ಪುತ್ತೂರು: ಮಕ್ಕಳಿಗೆ ಭವಿಷ್ಯವನ್ನು ನಿರ್ಧರಿಸುವ ಸಾಮರ್ಥ್ಯವನ್ನು ಪಡೆಯಲು ಶಿಕ್ಷಣದ ಜತೆಗೆ ನಿರ್ದಿಷ್ಟ ಕೌಶಲ, ಮಾಹಿತಿ ಮತ್ತು ಚಟುವಟಿಕೆಗಳಲ್ಲಿ ಭಾಗ ವಹಿಸುವ ವಾತಾವರಣದ ಅಗತ್ಯ ಇದೆ ಎಂದು ಜಿಎಸ್‌ಬಿ ಅಭಿವೃದ್ಧಿ ಸಭಾದ ಸದಸ್ಯ ವಿನಾಯಕ ಭಟ್ ಹೇಳಿದರು.
ಅವರು ಜಿಎಸ್‌ಬಿ ಚಿಂತನ ಸಾಹಿತ್ಯ ಮತ್ತು ಕಲಾ ವೇದಿಕೆಯ ವತಿಯಿಂದ ನಗರದ ಭುವನೇಂದ್ರ ಕಲಾ ಮಂದಿರದಲ್ಲಿ ಆಯೋಜಿಸಲಾದ ಮೂರು ದಿನಗಳ ಬೇಸಗೆ ಶಿಬಿರ ಉದ್ಘಾಟನ ಸಮಾರಂಭ ದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳಿಗೆ ಹಿರಿಯರು, ಅನುಭವಿಗಳು ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದಾಗ ಮಾತ್ರ ಬೆಳವಣಿಗೆ ಸಾಧ್ಯ ಎಂದರು.
ಜಿಎಸ್‌ಬಿ ಮಹಿಳಾ ವೃಂದದ ನಿಕಟ ಪೂರ್ವ ಕಾರ್ಯದರ್ಶಿ ಶೈಲಾ ಪ್ರಭು ಮಾತನಾಡಿ, ಮಕ್ಕಳು ಉತ್ತಮ ಸಂಸ್ಕಾರ ವಂತರಾಗಲು ಮನೆಯವರ ಪ್ರೋತ್ಸಾಹದ ಜತೆಗೆ ಸಮುದಾಯದ ಕಾರ್ಯ ಕ್ರಮಗಳನ್ನು ಭಾಗವಹಿಸುವುದು ಉತ್ತಮ ಬೆಳವಣಿಗೆ. ಸಮುದಾಯದ ಮಕ್ಕಳು ಒಡನಾಡಿಗಳಾಗಿ ಬೆರೆಯಲು ಶಿಬಿರ ಪೂರಕವಾಗಿದೆ ಎಂದು ಹೇಳಿದರು.
ಹಿರಿಯರಾದ ಗೀತಾ ಕಾಮತ್, ಉಲ್ಲಾಸ್ ಪೈ, ವಿಜಯಾ ಪೈ ಶುಭ ಹಾರೈಸಿದರು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ರಜನಿ ಪ್ರಭು, ದಿವ್ಯಾ ಶೆಣೈ, ಶೋಭಾ ಪ್ರಭು, ಮೇಘನಾ ಪೈ, ಪ್ರತಿಭಾ ಪೈ ಉಪಸ್ಥಿತರಿದ್ದರು.
ಮೂರು ದಿನಗಳ ಶಿಬಿರದಲ್ಲಿ ಕ್ರಾಫ್ಟ್, ಚಿತ್ರಕಲೆ, ವ್ಯಕ್ತಿತ್ವ ವಿಕಸನ, ನಾಟಕ, ಭಜನೆ, ಹಾಡುಗಳು, ಪರಿಸರ ಸಂರಕ್ಷಣೆ ಮಾಹಿತಿ, ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಚಾಲಕಿ ವತ್ಸಲಾ ನಾಯಕ್ ಸ್ವಾಗತಿಸಿ, ನಯನಾ ಹೆಗ್ಡೆ ವಂದಿಸಿದರು. ಸಹನಾ ಹೆಗ್ಡೆ ನಿರ್ವಹಿಸಿದರು.