Advertisement

ನಟಿ ಪೂಜಾ ಗಾಂಧಿ ಪ್ರಕರಣ: 23ಕ್ಕೆ ತೀರ್ಪು

11:15 AM Dec 14, 2017 | Team Udayavani |

ರಾಯಚೂರು: ನಟಿ ಪೂಜಾ ಗಾಂಧಿ ಅವರ ವಿರುದ್ಧ ದಾಖಲಾದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂ ಧಿಸಿದಂತೆ ನಗರದ ಎರಡನೇ ಜೆಎಂಎಫ್‌ ನ್ಯಾಯಾಲಯದಲ್ಲಿ ಬುಧವಾರ ಪ್ರಕಟಗೊಳ್ಳಬೇಕಿದ್ದ ತೀರ್ಪನ್ನು ಡಿ.23ಕ್ಕೆ ಮುಂದೂಡಲಾಗಿದೆ. 

Advertisement

ಪೂಜಾ ಗಾಂಧಿ  ಅವರ ತಾಯಿಯ ಅನಾರೋಗ್ಯದ ಕಾರಣ ಅವರು ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾ ಧೀಶೆ ಪೂರ್ಣಿಮಾ ಯಾದವ್‌, ಪೂಜಾ ಅವರ ಗೈರನ್ನು ವಿಚಾರಿಸಿ, ಕಾರಣ ನೀಡಿ ಅರ್ಜಿ  ಸಲ್ಲಿಸುವಂತೆ ಸೂಚಿಸಿದರು. ಅದರನ್ವಯ ಆಸ್ಪತ್ರೆಗಳ ವಿವರ ಸಹಿತ ಅರ್ಜಿ ಸಲ್ಲಿಸಲಾಯಿತು. ದಾಖಲೆ ಪರಿಶೀಲಿಸಿದ ನ್ಯಾಯಾ ಧೀಶರು ಡಿ.23ಕ್ಕೆ ತೀರ್ಪು ಮುಂದೂಡಿದ್ದಾರೆ ಎಂದು ನಟಿ ಪರ ವಕೀಲ ಜಬ್ಟಾರ್‌ಖಾನ್‌ ಪಠಾಣ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next