Advertisement

ಕ್ಯಾನ್ಸರ್ ರೋಗಿಗಳಿಗಾಗಿ ತಲೆಗೂದಲು ದಾನ ಮಾಡಿದ ನಟಿ

01:55 PM Jul 05, 2021 | Team Udayavani |

ಬೆಂಗಳೂರು : ಚಂದನವನದ ನಟಿ ಕಾವ್ಯಾ ಶಾಸ್ತ್ರಿ ಇದೀಗ ಮತ್ತೊಂದು ಜನಮೆಚ್ಚುವ ಕಾರ್ಯ ಮಾಡಿದ್ದಾರೆ. ಕ್ಯಾನ್ಸರ್ ರೋಗಿಗಳಿಗಾಗಿ ತಮ್ಮ ತಲೆಗೂದಲುಗಳನ್ನು ದಾನ ಮಾಡಿದ್ದಾರೆ ಈ ಕನ್ನಡತಿ.

Advertisement

ಸೋಷಿಯಲ್ ವರ್ಕ್ ನಲ್ಲಿ ಸದಾ ಮುಂದಿರುವ ಕಾವ್ಯಾ ಕೊರೋನಾ ಸಮಯದಲ್ಲಿ ಪ್ಲಾಸ್ಮಾ ದಾನ ಮಾಡಿದ್ದರು. ಇದೀಗ ಕ್ಯಾನ್ಸರ್ ರೋಗಿಗಳಿಗೆ ಕೂದಲು ನೀಡಿ ಇತರರಿಗೆ ಮಾದರಿಯಾಗಿದ್ದಾರೆ.

ಈ ಬಗ್ಗೆ ಮಾತಾಡಿರುವ ಅವರು “ಕ್ಯಾನ್ಸರ್ ರೋಗಿಗಳಿಗೆ ನಾನು ಕೂದಲು ದಾನ ಮಾಡಿದ್ದೇನೆ, ಕ್ಯಾನ್ಸರ್ ನಿಂದಾಗಿ ನಾನು ನನ್ನ ಚಿಕ್ಕಪ್ಪನನ್ನು ಕಳೆದುಕೊಂಡಿದ್ದೆ. ಆ ನೋವನ್ನು ಹತ್ತಿರದಿಂದ ಕಂಡಿದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ. ಕೂದಲು ದಾನ ಸಣ್ಣ ಕೆಲಸವೇ ಇರಬಹುದು, ಆದರೆ ಒಳ್ಳೇ ಕೆಲಸಕ್ಕೆ ನೀವು ಸಹ ಕೈಜೋಡಿಸಿ.” ಎಂದು ನಟಿ ಮನವಿ ಮಾಡಿದ್ದಾರೆ.

ಇನ್ನು ನಟಿ ಕಾವ್ಯಾ ಶಾಸ್ತ್ರಿ ತಾವು ಕೂದಲು ಕತ್ತರಿಸಿರುವ ಚಿತ್ರವನ್ನು ಇನ್‍ಸ್ಟಾಗ್ರಾಮ್‍ನಲ್ಲಿ  ಹಂಚಿಕೊಂಡಿದ್ದಾರೆ.

ನಟಿಯ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದ್ದು, ಅಭಿಮಾನಿಗಳು ಕಾವ್ಯಾ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next