Advertisement

Kannada Short Movie: ದುಡ್ಡಿನ ಸುತ್ತ ಜೋಕರ್‌ ಆಲ್ಬಮ್‌

01:19 PM Sep 17, 2024 | Team Udayavani |

“ಜೋಕರ್‌ ಆಕ್ಟರ್‌’ ಎಂಬ ಕಿರುಚಿತ್ರವೊಂದು ತಯಾರಾಗಿದೆ. ಪ್ರಶಾಂತ್‌ ಮಯೂರ ನಿರ್ದೇಶನದ ಕಿರುಚಿತ್ರ ಇದು.ದುಡ್ಡು ತುಂಬಾ ಕೆಟ್ಟದು… ಎನ್ನುವ ವಿಷಯವನ್ನು ಮುಂದಿಟ್ಟುಕೊಂಡು 33 ನಿಮಿಷಗಳಲ್ಲಿ ಕಿರುಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.

Advertisement

ಕಲೆ, ಕೊಲೆ, ಹಣದ ಸುತ್ತ ನಡೆಯುವ ಕಥೆಯನ್ನು ಪ್ರಶಾಂತ್‌ ಮಯೂರ ಅವರು ಜೋಕರ್‌ ಆಕ್ಟರ್‌ ಮೂಲಕ ಕಟ್ಟಿಕೊಟ್ಟಿದ್ದಾರೆ. ಕಿರುಚಿತ್ರದ ಪ್ರದರ್ಶನದ ನಂತರ ಮಾತನಾಡಿದ ನಿರ್ದೇಶಕ, ನಟ ನಿರ್ಮಾಪಕ ಪ್ರಶಾಂತ್‌ ಮಯೂರ, “ನಾನು ಅಣ್ಣಾವ್ರ ಅಭಿಮಾನಿ.ಅಣ್ಣಾವ್ರ ಧ್ವನಿಯಿಂದ ಆರಂಭವಾಗಿ ಅಣ್ಣಾವ್ರ ಧ್ವನಿಯಿಂದ ಕಿರುಚಿತ್ರ ಪೂರ್ಣಗೊಳ್ಳಲಿದೆ. ಮಯೂರ ಟಾಕೀಸ್‌ ವತಿಯಿಂದ ನಿರ್ಮಾಣವಾಗಿರುವ ಎರಡನೇ ಕಿರುಚಿತ್ರವಿದು. ಸ್ನೇಹಿತರೆಲ್ಲಾ ಸೇರಿ ಸೀಮಿತ ಬಜೆಟ್‌ ನಲ್ಲಿ ಈ ಕಿರುಚಿತ್ರ ಮಾಡಿದ್ದೇವೆ. ಸಿಂಕ್‌ ಸೌಂಡ್‌ ನಲ್ಲಿ ಮಾಡಿರುವ ಕಿರುಚಿತ್ರ ಇದು’ ಎಂದರು.

ಈ ಕಿರುಚಿತ್ರವನ್ನು ಯೂಟೂಬ್‌ ಚಾನೆಲ್‌ ನಲ್ಲಿ ಪ್ರಕಟಿಸಲಾಗುವುದು, ಕಿರುಚಿತ್ರ ಇಷ್ಟವಾದವರೂ ಕ್ಯೂ ಆರ್‌ ಕೋಡ್‌ ಮೂಲಕ ಕನಿಷ್ಠ 20 ರೂಪಾಯಿ ಪಾವತಿಸಬಹುದು. ನಟಿ ಯುಕ್ತ ಪರ್ವಿ, ಶೈಲೇಶ್‌ ,ಮಧುಸೂದನ್‌, ಉಗ್ರಂ ಸುರೇಶ್‌ ಕಿರುಚಿತ್ರದ ಬಗ್ಗೆ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next