Advertisement
ಇದಕ್ಕೆ ಸಂಬಂಧಿಸಿ ಲಭಿಸುವ ದೂರುಗಳಲ್ಲಿ ತೆರಿಗೆ ಇಲಾಖೆಯು ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳುವುದು. ಕೃತಕ ಬೆಲೆಯೇರಿಕೆ ಸೃಷ್ಟಿಸಲಾಗುತ್ತಿದೆ ಎಂದು ಬಂದ ದೂರುಗಳ ಹಿನ್ನೆಲೆಯಲ್ಲಿ ಅಳತೆ ತೂಕ ವಿಭಾಗವು ರಾಜ್ಯದಾದ್ಯಂತ ಮಿಂಚಿನ ಪರಿಶೋಧನೆ ನಡೆಸಿದೆ.
Related Articles
Advertisement
ಸಮಸ್ಯೆಯ ಗಂಭೀರತೆಯನ್ನು ಅವರಿಗೆ ಮನವರಿಕೆ ಮಾಡಿ ಕೊಡಲಾಗುವುದು. ಗ್ರಾಹಕರನ್ನು ಕೊಳ್ಳೆ ಹೊಡೆಯಲು ಯತ್ನಿಸುವವರನ್ನು ಹಿಂಜರಿಯುವಂತೆ ಮಾಡಲು ಎಲ್ಲಾ ರೀತಿಯ ದಾರಿಗಳನ್ನು ಹುಡುಕಲಾಗುವುದು. ತೆರಿಗೆ ವಿನಾಯಿತಿಯ ಪ್ರಯೋಜನವು ಸಾರ್ವಜನಿಕರಿಗೆ ದೊರಕಿಯೇ ಸಿದ್ಧವೆಂದು ಇದೇ ಸಂದರ್ಭದಲ್ಲಿ ಸಚಿವ ಥೋಮಸ್ ಐಸಾಕ್ ತಿಳಿಸಿದ್ದಾರೆ.
ಕೇರಳದ ಮಾದರಿಯಲ್ಲಿ ಬೆಲೆ ಏರುವುದು ಮತ್ತು ಇಳಿಯುವ ಉತ್ಪನ್ನಗಳ ಪಟ್ಟಿಯನ್ನು ಕೇಂದ್ರ ಸರಕಾರವು ಬಿಡುಗಡೆ ಮಾಡಬೇಕು. ಇದರಿಂದಾಗಿ ಜನಸಾಮಾನ್ಯರನ್ನು ಹಗಲು ದರೋಡೆ ಮಾಡುವುದು ತಪ್ಪಲಿದೆ ಎಂದು ಅವರು ತಿಳಿಸಿದರು.
ಜಿಎಸ್‌ಟಿ ಜಾರಿಗೆ ಬರುತ್ತಲೇ ಎಲ್ಲಾ ರಾಜ್ಯಗಳಲ್ಲೂ ಕೃತಕ ಬೆಲೆಯೇರಿಕೆ ಮಾಡಲಾಗಿದೆ. ಇದು ಗ್ರಾಹಕರನ್ನು ವಂಚಿಸಿ ಈ ರೀತಿಯಲ್ಲಿ ಜಿಎಸ್‌ಟಿಯ ಹೆಸರಲ್ಲಿ ಬೆಲೆಯೇರಿಕೆ ಮಾಡಲಾಗಿದೆ ಎಂದು ಅವರು ಬೊಟ್ಟು ಮಾಡಿದರು.
ಕಠಿಣ ಕ್ರಮ: ಸರಕು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಂಡ ಬಳಿಕ ಸಾಮಗ್ರಿಗಳಿಗೆ ಅನ್ಯಾಯಯುತವಾದ ಬೆಲೆ ಏರಿಸುವವರ ವಿರುದ್ಧ ರಾಜ್ಯ ಸರಕಾರವು ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ಎಚ್ಚರಿಕೆ ನೀಡಿದ್ದಾರೆ.
ದಿನಬಳಕೆ ಸಾಮಗ್ರಿಗಳಿಗೆ ದಿಢೀರನೆ ಬೆಲೆ ಹೆಚ್ಚಿಸಿರುವ ಕ್ರಮವನ್ನು ಸರಕಾರವು ಗಂಭೀರವಾಗಿ ಪರಿಗಣಿಸಿದೆ. ಸಾರ್ವಜನಿಕರಿಗೆ ಆ ಬಗ್ಗೆ ದೂರುಗಳಿದ್ದಲ್ಲಿ ಅದನ್ನು ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ. ಕೃತಕ ಬೆಲೆಯೇರಿಕೆಯನ್ನು ಕೇಂದ್ರ ಸರಕಾರದ ಗಮನಕ್ಕೂ ತರಲಾಗುವುದು ಎಂದು ಮುಖ್ಯಮಂತ್ರಿ ನುಡಿದರು.
ಕೊಚ್ಚಿಯಲ್ಲಿ ಮಲಯಾಳದ ಯುವನಟಿಯನ್ನು ಅಪಹರಿಸಿ ಕಿರುಕುಳ ನೀಡಿದ ಪ್ರಕರಣದ ನಿಟ್ಟಿನಲ್ಲಿ ಪೊಲೀಸ್ ತನಿಖೆ ಸರಿಯಾದ ದಾರಿಯಲ್ಲೇ ಸಾಗುತ್ತಿದೆ. ಆರೋಪಿಗಳನ್ನು ಶೀಘ್ರದಲ್ಲೇ ಪೊಲೀಸರು ಬಂಧಿಸಲಿದ್ದಾರೆ. ತನಿಖೆಯ ದೃಷ್ಟಿಯಿಂದ ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯ ಕೊಡಲಾಗಿದೆ. ತಪ್ಪು ಮಾಡಿದವರು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಶಿಕ್ಷೆ ಅನುಭವಿಸಲೇ ಬೇಕು ಎಂದು ಪಿಣರಾಯಿ ವಿಜಯನ್ ಹೇಳಿದರು.