Advertisement

ಅಕ್ರಮ ಮರಳುಗಾರಿಕೆ, ಗಣಿಗಾರಿಕೆ ತಡೆಗೆ ಕ್ರಮ: ಡಿಸಿ

01:54 AM Jun 20, 2020 | Sriram |

ಮಹಾನಗರ: ನೇತ್ರಾವತಿ, ಫ‌ಲ್ಗುಣಿ/ ಗುರುಪುರ ಹಾಗೂ ಶಾಂಭವಿ ನದಿಗಳ ದಂಡೆಯಾದ ಸರಕಾರಿ ಜಮೀನಿನಲ್ಲಿ ಇರಿಸಿರುವ ದೋಣಿಗಳನ್ನು ಅನಧಿಕೃತ ಮರಳುಗಾರಿಕೆಗೆ ಬಳಸುವ ಸಾಧ್ಯತೆ ಇರುವುದರಿಂದ ಅವುಗಳನ್ನು 3 ದಿನಗಳೊಳಗೆ ಅದರ ಮಾಲಕರು ತೆರವು ಮಾಡಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಸೂಚನೆ ನೀಡಿದ್ದಾರೆ.

Advertisement

ಅಕ್ರಮ ಮರಳುಗಾರಿಕೆ, ಗಣಿಗಾರಿಕೆ ನಿಯಂತ್ರಣ ಕುರಿತು ಶುಕ್ರವಾರ ಜರಗಿದ ಜಿಲ್ಲಾ ಮಟ್ಟದ ಟಾಸ್ಕ್ಫೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ದೋಣಿಗಳನ್ನು ತೆರವುಗೊಳಿಸದಿದ್ದರೆ ದೋಣಿಗಳನ್ನು ವಶಪಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಯವರು ಹೇಳಿದರು.

ಹಗಲು ರಾತ್ರಿ ಕಾರ್ಯಾಚರಣೆ
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತಂಡಗಳು ಪ್ರತಿ ನಿತ್ಯ ಹಗಲು-ರಾತ್ರಿ ಕಾರ್ಯಾಚರಣೆ ನಡೆಸುತ್ತಿದ್ದು ಜೂ.18ರಂದು ಮೂಡುಬಿದಿರೆಯ ನಿಡ್ಡೋಡಿ, ನೀರುಡೆ ಪ್ರದೇಶಗಳಲ್ಲಿ ಮತ್ತು ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಪ್ರದೇಶಗಳಿಗೆ ದಾಳಿ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮಂಗಳೂರು ತಹಶೀಲ್ದಾರ್‌ರವರ ನೇತೃತ್ವದ ತಂಡವು ಜೂ.17ರಂದು ಅಡ್ಯಾರ್‌, ಶಾಂಭವಿ ನದಿ, ಮಳವೂರು, ಅದ್ಯಪಾಡಿ ಡ್ಯಾಂ ಪ್ರದೇಶಗಳಲ್ಲಿ ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಅನಧಿಕೃತ ಮರಳುಗಾರಿಕೆ ಹಾಗೂ ಸಾಗಾಣಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ತಂಡಗಳು ಕೈಗೊಂಡ ಕ್ರಮಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next