Advertisement

ತಾಯಿಯಾಗುವ ಖುಷಿಯಲ್ಲಿ ನಟಿ ಚೈತ್ರ ರೈ

07:23 PM Jul 07, 2021 | Team Udayavani |

ಕನ್ನಡ, ತೆಲುಗು ಕಿರು ತೆರೆಗಳಲ್ಲಿ ಹೆಸರು ಮಾಡಿರುವ ನಟಿ ಚೈತ್ರ ರೈ ಇದೀಗ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.  ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ವಿಶಾಕ ಪಾತ್ರದ ಮೂಲಕ ಜನರಿಗೆ ಪರಿಚಯವಾದ ಚೈತ್ರ ರಾವ್ ನಂತರ ಕುಸುಮಾಂಜಲಿ, ನಾಗಮಣಿ, ಪೌರ್ಣಮಿ ಧಾರಾವಾಹಿಗಳಲ್ಲಿ ನಟಿಸಿದರು.

Advertisement

ಇನ್ನು ತೆಲಗಿನಲ್ಲಿಯೂ ಗುರುತಿಸಿಕೊಂಡಿರುವ ಇವರು,  ಅಟ್ಟರಿಂಟುಲೊ ಅಕ್ಕಾಚೆಲ್ಲೆಲೋ ಮೂಲಕ ಸಂಖತ್ ಹೆಸರು ಮಾಡಿದರು. ಇದೀಗ ಚೈತ್ರ ತಾವು ಗರ್ಭಿಣಿ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿರುವ ನಟಿ ಚೈತ್ರ ರೈ, ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಬಗ್ಗೆ ಬರೆದಿರುವ ನಟಿ, ಕೆಲಸ ಮಾಡಲು ಸಾಕಷ್ಟು ಸಮಯ ಇದೆ. ಕುಟುಂಬ ಮುಖ್ಯ ವಿಷಯವಲ್ಲ, ಅದೇ ಎಲ್ಲ. ನಾನು ಹಾಗೂ ಪ್ರಸನ್ನ ಶೆಟ್ಟಿ ಈ ವಿಷಯ ಹೇಳಲು ತುಂಬ ಖುಷಿಪಡುತ್ತೇವೆ. ನಮ್ಮ ಈ ಹೊಸ ಅಧ್ಯಾಯಕ್ಕೆ ನಿಮ್ಮೆಲ್ಲರ ಹಾರೈಕೆ, ಆಶೀರ್ವಾದ, ಪ್ರೀತಿ ಇರಲಿ. ನನ್ನ ಜೀವನದ ಸುಂದರವಾದ ಹಂತವನ್ನು ಅನುಭವಿಸುತ್ತಿದ್ದೇನೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next