Advertisement

37 ವರ್ಷಗಳಿಂದ 40 ರೂಪಾಯಿ ಕೊಟ್ಟು ತಂದ ಗಣಪನಿಗೆ ಪೂಜೆ ಸಲ್ಲಿಸುತ್ತಿದ್ದಾರೆ ಜಗ್ಗೇಶ್

12:57 PM Sep 08, 2024 | Team Udayavani |

ಬೆಂಗಳೂರು: ಗಣೇಶ ಹಬ್ಬದ(Ganesha Festival) ಸಂಭ್ರಮ ಎಲ್ಲೆಡೆ ಜೋರಾಗಿದೆ. ಸೆಲೆಬ್ರಿಟಿಗಳು ಕೂಡ ತನ್ನ ಕುಟುಂಬದ ಜತೆ ಸೇರಿಕೊಂಡು ಗಣೇಶನಿಗೆ ಪೂಜೆಯನ್ನು ಮಾಡಿ ಪ್ರಾರ್ಥಿಸಿದ್ದಾರೆ.

Advertisement

ನವರಸ ನಾಯಕ ಜಗ್ಗೇಶ್‌ (Actor Jaggesh) ಮೊದಲಿನಿಂದಲೂ ದೈವ ಭಕ್ತಿಯನ್ನು ಹೆಚ್ಚಾಗಿ ನಂಬಿಕೊಂಡು ಬಂದವರು ಎನ್ನುವುದು ಗೊತ್ತೇ ಇದೆ. ರಾಯರ ಅಪ್ಪಟ ಭಕ್ತರು ಆಗಿರುವ ಅವರು ಆಗಾಗ ಮಂತ್ರಾಲಯಕ್ಕೆ ಹೋಗಿ ರಾಯರ ದರ್ಶನ ಪಡೆಯುತ್ತಾರೆ.

ಗಣೇಶ ಹಬ್ಬದ ಸಂದರ್ಭದಲ್ಲಿ ತನ್ನ ಮನೆಯಲ್ಲಿನ ವಿಶೇಷ ಗಣಪನ ಬಗ್ಗೆ ಅವರು ಬರೆದುಕೊಂಡಿದ್ದಾರೆ. 37 ವರ್ಷದ ಹಿಂದೆ 40 ರೂಪಾಯಿ ಕೊಟ್ಟು ತಂದ ಗಣಪತಿ ಮೂರ್ತಿಯ ಬಗ್ಗೆ ಅವರು ಹಬ್ಬದಂದು ವಿಡಿಯೋ ಹಂಚಿಕೊಂಡು ಬರೆದುಕೊಂಡಿದ್ದಾರೆ.

ಸನಾತನ ಧರ್ಮದಲ್ಲಿ ಸಂಸ್ಕೃತಿ ಶೃತಿ ಸ್ಮೃತಿಯಿಂದ ತಲೆಯಿಂದ ತಲೆಗೆ ಹರಿದು ಬಂದದ್ದು.
ನಾವು ಕಲಿತಾಗ ನಮ್ಮ ತಲೆಮಾರಿಗೆ ದಾಟಿಸಬಹುದು. ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೆ ಆಸ್ತಿ ಮಾಡಬೇಕು ಆಗಲೆ ನಮ್ಮ ಹಿರಿಯರ ತತ್ವ ಸಿದ್ಧಾಂತ ಮುಂದಿನ ತಲೆಮಾರಿಗೆ ದೇಣಿಗೆ ಆಗೋದು. ಜ್ನಾನ ಶ್ರೇಷ್ಠ ಸಂಪತ್ತು ನಾವು ಮೊದಲು ಕಲಿತು ಮುಂದಿನ ಪೀಳಿಗೆಯ ದಾಟಿಸಬೇಕು. ನನ್ನ ಅಮ್ಮ ನನಗೆ ಕಲಿಸಿದ ಆಧ್ಯಾತ್ಮಿಕ ಜ್ನಾನ ನನ್ನ ಮೊಮ್ಮಗ ಅರ್ಜುನಿಗೆ ದಾಟಿಸುವ ಪ್ರಯತ್ನ ತಾತನಾದ ನನ್ನಿಂದ ಹಾಗು ಅಜ್ಜಿ ಪರಿಮಳ ಪ್ರಯತ್ನ ಎಂದಿದ್ದಾರೆ.

Advertisement

1987ರಲ್ಲಿ 40ರೂ ಗಣಪನ ತಂದು ಇವನ ಅಪ್ಪ ಗುರುರಾಜ ಹುಟ್ಟಿದಾಗ ಗಣಪತಿ ವ್ರತ ಆರಂಭಿಸಿದೆ ಆದರೆ ಆ ಗಣಪನ ವಿಸರ್ಜನೆ ಮಾಡದೆ ಹಾಗೆ ಉಳಿಸಿಕೊಂಡಿರುವೆ ಆ ಗಣಪನಿಗೆ ಈಗ ಮಗ ಗುರುರಾಜನ ವಯಸ್ಸು 37 ವರ್ಷ. ಎಲ್ಲಿ ಆಧ್ಯಾತ್ಮಿಕ ಜ್ನಾನ ಇರುತ್ತದೆ ಅಲ್ಲಿ ಗುರು ಹಿರಿಯರ ಹಾಗು ದೇವರ ಮೇಲಿನ ಭಕ್ತಿ ಉಳಿಯುತ್ತದೆ. ಭಕ್ತಿ ಇದ್ದ ಕಡೆ ಭಯ ಶ್ರದ್ಧೆ ಶಿಸ್ತು
ಶಿಸ್ತು ಇದ್ದಾಗ ಯಶಸ್ಸು ತನ್ನಂತೆ ಮೂಡುತ್ತದೆ. ಗಣಪನ ಕೃಪೆಯಿಂದ ಸರ್ವ ಸಮಾಜದ ಯವಮನಸ್ಸುಗಳು ಯಶಸ್ಸಿಯಾಗಲಿ ಸರ್ವೇಜನಾಃಸುಖಿನೋಭವಂತು ಎಂದು ಬರೆದುಕೊಂಡಿದ್ದಾರೆ.

ಗುರುಪ್ರಸಾದ್‌ ಅವರ ʼರಂಗನಾಯಕʼ ಚಿತ್ರದಲ್ಲಿ ಜಗ್ಗೇಶ್‌ ಇತ್ತೀಚೆಗೆ ಕಾಣಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next