Advertisement

ನಿವೃತ್ತ ನೌಕರರಿಗೆ ಗ್ರಾಚ್ಯುಟಿ ಶೀಘ್ರ ಪಾವತಿಗೆ ಕ್ರಮ: ಸಚಿವ ಅಂಗಾರ

01:48 AM Sep 29, 2021 | Team Udayavani |

ಪುತ್ತೂರು: ಕೆಎಸ್ಸಾರ್ಟಿಸಿ ನಿವೃತ್ತ ನೌಕರರಿಗೆ ಕಳೆದ ಒಂಬತ್ತು ತಿಂಗಳಿನಿಂದ ಗ್ರಾಚ್ಯುಟಿ ಪಾವತಿಯಾಗದಿರುವ ಬಗ್ಗೆ ಗುರುವಾರ ಸಾರಿಗೆ ಸಚಿವರ ಗಮನಕ್ಕೆ ತಂದು ಶೀಘ್ರ ಪಾವತಿಗೆ ಕ್ರಮ ಕೈಗೊಳ್ಳುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಅಂಗಾರ ಹೇಳಿದರು.

Advertisement

ಪುತ್ತೂರು ಮುಕ್ರಂಪಾಡಿ ವಿಭಾಗೀಯ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗದ ದಶಮಾನೋತ್ಸವ, ನಿವೃತ್ತ ನೌಕರರ ಸಮ್ಮಾನ ಸಮಾರಂಭ ಉದ್ಘಾಟಿಸಿ ನಿವೃತ್ತ ನೌಕರರ ಬೇಡಿಕೆ ಆಲಿಸಿ ಬಳಿಕ ಅವರು ಮಾತನಾಡಿದರು.

ನೌಕರರಿಗೆ ಸಿಗಬೇಕಾದ ಸವಲತ್ತುಗಳನ್ನು ಸಕಾಲದಲ್ಲಿ ಒದಗಿಸುವುದು ಸರಕಾರದ ಜವಾಬ್ದಾರಿ. ಆದರೆ ಪ್ರಸ್ತುತ ಕೋವಿಡ್‌ ಸಂಕಷ್ಟದಿಂದ ಉಂಟಾಗಿರುವ ಆರ್ಥಿಕ ನಷ್ಟದ ಬಗ್ಗೆಯು ನಿವೃತ್ತ ನೌಕರರು ಯೋಚನೆ ಮಾಡಬೇಕು. ಕೊಂಚ ವಿಳಂಬವಾದರೂ ಸಹಕಾರ ನೀಡ
ಬೇಕು. ಹಾಲಿ ಸರಕಾರ ನಿವೃತ್ತ ನೌಕರರ ಹಿತ ಕಾಯಲು ಬದ್ಧ ವಾಗಿದೆ ಎಂದರು.

ಇದನ್ನೂ ಓದಿ:ಪೆಟ್ರೋಲ್‌ ಬಂಕ್‌ ಮ್ಯಾನೇಜರ್‌ಗೆ ಹಲ್ಲೆಗೈದು 4.20 ಲ.ರೂ. ಸುಲಿಗೆ

ಸ್ಥಳೀಯರಿಗೆ ಉದ್ಯೋಗ
ದ.ಕ. ಜಿಲ್ಲೆಗೆ ಸಂಬಂಧಿಸಿದ ಹುದ್ದೆಗಳಲ್ಲಿ ಸ್ಥಳೀಯರಿಗೆ ಪ್ರಾಧ್ಯಾನ ನೀಡಬೇಕು ಎಂಬ ಬೇಡಿಕೆ ಇದೆ. ಇದನ್ನು ಈ ಹಿಂದಿನ ಸಾರಿಗೆ ಸಚಿವ ಸವದಿ ಅವರ ಗಮನಕ್ಕೂ ತರಲಾಗಿದೆ. ಜಿಲ್ಲಾವಾರು ಅಥವಾ ವಿಭಾಗವಾರು ನೇಮಕಾತಿಗೆ ಆದ್ಯತೆ ನೀಡಿದರೆ ಕರ್ತವ್ಯ ನಿರ್ವಹಣೆಗೆ ಅನುಕೂಲಕಾರಿ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಸುವುದಾಗಿ ಅಂಗಾರ ಹೇಳಿದರು.

Advertisement

ಶಾಸಕ ಸಂಜೀವ ಮಠಂದೂರು ವಿಭಾಗೀಯ ತಾಂತ್ರಿಕ ಎಂಜಿನಿಯರ್‌ ಆಶಾಲತಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next