ರಾಯಚೂರು: ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಒಂದನೇ ಘಟಕ ಸ್ಥಗಿತಗೊಂಡು ವರ್ಷವಾಗಿದ್ದು, ನವೀಕರಣಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ಶಕ್ತಿನಗರದ ಅತಿಥಿ ಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾ ಡಿದ ಅವರು, ಆರ್‌ಟಿಪಿಎಸ್‌ನ ಬಹುತೇಕ ಘಟಕಗಳು ಹಳೆಯ ದಾಗಿದ್ದು, ಆದ್ಯತಾನುಸಾರ ನವೀಕರಿಸಲಾಗುವುದು ಎಂದರು.
ರಾಜ್ಯದಲ್ಲಿ ಉಚಿತ ವಿದ್ಯುತ್‌ಗೊಸ್ಕರ ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ. ಲೋಡ್ ಶೆಡ್ಡಿಂಗ್‌ಗೆ ಸರಕಾರ ಆದೇಶವನ್ನೇ ಮಾಡಿಲ್ಲ. ನಿರ್ವಹಣೆ ವೇಳೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿರಬಹುದು ಅಷ್ಟೆ. ಸ್ಥಳೀಯವಾಗಿ ಸಮಸ್ಯೆಗಳಿದ್ದರೆ ಗಮನಕ್ಕೆ ತರುವಂತೆ ಜೆಸ್ಕಾಂ ಅಧಿಕಾರಿ ಯನ್ನು ತರಾಟೆಗೆ ತೆಗೆದುಕೊಂಡರು.
ಗೃಹಜ್ಯೋತಿ ಒಳ್ಳೆಯ ಕಾರ್ಯ ಕ್ರಮವಾಗಿದೆ. ರಾಜ್ಯದ 2.14 ಕೋಟಿ ಜನರಿಗೆ ಉಚಿತ ವಿದ್ಯುತ್ ಸೌಲಭ್ಯ ಸಿಗಲಿದೆ. ಪ್ರತಿ ಕುಟುಂಬಕ್ಕೂ 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಈಗಾಗಲೇ 52 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು.
ಆಗಸ್ಟ್‌ನಿಂದ ಶೂನ್ಯ ಬಿಲ್
ವಿದ್ಯುತ್ ಬಳಕೆಯ ವಾರ್ಷಿಕ ಸರಾಸರಿಗೆ ಶೇ.10ರಷ್ಟು ಸೇರಿಸಿ ಮುಂದಿನ ಆಗಸ್ಟ್ ತಿಂಗಳಿಂದ ಶೂನ್ಯ ಬಿಲ್ ನೀಡಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಬಳ್ಳಾರಿಯಲ್ಲಿ ಹೇಳಿದರು.