Advertisement

ಪತಿಗೆ ಡಿವೋರ್ಸ್ ನೀಡಿದ ಮರುದಿನವೇ ಬೆತ್ತಲೆ ಫೋಟೊ ಹರಿಬಿಟ್ಟ ನಟಿ ಕಿಮ್

05:56 PM Feb 27, 2021 | Team Udayavani |

ಅಮೆರಿಕ : ಸೋಷಿಯಲ್ ಮೀಡಿಯಾ ತಾರೆ, ಖ್ಯಾತ ಮಾಡೆಲ್ ಕಿಮ್ ಕಾರ್ಡಶಿಯಾನ್ ಪತಿಗೆ ಡಿವೋರ್ಸ್ ನೀಡಿದ ಮರುದಿನವೇ ತಮ್ಮ ನ್ಯೂಡ್ ಫೋಟೊ ಹಂಚಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದ್ದಾರೆ.

Advertisement

ಕಳೆದ ಕೆಲ ದಿನಗಳಿಂದ ಕಿಮ್ ಸಂಸಾರದಲ್ಲಿ ಬಿರುಕು ಮೂಡಿದೆ ಎನ್ನುವ ರೂಮರ್ ಹರಿದಾಡುತ್ತಿತ್ತು. ಈಕೆ ತನ್ನ ಪತಿ ಅಮೆರಿಕನ್ ರಾಪರ್ ಕಾನ್ಯೆ ವೆಸ್ಟ್ ಗೆ ವಿಚ್ಛೇದನ ನೀಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಅದು ಇದೀಗ ಸತ್ಯವಾಗಿದ್ದು, ಶುಕ್ರವಾರ ( ಫೆ.26) ಕಿಮ್ ಪತಿಯಿಂದ ಡಿವೋರ್ಸ್ ಬಯಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಮೂಲಕ ಏಳು ವರ್ಷಗಳ ದಾಂಪತ್ಯ ಕಡಿದುಕೊಳ್ಳಲು ಬಯಸಿದ್ದಾರೆ.

2013 ರಲ್ಲಿ ಮದುವೆ ಮುಂಚೆ ಕಾನ್ಯೆ ಜತೆ ಮೊದಲ ಮಗು ಪಡೆದ ಕಿಮ್, 2014 ರಲ್ಲಿ ಆತನೊಂದಿಗೆ ವಿವಾಹವಾಗಿದ್ದಳು. ಮದುವೆ ನಂತರ ಮತ್ತೊಂದು ಮಗು ಜನಿಸಿತು. 40 ವರ್ಷದ ಕಿಮ್ ಗೆ ಇದು ನಾಲ್ಕನೇ ವಿವಾಹ. 2000, 2004 ಹಾಗೂ 2011 ರಲ್ಲಿ ಮದುವೆಯಾಗಿ ಅವರೆಲ್ಲರಿಗೂ ವಿಚ್ಛೇದನ ನೀಡಿ ಕಾನ್ಯೆ ಜತೆ ನಾಲ್ಕನೇ ಬಾರಿ ಸಪ್ತಪದಿ ತುಳಿದಿದ್ದಳು. ಇದೀಗ ಇವನಿಗೂ ಡಿವೋರ್ಸ್ ನೀಡುತ್ತಿದ್ದು, ಮಕ್ಕಳ ಪಾಲನೆ ಹೊಣೆ ನಿರ್ಣಯಿಸಲು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಇನ್ನು ಪತಿಯಿಂದ ವಿಚ್ಛೇದನ ಬಯಸಿರುವ ಕಿಮ್ ವಿವಸ್ತ್ರಳಾಗಿ ಕಾಣಿಸಿಕೊಂಡ ತಮ್ಮ ಫೋಟೊ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅವರ ಈ ನಡೆ ಹಲವ ಅಚ್ಚರಿಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next