಾತ್ರಿ ದೇಶಾದ್ಯಂತ ಜನಪ್ರಿಯತೆ ಪಡೆದು ಕೊಂಡಿರುವ ಹೊಸ ಮಲಯಾಳಂ ಸಿನಿಮಾ “ಒರು ಅದಾರ್‌ ಲವ್‌’ ನಿರ್ದೇಶಕ ಒಮರ್‌ ಲುಲು ವಿರುದ್ಧ ಹೈದರಾಬಾದ್‌ನಲ್ಲಿ ಕೇಸು ದಾಖಲಿಸಲಾಗಿದೆ. ಜನಪ್ರಿಯವಾಗಿರುವ ಹಾಡಿನಲ್ಲಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂಥ ಅಂಶವಿದೆ ಎಂದು ಆರೋಪಿಸಿ ಮುತ್ತಿನ ನಗರಿಯ ಫ‌ಲಕ್‌ನಮಾ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ. ಆದರೆ ಈ ಅಂಶವನ್ನು ನಿರ್ದೇಶಕ ಲುಲು ನಿರಾಕರಿಸಿದ್ದಾರೆ.

Advertisement

ಆರ್‌ಎಸ್‌ಎಸ್‌ಗೆ ಉತ್ತರ: ಇದೇ ವೇಳೆ ವೈರಲ್‌ ಆಗಿರುವ ವಿಡಿಯೋಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ “ಪ್ರೇಮಿಗಳ ದಿನಾಚರಣೆ’ ವಿರುದ್ಧ ಆರ್‌ಎಸ್‌ಎಸ್‌ನವರು ಪ್ರತಿಭಟಿಸುವುದಕ್ಕೆ ಉತ್ತರವಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ಹಾಡನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುವ ಮೂಲಕ ಭಾರತೀಯರು ಪ್ರೀತಿಸಲು ಇಷ್ಟಪಡುತ್ತಾರೆಯೋ ಹೊರತು ದ್ವೇಷಿಸಲು ಅಲ್ಲ ಎಂದು ಬರೆದುಕೊಂಡಿದ್ದಾರೆ. ಪ್ರಧಾನಿ ಮೋದಿ ವಿರುದ್ಧವೂ ಟ್ವಿಟರ್‌ನಲ್ಲಿ ಕಾಲೆಳೆದಿರುವ ಮೇವಾನಿ “ನನಗೆ ಇದುವರೆಗೆ ಹಲವರು ಐ ಲವ್‌ ಯೂ ಹೇಳಿದ್ದಾರೆ. ಅದೇ ರೀತಿ ಮೋದಿಜಿಯವರಿಗೆ ಹೇಳಿದ್ದಾರೆಯೇ?’ ಎಂದು ಪ್ರಶ್ನಿಸಿದ್ದಾರೆ.

ಯಾರೂ ಫ‌ತ್ವಾ ನೀಡಿಲ್ಲ: ತನಗೆ ಆರ್‌ಎಸ್‌ಎಸ್‌ ವತಿಯಿಂದ ಯಾರೂ ಫ‌ತ್ವಾ ನೀಡಿಲ್ಲ ಮತ್ತು ಕಿರುಕುಳ ನೀಡಿಲ್ಲ. ಅದರ ಬದಲಾಗಿ ನನ್ನ ಹಾಡಿನ ದೃಶ್ಯವನ್ನು ಮೆಚ್ಚಿಕೊಂಡಿದ್ದಾರೆ ಎಂದು ಉದಯೋನ್ಮುಖ ನಟಿ ಪ್ರಿಯಾ ಪ್ರಕಾಶ್‌ ವಾರಿಯರ್‌ ಟ್ವೀಟ್‌ನಲ್ಲಿ ಶಾಸಕ ಮೇವಾನಿಗೆ ಉತ್ತರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next