ಬೆಂಗಳೂರು: ಜೂ.ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ – ಅವಿವಾ ಬಿದ್ದಪ್ಪ ಅವರ ನಿಶ್ಚಿತಾರ್ಥ ಕುಟುಂಬಸ್ಥರ ಸಮ್ಮುಖದಲ್ಲಿ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಭಾನುವಾರ( ಡಿ.11 ರಂದು) ನೆರವೇರಿದೆ.
ಖ್ಯಾತ ಫ್ಯಾಷನ್ ಡಿಸೈನರ್ ಆಗಿರುವ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಅವರೊಂದಿಗೆ ಜೂ. ರೆಬೆಲ್ ಸ್ಟಾರ್ ಉಂಗುರವನ್ನು ತೊಡಗಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಅಂಬಿ – ಬಿದ್ದಪ್ಪ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಈ ಸುಂದರ ಕ್ಷಣದಲ್ಲಿ ಎರಡೂ ಕುಟುಂಬದ ಆಪ್ತರು ಜೊತೆಯಾಗಿ, ಮಕ್ಕಳ ಸಂತಸದಲ್ಲಿ ಭಾಗಿಯಾದ್ದಾರೆ.
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ದರ್ಶನ್, ಯಶ್ ದಂಪತಿ ಸೇರಿದಂತೆ, ಅಭಿಷೇಕ್ ಅವರ ಮುಂದಿನ ಸಿನಿಮಾವನ್ನು ನಿರ್ದೇಶನ ಮಾಡಲಿರುವ ನಿರ್ದೇಶಕ ಮಹೇಶ್ ಕುಮಾರ್ ಅವರು ಭಾಗಿಯಾಗಿದ್ದಾರೆ. ಅನೇಕರು ಅಭಿಷೇಕ್ – ಅವಿವಾ ಅವರಿಗೆ ಶುಭಾಶಯವನ್ನು ಕೋರಿದ್ದಾರೆ.
ಎಂಗೇಜ್ಮೆಂಟ್ ಪೋಟೋದಲ್ಲಿ ಅವಿವಾ – ಅಭಿಷೇಕ್ ಇಬ್ಬರು ಸುಂದರವಾಗಿ ಕಾಣುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಪೋಟೋಗಳು ಸದ್ದು ಮಾಡುತ್ತಿದೆ. ಅಭಿಷೇಕ್ ಹಾಗೂ ಅವಿವಾ ಅನೇಕ ವರ್ಷಗಳಿಂದ ಸ್ನೇಹಿತರು ಅವರ ಸ್ನೇಹಕ್ಕೆ ಈಗ ನಿಶ್ಚಿತಾರ್ಥ ಮೂಲಕ ಹೊಸ ಅರ್ಥ ಕೊಟ್ಟಿದ್ದಾರೆ.
ʼಕಾಳಿʼ ಹಾಗೂ ʼಬ್ಯಾಡ್ ಮ್ಯಾನರ್ಸ್ʼ ಸಿನಿಮಾದಲ್ಲಿ ಅಭಿಷೇಕ್ ಬ್ಯುಸಿಯಾಗಿದ್ದಾರೆ. ಅವಿವಾ ತಂದೆಯ ಹಾದಿಯಲ್ಲೇ ಫ್ಯಾಷನ್ ಡಿಸೈನಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಇದ್ದಾರೆ.
ಇಬ್ಬರು ಯಾವಾಗ ಮದುವೆಯಾಗಲಿದ್ದಾರೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.