ಬೆಂಗಳೂರು: ನಗರದ ರಸ್ತೆಗಳಲ್ಲಿ ಭಾರಿ ಮಳೆಯ ನಂತರ ಕಾಣಿಸಿಕೊಂಡಿರುವ ಗುಂಡಿಗಳು ಈಗಾಗಲೇ ಕೆಲವರನ್ನು ಬಲಿ ಪಡೆದಿವೆ. ಹಲವು ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ರಸ್ತೆ ಗುಂಡಿಗಳ ವಿರುದ್ದ ಸರ್ಕಾರದ ಗಮನ ಸೆಳೆಯಲು ನಟಿ ಸೋನು ಗೌಡ ಶುಕ್ರವಾರ ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ.
ಎಂ.ಜಿ.ರಸ್ತೆಯಲ್ಲಿನ ಬೃಹತ್ ಗುಂಡಿಯನ್ನು ಕಲಾವಿದ ಬಾದಲ್ ನಂಜುಂಡಸ್ವಾಮಿ ಸ್ವಿಮ್ಮಿಂಗ್ ಪೂಲ್ ಮಾದರಿಯಲ್ಲಿ ಸಿದ್ದಪಡಿಸಿ, ಅದರಲ್ಲಿ ಸೋನುಗೌಡ ಮತ್ಸ್ಯಕನ್ಯೆಯ ರೀತಿಯ ವೇಷ ಧರಿಸಿ ಕುಳಿತಿದ್ದರು.
ನಟಿಯಾಗಿ ನನಗೂ ಸಾಮಾಜಿಕ ಜವಾಬ್ದಾರಿ ಇದೆ. ರಸ್ತೆ ಗುಂಡಿಗಳನ್ನು ಶೀಘ್ರ ಮುಚ್ಚಿ , ಸರಿಪಡಿಸಬೇಕು ಎಂದು ನಟಿ ಸೋನು ಈ ವೇಳೆ ಸರ್ಕಾರವನ್ನು ಆಗ್ರಹಿಸಿದರು.